Chiklihole Dam: ಕೊಡಗು ಮಳೆಯಿಂದ ಕಳೆಗಟ್ಟಿದ ಚಿಕ್ಲಿಹೊಳೆ, ಜಲವೈಭವ ಹೇಗಿದೆ photos
Kodagu News ಕರ್ನಾಟಕದಲ್ಲಿ ಮುಂಗಾರು ಮಳೆಯಿಂದಾಗಿ ಚಿಕ್ಕಪುಟ್ಟ ಜಲಾಶಯಗಳಿಗೂ ಜೀವ ಕಳೆ ಬಂದಿದೆ. ಕೊಡಗಿನ ಚಿಕ್ಲಿಹೊಳೆ ಕೂಡ ಅದರಲ್ಲಿ ಒಂದು.
(1 / 6)
ಕಾವೇರಿ ಕಣಿವೆಯ ಚಿಕ್ಕ ಜಲಾಶಯಗಳಲ್ಲಿ ಒಂದಾಗಿರುವ ಕೊಡಗಿನ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿ ಆಗಿದೆ. ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಹಸಿರು ಹಾಗೂ ನೀರಿನಿಂದ ಕಂಗೊಳಿಸುತ್ತಿದೆ.
(2 / 6)
ಈ ಬಾರಿಯ ಬೇಸಿಗೆ ಅವಧಿಯಲ್ಲಿ ಖಾಲಿ ಜಲಾಶಯ ಕಂಡು ಬೇಸರದಿಂದಲೇ ಹಿಂದಿರುಗುತ್ತಿದ್ದವರಿಗೆ ಈಗ ಮಳೆರಾಯನ ಕೃಪೆಯಿಂದ ಜಲಾಶಯ ಭರ್ತಿಯಾಗಿ ಪ್ರವಾಸಿಗರಿಗೂ ಅಹ್ಲಾದಕರ ವಾತಾವರಣ ಸೃಷ್ಟಿಸಿದೆ.
(3 / 6)
ವಿಶೇಷ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟೆ ತುಂಬಿದಾಗ ಅರ್ಧಚಂದ್ರಾಕತಿಯ ಕಟ್ಟೆಯ ಮುಖಾಂತರ ನೀರು ಹೊರಬೀಳುವ ದೃಶ್ಯ ಆಕರ್ಷಕವಾಗಿರುತ್ತದೆ. ಈಗಲೂ ಅಂತಹ ಸನ್ನಿವೇಶ ನಿರ್ಮಾಣವಾಗಿದೆ.
(4 / 6)
ಕುಶಾಲನಗರ ತಾಲೂಕು ರಂಗಸಮುದ್ರದಲ್ಲಿ ಇರುವ ಚಿಕ್ಲಿಹೊಳೆ ಜಲಾಶಯ ನಿರ್ಮಾಣ ಶುರುವಾಗಿದ್ದು ಎಪ್ಪತ್ತರ ದಶಕದ ಅಂತ್ಯದಲ್ಲಿ. ಮುಗಿದಿದ್ದು ಎಂಬತ್ತರ ದಶಕದ ಆರಂಭದಲ್ಲಿ. ನಾಲ್ಕು ದಶಕದಿಂದ ಈ ಜಲಾಶಯ ಬಳಕೆಯಲ್ಲಿದೆ.
(5 / 6)
ಅರ್ಧ ಟಿಎಂಸಿ ನೀರು ಸಂಗ್ರಹಿಸಬಹುದಾದ ಚಿಕ್ಲಿಹೊಳೆ ತುಂಬಿದಾಗ ಹೊರಹರಿಯುವ ನೀರು ಕಾವೇರಿ ನದಿಯನ್ನು ಸೇರುತ್ತದೆ. ಇದನ್ನು ನೋಡುವುದೇ ಆನಂದದಾಯಕ.
ಇತರ ಗ್ಯಾಲರಿಗಳು