ತಲಕಾವೇರಿ ಸಹಿತ ಕೊಡಗಿನ ಹಲವೆಡೆ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ, ಮರ ಬಿದ್ದು ಪಾತ್ರೆ ತೊಳೆಯುತ್ತಿದ್ದ ಮಹಿಳೆ ಸಾವು
ಕೊಡಗಿನಲ್ಲಿ ಪೂರ್ವ ಮುಂಗಾರುವಿನ ಅಬ್ಬರ ಜೋರಾಗಿದೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು ಬರುವ ವಾರ ಕೊಡಗಿಗೂ ಬರಬಹುದು. ಇದರ ನಡುವೆಯ ಕೊಡಗು ಜಿಲ್ಲೆಯ ವಿವಿಧೆಡೆ ಎರಡು ದಿನದಿಂದ ಮಳೆಯಾಗುತ್ತಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 7)
ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಗೂ ಮುನ್ನವೇ ವರುಣನ ಅಬ್ಬರ ