Water Metro: ಟ್ರ್ಯಾಕ್ ಮೇಲಷ್ಟೇ ಅಲ್ಲ ನೀರಿನ ಮೇಲೂ ಓಡುತ್ತೆ ಮೆಟ್ರೊ; ಹೀಗಿದೆ ದೇಶದ ಮೊದಲ ವಾಟರ್ ಮೆಟ್ರೊದ ಝಲಕ್
Water Metro: ಟ್ರ್ಯಾಕ್ ಮೇಲೆ ಓಡೋ ಮೆಟ್ರೊವನ್ನು ನೋಡಿದ್ದೇವೆ, ಪ್ರಯಾಣ ಕೂಡ ಮಾಡಿರುತ್ತೇವೆ. ಆದರೆ ಇನ್ನು ಮುಂದೆ ನೀರಿನಲ್ಲಿ ಚಲಿಸುವ ಮೆಟ್ರೊದಲ್ಲಿ ಕೂಡ ಪ್ರಯಾಣ ಮಾಡಬಹುದು. ಇಂತಹ ವಿಶಿಷ್ಟ ಮೆಟ್ರೊ ಇರೋದು ಪಕ್ಕದ ಕೇರಳ ರಾಜ್ಯದಲ್ಲಿ. ಇಂದು (ಏಪ್ರಿಲ್ 25) ಪ್ರಧಾನಿ ಮೋದಿ ಕೇರಳದ ಕೊಚ್ಚಿಯಲ್ಲಿ ʼವಾಟರ್ ಮೆಟ್ರೊʼ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ.
(1 / 7)
ಕೇರಳ ಪ್ರವಾಸದಲ್ಲಿರುವ ಮೋದಿ ಇಂದು ದೇಶದ ಮೊದಲ ವಾಟರ್ ಮೆಟ್ರೊಗೆ ಹಸಿರು ನಿಶಾನೆ ತೋರಿದ್ದಾರೆ. ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಕೇರಳದಲ್ಲಿ ವಾಟರ್ ಮೆಟ್ರೊವನ್ನು ಪರಿಚಯಿಸಲಾಗಿದೆ. ʼಈ ಮೆಟ್ರೊವು ರಾಜ್ಯದ ಜಲಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿದೆ ಹಾಗೂ ಇದರಿಂದ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲಿದೆʼ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (HT)
(2 / 7)
ಈ ಮೆಟ್ರೋ ಯೋಜನೆಯಡಿ ಒಟ್ಟು ಎಂಟು ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳು ನದಿ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿವೆ. ಈ ಹೈಬ್ರಿಡ್ ಬೋಟ್‌ಗಳನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ತಯಾರಿಸಿದೆ.(PTI)
(3 / 7)
ಕೇರಳ ಸರ್ಕಾರದ ಈ ಕನಸಿನ ಯೋಜನೆಗೆ ಕೇರಳ ರಾಜ್ಯ ಸರ್ಕಾರ ಮತ್ತು ಜರ್ಮನಿಯ ಕೆಎಫ್‌ಡಬ್ಲ್ಯೂ ಸಂಸ್ಥೆಯಿಂದ ಅನುದಾನ ದೊರಕಿತ್ತು. ಈ ವಾಟರ್ ಮೆಟ್ರೊ ಕೇರಳ ಸುತ್ತಲಿನ ಹತ್ತು ದ್ವೀಪಗಳನ್ನು ಸಂಪರ್ಕಿಸಲಿದೆ. (PTI)
(4 / 7)
ಈ ಯೋಜನೆಯು ಸುಮಾರು 78 ಹೈಬ್ರಿಡ್ ಎಲೆಕ್ಟ್ರಿಕ್ ಬೋಟ್‌ಗಳು ಮತ್ತು 38 ಟರ್ಮಿನಲ್‌ಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ. ಮೊದಲ ಹಂತದಲ್ಲಿ, ಕೊಚ್ಚಿ ವಾಟರ್ ಮೆಟ್ರೊ ಸೇವೆಯು ಹೈಕೋರ್ಟ್-ವೈಪಿನ್ ಟರ್ಮಿನಲ್‌ಗಳು ಮತ್ತು ವೈಟ್ಟಿಲಾ-ಕಾಕ್ಕನಾಡ್ ಟರ್ಮಿನಲ್‌ಗಳ ನಡುವೆ ಕಾರ್ಯನಿರ್ವಹಿಸಲಿದೆ. (PTI)
(5 / 7)
ಕೊಚ್ಚಿ ವಾಟರ್ ಮೆಟ್ರೊದಲ್ಲಿ ಒಂದು ದಿಕ್ಕಿನ ಪ್ರಯಾಣಕ್ಕೆ ₹20 ಪಾವತಿಸಬೇಕಾಗುತ್ತದೆ. ಪ್ರತಿದಿನ ಈ ಮೆಟ್ರೊದಲ್ಲಿ ಪ್ರಯಾಣ ಮಾಡುವವರಿಗೆ ವಾರ ಅಥವಾ ಮಾಸಿಕ ಪಾಸ್‌ಗಳು ಸೌಲಭ್ಯ ಕೂಡ ಇದೆ. ಇಷ್ಟೇ ಅಲ್ಲದೆ ಕೊಚ್ಚಿ ಮೆಟ್ರೊ ಹಾಗೂ ವಾಟರ್ ಮೆಟ್ರೊ ಎರಡರಲ್ಲೂ ಪ್ರಯಾಣಿಸುವವರಿಗೆ ಒನ್ ಕಾರ್ಡ್ ಬಳಕೆಯ ಸೌಲಭ್ಯವನ್ನು ಕೂಡ ಒದಗಿಸಲಾಗಿದೆ.
(6 / 7)
ಈ ಮೆಟ್ರೋ ಬೋಟ್‌ಗಳು ಲಿಥಿಯಂ ಟೈಟಾನೈಟ್ ಸ್ಪಿನೆಲ್ ಬ್ಯಾಟರಿಗಳ ಸಹಾಯದಿಂದ ಚಲಿಸುತ್ತವೆ. ಇದರ ಚಾಲನೆಗೆ ಡೀಸೆಲ್ ಸೇರಿದಂತೆ ಯಾವುದೇ ಇಂಧನವನ್ನು ಬಳಸದೇ ಇರುವ ಕಾರಣ ಇವುಗಳು ಪರಿಸರ ಸ್ನೇಹಿ ಕೂಡ ಹೌದು. ಈ ಮೆಟ್ರೋ ರೈಲಿನಲ್ಲಿ ಎಸಿ ಸೌಲಭ್ಯ, ಅಗಲವಾದ ಕಿಟಕಿಗಳೂ ಇರುತ್ತವೆ.
ಇತರ ಗ್ಯಾಲರಿಗಳು