Kodagu News: ಸಿದ್ದರಾಮಯ್ಯ ಬಜೆಟ್ ಆಲಿಸಲು ನಾಗರಹೊಳೆ ಕೆರೆಯಿಂದ ಎದ್ದು ಬಂದ ಹುಲಿರಾಯ ! photos
- ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದರು. ಪ್ರತಿಪಕ್ಷಗಳ ನಡೆ ವಿರುದ್ದ ಹುಲಿಯಂತೆಯೇ ಘರ್ಜಿಸುತ್ತಿದ್ದರು. ಇದೇ ವೇಳೆ ನಾಗರಹೊಳೆ ಕುಂತೂರು ಕೆರೆಯಲ್ಲಿ ನಿರುಮ್ಮಳವಾಗಿ ಮಲಗಿದ್ದ ಹುಲಿರಾಯನೂ ಎದ್ದು ಬಂದ. ಸಿದ್ದರಾಮಯ್ಯ ಬಜೆಟ್‌ನಲ್ಲಿ ಅರಣ್ಯ ಇಲಾಖೆಗೆ ಏನು ಅನುದಾನ ನೀಡಿರಬಹುದೆಂಬ ತಿಳಿಯುವ ಕುತೂಹಲ ಹುಲಿರಾಯನ ಮುಖಭಾವದಲ್ಲಿತ್ತು.

(1 / 6)
ಕೊಡಗು ಮೈಸೂರು ಜಿಲ್ಲೆಯಲ್ಲಿ ಹಂಚಿಹೋಗಿರುವ ಹೆಚ್ಚು ಹುಲಿ, ಆನೆಗಳನ್ನು ಹೊಂದಿರುವ ನಿತ್ಯ ಹರಿದ್ವರ್ಣದ ಕಾಡಿನಿಂದ ಕೂಡಿರುವ ನಾಗರಹೊಳೆ ಸಫಾರಿಯೇ ಚಂದ.
(2 / 6)
ಕರ್ನಾಟಕ ಅರಣ್ಯ ಇಲಾಖೆ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ವಾಹನಗಳ ವ್ಯವಸ್ಥೆಯೂ ಇದೆ. ಸಫಾರಿ ಹೋದವರಿಗೆ ಹುಲಿ ಸಹಿತ ಹಲವು ಪ್ರಾಣಿಗಳ ದರ್ಶನ ಸಾಮಾನ್ಯ.
(3 / 6)
ನಾಗರಹೊಳೆಯ ವ್ಯಾಪ್ತಿಯ ಕೊಡಗು ಜಿಲ್ಲೆಯಲ್ಲಿ ಬರುವ ಕಲ್ಲಹಳ್ಳ ವನ್ಯಜೀವಿ ವಲಯದ ಕುಂತೂರುಕೆರೆಯ ಭಾಗದಲ್ಲಿ ಸಫಾರಿ ಹೋದವರಿಗೆ ಹುಲಿ ದರ್ಶನವಾಗಿತ್ತು.
(4 / 6)
ಕೆರೆಯಲ್ಲಿ ಮಲಗಿದ್ದ ಹುಲಿರಾಯ ವಾಹನ ನೋಡುತ್ತಲೇ ಮೇಲೆದ್ದು ಬಂದಿದ್ದ. ನಿರುಮ್ಮಳನಾಗಿ ನಿಂತ ಹುಲಿರಾಯನ ಕಂಡವರಿಗೂ ಖುಷಿಯೋ ಖುಷಿ
ಇತರ ಗ್ಯಾಲರಿಗಳು