Vegetarian States: ಭಾರತದ ಈ 5 ದೊಡ್ಡ ರಾಜ್ಯಗಳಲ್ಲಿ ಸಸ್ಯಾಹಾರಿಗಳ ಸಂಖ್ಯೆಯೇ ಅಧಿಕ; ಏನಿರಬಹುದು ಕಾರಣ
- Vegetarian States: ಭಾರತದ ಕೆಲವು ರಾಜ್ಯಗಳಲ್ಲಿ ಈಗಲೂ ಸಸ್ಯಹಾರವೇ ಪ್ರಧಾನ. ಇಲ್ಲಿನ ಜನರು ಸಸ್ಯಾಹಾರ ಸೇವಿಸುವುದರಿಂದ ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳೇ ಅಧಿಕವಾಗಿರುವುದು ಕಂಡು ಬರುತ್ತದೆ. ಅದರ ವಿವರ ಇಲ್ಲಿದೆ
- Vegetarian States: ಭಾರತದ ಕೆಲವು ರಾಜ್ಯಗಳಲ್ಲಿ ಈಗಲೂ ಸಸ್ಯಹಾರವೇ ಪ್ರಧಾನ. ಇಲ್ಲಿನ ಜನರು ಸಸ್ಯಾಹಾರ ಸೇವಿಸುವುದರಿಂದ ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳೇ ಅಧಿಕವಾಗಿರುವುದು ಕಂಡು ಬರುತ್ತದೆ. ಅದರ ವಿವರ ಇಲ್ಲಿದೆ
(1 / 10)
ಭಾರತದ ಈ ರಾಜ್ಯಗಳು ಸಸ್ಯಾಹಾರದ ವೈವಿಧ್ಯತೆ ಮತ್ತು ಪ್ರಾಬಲ್ಯವನ್ನು ಪ್ರದರ್ಶಿಸುತ್ತವೆ. ಈ ಆಹಾರ ಸಂಸ್ಕೃತಿಯ ಹಿಂದೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಂಪ್ರದಾಯಿಕ ಅಂಶಗಳು ಮುಖ್ಯವಾಗುತ್ತವೆ.
(2 / 10)
ಈ ಪ್ರದೇಶಗಳಲ್ಲಿ ಹೆಚ್ಚಿನ ಶೇಕಡಾವಾರು ಸಸ್ಯಾಹಾರಿಗಳು ಭಾರತೀಯ ಸಮಾಜದಲ್ಲಿ ಸಸ್ಯಾಹಾರಿ ಆಹಾರದ ಮಹತ್ವವನ್ನು ಪ್ರತಿಬಿಂಬಿಸುತ್ತಾರೆ. ಇದಕ್ಕೆ ಹಲವಾರು ಕಾರಣಗಳನ್ನು ಆಯಾ ರಾಜ್ಯವಾರು ವಿಶೇಷತೆಗಳೊಂದಿಗೆ ಪಟ್ಟಿ ಮಾಡಲಾಗಿದೆ.
(3 / 10)
ರಾಜಸ್ಥಾನ ರಾಜ್ಯದಲ್ಲಿ ಶೇಕಡಾವಾರು ಜನಸಂಖ್ಯೆಯ ಸರಿಸುಮಾರು 71.17% ರಿಂದ 75% ರಷ್ಟು ಜನರು ಸಸ್ಯಾಹಾರಿಗಳು. ಇದಕ್ಕಿರುವ ಕಾರಣ ಬಲವಾದ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಜೈನ ಧರ್ಮದ ಪ್ರಭಾವವು ಅದರ ಹೆಚ್ಚಿನ ಸಸ್ಯಾಹಾರಿ ಜನಸಂಖ್ಯೆಗೆ ಕೊಡುಗೆ ನೀಡುತ್ತದೆ.
(4 / 10)
ಹರಿಯಾಣ ರಾಜ್ಯ ಕೂಡ ಶೇಕಡಾವಾರು ಜನಸಂಖ್ಯೆಯ ಸುಮಾರು 69.2% ರಿಂದ 80% ರಷ್ಟು ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ.ಇಲ್ಲಿಯೂ ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳು ಗಮನಾರ್ಹ ಅಂಶಗಳಾಗಿವೆ.
