ಕನ್ನಡ ಸುದ್ದಿ  /  Photo Gallery  /  Know What Issues Congress Will Raise In Winter Session Of Parliament

Parliament Winter Session: ಚಳಿಗಾಲದ ಅಧಿವೇಶನಕ್ಕೆ ಕಾಂಗ್ರೆಸ್‌ ಪ್ಲ್ಯಾನ್‌ ಏನು?: ರಾಹುಲ್‌ ಭಾಗವಹಿಸುತ್ತಾರಾ?

  • ನವದೆಹಲಿ: ಮುಂಬರುವ ಡಿ07(ಬುಧವಾರ)ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು,ಕಲಾಪದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್‌ ತಂತ್ರ ರೂಪಿಸಿದೆ. ಸೋನಿಯಾ ಗಾಂಧಿ ನೇತೃತ್ವದ ಪಕ್ಷದ ಸ್ಟ್ರಾಟಜಿ ಗ್ರೂಪ್ ಈ ಕುರಿತು ಸಭೆ ನಡೆಸಿದ್ದು, ಹಲವು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ..

ನವದೆಹಲಿ: ಮುಂಬರುವ ಡಿ07(ಬುಧವಾರ)ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು,ಕಲಾಪದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್‌ ತಂತ್ರ ರೂಪಿಸಿದೆ. ಸೋನಿಯಾ ಗಾಂಧಿ ನೇತೃತ್ವದ ಪಕ್ಷದ ಸ್ಟ್ರಾಟಜಿ ಗ್ರೂಪ್ ಈ ಕುರಿತು ಸಭೆ ನಡೆಸಿದ್ದು, ಹಲವು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.. (ಸಂಗ್ರಹ ಚಿತ್ರ)
icon

(1 / 6)

ನವದೆಹಲಿ: ಮುಂಬರುವ ಡಿ07(ಬುಧವಾರ)ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು,ಕಲಾಪದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್‌ ತಂತ್ರ ರೂಪಿಸಿದೆ. ಸೋನಿಯಾ ಗಾಂಧಿ ನೇತೃತ್ವದ ಪಕ್ಷದ ಸ್ಟ್ರಾಟಜಿ ಗ್ರೂಪ್ ಈ ಕುರಿತು ಸಭೆ ನಡೆಸಿದ್ದು, ಹಲವು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.. (ಸಂಗ್ರಹ ಚಿತ್ರ)(HT_PRINT)

ಬೆಲೆ ಏರಿಕೆ ಮತ್ತು ನಿರುದ್ಯೋಗ, ಚೀನಾ ಗಡಿ ವಿವಾದ, ನ್ಯಾಯಾಧೀಶರ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನೊಂದಿಗೆ ಕೇಂದ್ರದ ಇತ್ತೀಚಿನ ಮುಖಾಮುಖಿಗಳ ಬಗ್ಗೆ, ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)
icon

(2 / 6)

ಬೆಲೆ ಏರಿಕೆ ಮತ್ತು ನಿರುದ್ಯೋಗ, ಚೀನಾ ಗಡಿ ವಿವಾದ, ನ್ಯಾಯಾಧೀಶರ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನೊಂದಿಗೆ ಕೇಂದ್ರದ ಇತ್ತೀಚಿನ ಮುಖಾಮುಖಿಗಳ ಬಗ್ಗೆ, ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)(PTI)

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನುಬದ್ಧ ಖಾತರಿಯ ಬೇಡಿಕೆಯನ್ನು ಕೂಡ ಕಾಂಗ್ರೆಸ್‌ ಸದನದಲ್ಲಿ ಮಂಡಿಸಲಿದೆ ಎನ್ನಲಾಗಿದೆ. ಕೃಷಿ ಕ್ಷೇತ್ರದ ಖಾಸಗೀಕರಣವನ್ನು ವಿರೋಧಿಸುವ ಬಗ್ಗೆಯೂ ಕಾಂಗ್ರೆಸ್‌ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಸಂಗ್ರಹ ಚಿತ್ರ)
icon

(3 / 6)

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನುಬದ್ಧ ಖಾತರಿಯ ಬೇಡಿಕೆಯನ್ನು ಕೂಡ ಕಾಂಗ್ರೆಸ್‌ ಸದನದಲ್ಲಿ ಮಂಡಿಸಲಿದೆ ಎನ್ನಲಾಗಿದೆ. ಕೃಷಿ ಕ್ಷೇತ್ರದ ಖಾಸಗೀಕರಣವನ್ನು ವಿರೋಧಿಸುವ ಬಗ್ಗೆಯೂ ಕಾಂಗ್ರೆಸ್‌ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಸಂಗ್ರಹ ಚಿತ್ರ)(ANI)

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಎತ್ತಿಹಿಡಿದ ಆರ್ಥಿಕವಾಗಿ ದುರ್ಬಲ ವರ್ಗದ ಶೇ.10 ರಷ್ಟು ಕೋಟಾ ಕುರಿತು ನಡೆಯಬಹುದಾದ ಚರ್ಚೆಯಲ್ಲಿ, ಎಚ್ಚರಿಕೆಯ ಹೆಜ್ಜೆಯನ್ನಿಡಲು ಕಾಂಗ್ರೆಸ್‌ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. (ಸಂಗ್ರಹ ಚಿತ್ರ)
icon

(4 / 6)

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಎತ್ತಿಹಿಡಿದ ಆರ್ಥಿಕವಾಗಿ ದುರ್ಬಲ ವರ್ಗದ ಶೇ.10 ರಷ್ಟು ಕೋಟಾ ಕುರಿತು ನಡೆಯಬಹುದಾದ ಚರ್ಚೆಯಲ್ಲಿ, ಎಚ್ಚರಿಕೆಯ ಹೆಜ್ಜೆಯನ್ನಿಡಲು ಕಾಂಗ್ರೆಸ್‌ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. (ಸಂಗ್ರಹ ಚಿತ್ರ)(ANI)

ಇಷ್ಟೇ ಅಲ್ಲದೇ ದೇಶದ ಪ್ರಧಾನ ವೈದ್ಯಕೀಯ ಸಂಸ್ಥೆಯಾದ ದೆಹಲಿಯ ಏಮ್ಸ್ ಮೇಲೆ, ಇತ್ತೀಚೆಗೆ ನಡೆದ ಸೈಬರ್-ಭಯೋತ್ಪಾದನಾ ದಾಳಿಯ ಬಗ್ಗೆ ಕಾಂಗ್ರೆಸ್‌ ಸದನದಲ್ಲಿ ಪ್ರಶ್ನೆ ಎತ್ತಲಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)
icon

(5 / 6)

ಇಷ್ಟೇ ಅಲ್ಲದೇ ದೇಶದ ಪ್ರಧಾನ ವೈದ್ಯಕೀಯ ಸಂಸ್ಥೆಯಾದ ದೆಹಲಿಯ ಏಮ್ಸ್ ಮೇಲೆ, ಇತ್ತೀಚೆಗೆ ನಡೆದ ಸೈಬರ್-ಭಯೋತ್ಪಾದನಾ ದಾಳಿಯ ಬಗ್ಗೆ ಕಾಂಗ್ರೆಸ್‌ ಸದನದಲ್ಲಿ ಪ್ರಶ್ನೆ ಎತ್ತಲಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)(HT_PRINT)

ಡಿ.07(ಬುಧವಾರ)ರಿಂದ ಪ್ರಾರಂಭವಾಗುವ ಅಧಿವೇಶನ ಡಿ. 29ರವರೆಗೆ ನಡೆಯಲಿದ್ದು, ಭಾರತ್‌ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಈ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್‌ ಮೂಲಗಳು ಖಚಿತಪಡಿಸಿವೆ. (ಸಂಗ್ರಹ ಚಿತ್ರ)
icon

(6 / 6)

ಡಿ.07(ಬುಧವಾರ)ರಿಂದ ಪ್ರಾರಂಭವಾಗುವ ಅಧಿವೇಶನ ಡಿ. 29ರವರೆಗೆ ನಡೆಯಲಿದ್ದು, ಭಾರತ್‌ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಈ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್‌ ಮೂಲಗಳು ಖಚಿತಪಡಿಸಿವೆ. (ಸಂಗ್ರಹ ಚಿತ್ರ)(ANI Pic Service)


ಇತರ ಗ್ಯಾಲರಿಗಳು