Kodagu Huttari:ಕೊಡಗು, ಮೈಸೂರಲ್ಲಿ ಹುತ್ತರಿ: ಎಲ್ಲೆಲ್ಲೂ ಹೊಸ ಪೈರು ಬರ ಮಾಡಿಕೊಳ್ಳುವ ಸಂತಸ ಸಡಗರ
- ಕೊಡಗಲ್ಲಿ( Coorg) ಮಾತ್ರವಲ್ಲ. ಕೊಡಗಿನವರು ಹೆಚ್ಚು ಇರುವ ಮೈಸೂರಲ್ಲೂ ಈಗ ಹುತ್ತರಿ( Huttari) ಸಡಗರ. ಕೊಯ್ಲು ಪೈರು ಕತ್ತರಿಸಿ ಮೊದಲ ಅಡುಗೆ ಸವಿಯುವ ಸಂಭ್ರಮ. ಕೊಡಗಿನ ಬಹುಕೇತ ಕಡೆಗಳಲ್ಲಿ ಸೋಮವಾರ ರಾತ್ರಿಯಿಂದ ಶುರುವಾಗಿರುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆದಿವೆ. ಮೈಸೂರಿನಲ್ಲೂ ಹುತ್ತರಿ ಹಬ್ಬವನ್ನು ಕೊಡಗಿನವರು ಆಚರಿಸಿದ್ದಾರೆ. ಹೀಗಿದ್ದವು ಆ ಕ್ಷಣಗಳು.
- ಕೊಡಗಲ್ಲಿ( Coorg) ಮಾತ್ರವಲ್ಲ. ಕೊಡಗಿನವರು ಹೆಚ್ಚು ಇರುವ ಮೈಸೂರಲ್ಲೂ ಈಗ ಹುತ್ತರಿ( Huttari) ಸಡಗರ. ಕೊಯ್ಲು ಪೈರು ಕತ್ತರಿಸಿ ಮೊದಲ ಅಡುಗೆ ಸವಿಯುವ ಸಂಭ್ರಮ. ಕೊಡಗಿನ ಬಹುಕೇತ ಕಡೆಗಳಲ್ಲಿ ಸೋಮವಾರ ರಾತ್ರಿಯಿಂದ ಶುರುವಾಗಿರುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆದಿವೆ. ಮೈಸೂರಿನಲ್ಲೂ ಹುತ್ತರಿ ಹಬ್ಬವನ್ನು ಕೊಡಗಿನವರು ಆಚರಿಸಿದ್ದಾರೆ. ಹೀಗಿದ್ದವು ಆ ಕ್ಷಣಗಳು.
(1 / 9)
ಕೊಡವ ಭಾಷೆಯಲ್ಲಿ ಹುತ್ತರಿ ಅಥವಾ ಪುತ್ತರಿ ಎಂದರೆ ಪುದಿಯ ಅರಿ ಎಂದರ್ಥ. ಅಂದರೆ ಹೊಸ ಅಕ್ಕಿ ಎಂದು. ಧಾನ್ಯಲಕ್ಷ್ಮಿಯಾದ ಭತ್ತವನ್ನು ಗದ್ದೆಯಿಂದ ಕೊಯ್ದು ತಂದು ಪೂಜಿಸುತ್ತಾರೆ. ಅದರಿಂದ ಸಿಹಿ ಖಾದ್ಯ ತಯಾರಿಸಿ ಸವಿಯುವ ಸಂಪ್ರದಾಯ ಈ ಹಬ್ಬದಲ್ಲಿದೆ. ಹುತ್ತರಿ ಹಬ್ಬವನ್ನು ರೋಹಿಣಿ ನಕ್ಷತ್ರವಿರುವ ಹಣ್ಣಿಮೆಯ ರಾತ್ರಿಯಂದು ಆಚರಿಸಲಾಗುತ್ತದೆ. ಒಂದುವೇಳೆ ರೋಹಿಣಿ ನಕ್ಷತ್ರವಿಲ್ಲದಿದ್ದರೆ, ಕೃತ್ತಿಕಾ ನಕ್ಷತ್ರವೂ ಶುಭವೆಂದು ನಂಬಲಾಗಿದೆ.
(2 / 9)
ತಮ್ಮದೇ ಜಮೀನುಗಳಲ್ಲಿ ಇಲ್ಲದೇ ಊರಿನಲ್ಲಿ ಬೆಳೆದ ಮೊದಲ ಪೈರನ್ನು ಭತ್ತದ ಸಮೇತ ತೆಗೆದುಕೊಂಡು ಬಂದು ಪೂಜಿಸುವುದು ಕೊಡಗಿನಲ್ಲಿ ವಾಡಿಕೆ. ಇದನ್ನೇ ಹುತ್ತರಿ ಅಥವಾ ಪುತ್ತರಿ ಎಂದು ಹೇಳುತ್ತಾರೆ.
(3 / 9)
ಕೊಡಗಿನ ಯಾವುದೇ ಊರಿಗೆ ಹೋದರೂ ಹೀಗೆ ಪೈರು ಕೈಯಲ್ಲಿ ಹಿಡಿದು ಹೋಗುವುದು ಹುತ್ತರಿ ಹಬ್ಬವನ್ನು ಸಾರಿ ಹೇಳುತ್ತದೆ. ಸೋಮವಾರ ಬಹುತೇಕ ಕಡೆಗಳಲ್ಲಿ ಹೀಗೆ ಮೊದಲನೇ ಪೈರನ್ನು ಪೂಜಿಸಿ ಮೆರವಣಿಗೆ ಮೂಲಕ ತಂತಮ್ಮ ಮನೆಗಳು ಇಲ್ಲವೇ ಸಮುದಾಯದ ಭವನಗಳಿಗೆ ತೆಗೆದುಕೊಂಡು ಹೋಗಿ ಪೂಜಿಸಲಾಗುತ್ತದೆ.
(4 / 9)
ಕೊಡಗಿನವರು ಕಾಫಿ ಮಾತ್ರವಲ್ಲದೇ ಭತ್ತವನ್ನೂ ಬೆಳೆಯುತ್ತಾರೆ. ಭತ್ತದ ಪೈರು ಬಂತೆಂದರೆ ಹುತ್ತರಿ ಬಂದಿತು ಎಂದೇ ಅರ್ಥ. ಹುತ್ತರಿಯಲ್ಲಿ ಮೊದಲ ಪೈರನ್ನು ತಂದು ಎಲ್ಲರ ಮನೆಯಲ್ಲಿ ಭತ್ತವನ್ನು ಕುಟ್ಟಿ ಅದರ ಅಡುಗೆ ಮಾಡಿ ಸೇವಿಸಲಾಗುತ್ತದೆ.
(5 / 9)
ಕೊಡಗಿನ ಪ್ರಮುಖ ಹಬ್ಬ ಹುತ್ತರಿ. ಅಲ್ಲಿ ಪೈರು ಕತ್ತರಿಸಿಕೊಂಡು ಬಂದ ನಂತರ ಮನೆಯಲ್ಲಿ ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಕೋವಿಯನ್ನು ಸಿಡಿಸಿ ಸಂಭ್ರಮಿಸುವ ಪರಿಪಾಠವೂ ಕೊಡಗಿನಲ್ಲಿ ನಡೆದುಕೊಂಡು ಬಂದಿದೆ.
(6 / 9)
ಕೊಡಗಿನ ಮಡಿಕೇರಿಯಲ್ಲಿರು ಅರೆಭಾಷಾ ಸಮಿತಿಯವರು ಕದಿರು ತೆಗೆದುಕೊಂಡು ಬಂದು ಎಲ್ಲಾ ಕುಟುಂಬಗಳ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹಿರಿಯರು ಕಿರಿಯರು ಎನ್ನದೇ ಹುತ್ತರಿಯಲ್ಲಿ ಭಾಗಿಯಾದರು.
(7 / 9)
ಕೊಡಗಿನ ಅರೆಭಾಷಾ ಸಮಿತಿ ಆಯೋಜಿಸಿದ್ದ ಹುತ್ತರಿ ಕಾರ್ಯಕ್ರಮದಲ್ಲಿ ಕದಿರು ಕಡಿದು ಮೆರವಣಿಗೆ ಮೂಲಕ ತಂದು ಹೊಸ ಪೈರು ಬರ ಮಾಡಿಕೊಳ್ಳುವ ಸಡಗರ ಹೀಗಿತ್ತು.
(8 / 9)
ಮೈಸೂರಿನ ಕೊಡವ ಸಮಾಜ ವಿಜಯನಗರ ಬಡಾವಣೆಯಲ್ಲಿ ಕದಿರು ತಂದು ಪೂಜಿಸುವ ಮೂಲಕ ಹುತ್ತರಿ ಹಬ್ಬವನ್ನು ಹೊಸ ಧಾನ್ಯವನ್ನು ಮನೆ ತುಂಬಿಸಿಕೊಳ್ಳುವ ಸಂಪ್ರದಾಯದಂತೆ ಆಚರಿಸಿದ್ದು ಹೀಗೆ.
ಇತರ ಗ್ಯಾಲರಿಗಳು