(5 / 10)
ನಂತರದ ಮೂರನೇ ಸ್ಥಾನದಲ್ಲಿ ಗುಜರಾತ್ ರಾಜ್ಯವಿದೆ. ಗುಜರಾತ್‌ನಲ್ಲಿ ಶೇಕಡಾವಾರು ಜನಸಂಖ್ಯೆಯ ಸರಿಸುಮಾರು 62.44% ರಿಂದ 61.9% ರಷ್ಟು ಜನರು ಸಸ್ಯಾಹಾರಿಗಳು. ಪ್ರಧಾನವಾಗಿ ಸಸ್ಯಾಹಾರಿ ಪಾಕಪದ್ಧತಿ ಮತ್ತು ಜೈನ ಧರ್ಮ ಮತ್ತು ಹಿಂದೂ ಧರ್ಮದ ಪ್ರಭಾವದಿಂದ ಈ ಆಹಾರ ಪದ್ದತಿ ಇಲ್ಲಿದೆ
(6 / 10)
ನಾಲ್ಕನೇ ಸ್ಥಾನದಲ್ಲಿ ಪಂಜಾಬ್ ರಾಜ್ಯ ಬರುತ್ತದೆ. ಪಂಜಾಬ್ ರಾಜ್ಯದ ಶೇಕಡಾವಾರು ಜನಸಂಖ್ಯೆಯ ಸುಮಾರು 58.58% ರಿಂದ 66.75% ರಷ್ಟು ಸಸ್ಯಾಹಾರಿಗಳು. ಸಿಖ್ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳು ಹೆಚ್ಚಿನ ಶೇಕಡಾವಾರು ಸಸ್ಯಾಹಾರಿಗಳಿಗೆ ಕೊಡುಗೆ ನೀಡುತ್ತವೆ.
(7 / 10)
ಇನ್ನು ಮತ್ತೊಂದು ದೊಡ್ಡ ರಾಜ್ಯವಾದ ಮಧ್ಯಪ್ರದೇಶ ಐದನೇ ಸ್ಥಾನದಲ್ಲಿದ್ದು ಶೇಕಡಾವಾರು ಜನಸಂಖ್ಯೆಯ ಸರಿಸುಮಾರು 46.93% ರಿಂದ 50% ಕ್ಕಿಂತ ಹೆಚ್ಚು ಜನರು ಸಸ್ಯಾಹಾರಿಗಳು. ಇಲ್ಲೂ ಕೂಡ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳೇ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಿರುವ ಪ್ರಮುಖ ಅಂಶಗಳಾಗಿವೆ.
(8 / 10)
ಉಳಿದಂತೆ ಹಿಮಾಚಲ ಪ್ರದೇಶ ರಾಜ್ಯವು ಸ್ಥಳೀಯ ಪದ್ಧತಿಗಳು ಮತ್ತು ಧಾರ್ಮಿಕ ಆಚರಣೆಗಳಿಂದ ಪ್ರಭಾವಿತವಾಗಿರುವ ಗಣನೀಯ ಸಸ್ಯಾಹಾರಿ ಜನಸಂಖ್ಯೆಗೆ ಹೆಸರುವಾಸಿಯಾಗಿದೆ.
(9 / 10)
ಮಹಾರಾಷ್ಟ್ರ ರಾಜ್ಯ ಕೂಡ ಗಮನಾರ್ಹ ಸಸ್ಯಾಹಾರಿ ಜನಸಂಖ್ಯೆ, ವಿಶೇಷವಾಗಿ ಪುಣೆ ಮತ್ತು ಮುಂಬೈನಂತಹ ನಗರ ಪ್ರದೇಶಗಳಲ್ಲಿ ಈ ಸಂಖ್ಯೆ ದೊಡ್ಡದಿದೆ.
ಇತರ ಗ್ಯಾಲರಿಗಳು