Kodagu News: ಕೊಡಗು ಉಳಿಸಿ ಅಭಿಯಾನಕ್ಕೆ ಮತ್ತೆ ಬಲ, ಹೇಗಿದೆ ಹೋರಾಟ photos
- Save Kodagu ದಕ್ಷಿಣದ ಕಾಶ್ಮೀರ ಎಂದು ಕರೆಯುವ ಕೊಡಗು ವಾಣಿಜ್ಯೀಕರಣದಿಂದ ನಲುಗುತ್ತಿದೆ. ಇದನ್ನು ತಗ್ಗಿಸಿ ಕೊಡಗಿನ ಅನನ್ಯತೆ ಉಳಿಸುವಂತಹ ಕೊಡಗು ಉಳಿಸಿ ಅಭಿಯಾನ ಮತ್ತೆ ಜೋರಾಗಿದೆ.
- Save Kodagu ದಕ್ಷಿಣದ ಕಾಶ್ಮೀರ ಎಂದು ಕರೆಯುವ ಕೊಡಗು ವಾಣಿಜ್ಯೀಕರಣದಿಂದ ನಲುಗುತ್ತಿದೆ. ಇದನ್ನು ತಗ್ಗಿಸಿ ಕೊಡಗಿನ ಅನನ್ಯತೆ ಉಳಿಸುವಂತಹ ಕೊಡಗು ಉಳಿಸಿ ಅಭಿಯಾನ ಮತ್ತೆ ಜೋರಾಗಿದೆ.
(1 / 6)
ಕರ್ನಾಟಕದಲ್ಲಿಯೇ ವಿಭಿನ್ನ ತಾಣವಾಗಿರುವ ಕೊಡಗು ಪ್ರವಾಸಿಗರ ಸ್ವರ್ಗವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಕೊಡಗು ಹಲವು ವೈಪರಿತ್ಯಗಳಿಂದ ನಲುಗಿದೆ. ಇದಕ್ಕಾಗಿ ಕೊಡಗು ಉಳಿಸಿ ಚಳವಳಿ ಜೋರಾಗಿದೆ.
(2 / 6)
ಕೊಡಗಿನ ಜಲಪಾತ, ಸುಂದರ ತಾಣ ಸೇರಿದಂತೆ ಪ್ರವಾಸಿ ಸ್ಥಳ ನೋಡಲೂ ಜನ ಬಂದರೂ ಪ್ರವಾಸೋದ್ಯಮದ ಹೆಸರಿನಲ್ಲಿ ಮಿತಿ ಮೀರಿದ ಚಟುವಟಿಕೆ ನಡೆದಿರುವುದು ಆತಂಕ ಹುಟ್ಟು ಹಾಕಿದೆ.
(3 / 6)
ಕೊಡಗಿನಲ್ಲಿ ಪ್ರವಾಸೋದ್ಯಮದ ನೆಪದಲ್ಲಿ ಮಿತಿ ಮೀರಿದ ಕಟ್ಟಡಗಳ ನಿರ್ಮಾಣ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂಬುದು ಸ್ಥಳೀಯರ ಬೇಸರದ ನುಡಿ.
(4 / 6)
ಇದಕ್ಕಾಗಿ ಕೊಡಗಿನವೇ ಅಲ್ಲಲ್ಲಿ ಕೊಡಗು ಉಳಿಸಿ, ಕಾವೇರಿ ರಕ್ಷಿಸಿ ಎನ್ನುವ ಅಭಿಯಾನವನ್ನು ಕೆಲವು ದಿನಗಳಿಂದ ಅಲ್ಲಲ್ಲಿ ನಡೆಸುತ್ತಲೇ ಇದ್ದು., ಫಲಕಗಳೂ ಗಮನ ಸೆಳೆಯುತ್ತಿವೆ.
(5 / 6)
ಈ ಹೋರಾಟವನ್ನು ಕೈಗೆತ್ತಿಕೊಂಡಿರುವ ಕೊಡಗು ನ್ಯಾಷನಲ್ ಕೌನ್ಸಿಲ್( CNC)ನ ಮುಖ್ಯಸ್ಥ ಎನ್‌ಯು ನಾಚಪ್ಪ ಹಾಗೂ ಬಳಗದವರು ಗುರುವಾರವೂ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಇತರ ಗ್ಯಾಲರಿಗಳು