ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kodagu News: ತವರಲ್ಲಿಯೇ ಸೊರಗಿ ಹೋದಳು ಜೀವ ನದಿ ಕಾವೇರಿ, ಕೊಡಗಲ್ಲಿ ಹೇಗಿದೆ ನದಿ ಸ್ಥಿತಿ ಇಲ್ಲಿ ನೋಡಿ

Kodagu News: ತವರಲ್ಲಿಯೇ ಸೊರಗಿ ಹೋದಳು ಜೀವ ನದಿ ಕಾವೇರಿ, ಕೊಡಗಲ್ಲಿ ಹೇಗಿದೆ ನದಿ ಸ್ಥಿತಿ ಇಲ್ಲಿ ನೋಡಿ

  • ಕನ್ನಡ ನಾಡಿನ ಜೀವ ನದಿ ಕಾವೇರಿ ಎನ್ನುವ ಹಾಡು ಕೇಳುವಾಗ ಬಳುಕುವ ಸನ್ನಿವೇಶ ಕಣ್ಣ ಮುಂದೆ ಬಾರದೇ ಇರದು. ಈಗ ಅದು ತದ್ವಿರುದ್ದ. ಕಳೆದ ಬಾರಿ ಮಳೆಯ ಕೊರತೆ ಪರಿಣಾಮ ಕೊಡಗಿನಲ್ಲಿಯೇ ಕಾವೇರಿ ಸೊರಗಿ ಹೋಗಿದ್ದಾಳೆ. ಬೇಸಿಗೆಗೆ ಪ್ರವಾಸಿಗರಿಗೂ ನಿರಾಸೆಯಾಗಿದೆ. ಇದರ ಚಿತ್ರನೋಟ ಇಲ್ಲಿದೆ.

ಕೊಡಗಿನವರಿಗೆ ಮಾತ್ರ ಕಾವೇರಿ ಜೀವ ನದಿಯಲ್ಲ. ಬೆಂಗಳೂರು, ಮೈಸೂರು ಸಹಿತ ಹತ್ತಕ್ಕೂ ಹೆಚ್ಚು ಜಿಲ್ಲೆ, ನೆರಯ ತಮಿಳುನಾಡಿಗೂ ಕಾವೇರಿ ಬೇಕೇಬೇಕು.
icon

(1 / 6)

ಕಾವೇರಿ ನದಿ ಉಗಮವಾಗುವುದು ಕೊಡಗಿನ ತಲಕಾವೇರಿಯಿಂದ. ಅಲ್ಲಿಂದ ಹರಿದು ಆರು ನೂರು ಕಿ.ಮಿ ದೂರ ಸಂಚರಿಸುವ ಕಾವೇರಿ ಹಲವು ಕಡೆ ಭವ್ಯತೆ ಮರೆಯುತ್ತಾಳೆ. ಅದರಲ್ಲೂ ಕೊಡಗಿನಲ್ಲಿ ಕಾವೇರಿ ವೈಭವ ಜೋರು.
icon

(2 / 6)

ಮಳೆಗಾಲದಲ್ಲಿ ಎಲ್ಲ ಭಾಗದಲ್ಲೂ ಕಾವೇರಿ ಮೈದುಂಬಿ ಹರಿಯುವುದು ಸಾಮಾನ್ಯ., ಅದರಲ್ಲೂ ಕೊಡಗಿನ ಹಸಿರಿನ ಮಧ್ಯೆ ಹರಿಯುವ ಸನ್ನಿವೇಶವೇ ಬೇರೆ. 
icon

(3 / 6)

ಬೇಸಿಗೆಯಲ್ಲಿ ಕಾವೇರಿ ನದಿ ನೀರಿನ ಪ್ರಮಾಣ ತಗ್ಗಿದರೂ ಒಣಗುವ ಹಂತಕ್ಕೆ ಹೋದದ್ದು ಅತಿ ಕಡಿಮೆ. ಬಹಳ ವರ್ಷಗಳ ನಂತರ ಕಾವೇರಿ ನದಿ ಕುಶಾಲನಗರ ಸಮೀಪದ ಪ್ರವಾಸಿ ತಾಣ ನಿಸರ್ಗಧಾಮ, ದುಬಾರೆಯಲ್ಲಿ ಒಣಗಿ ನಿಂತಿದೆ.
icon

(4 / 6)

ಯಾವುದೇ ಕಾಲುವೆಯಲ್ಲಾದರೂ ನೀರು ಇದ್ದೇ ಇರುತ್ತದೆ. ಆದರೆ ಈ ಬಾರಿ ಕಾಲುವೆಗಿಂತಲೂ ಸಣ್ಣದಾಗಿ ನೀರಿನ ಝರಿ ಕೊಡಗಿನ ಹಲವೆಡೆ ಹರಿಯವುದು ಕಂಡು ಬಂದಿದೆ. 
icon

(5 / 6)

ಜಾಗತಿಕ ತಾಪಮಾನ,. ಹವಾಮಾನ ವೈಪರಿತ್ಯದಂತಹ ಪರಿಣಾಮಗಳು ಕೊಡಗಿನ ಪರಿಸರದ ಮೇಲೂ ಆಗಿ ಈಗ ಅದು ಕಾವೇರಿ ನದಿ ಬತ್ತುವ ಮೂಲಕ ಪ್ರದರ್ಶನಗೊಳ್ಳುತ್ತಿದೆ ಎನ್ನುವುದು ತಜ್ಞರ ಅಭಿಮತ.
icon

(6 / 6)

IPL_Entry_Point

ಇತರ ಗ್ಯಾಲರಿಗಳು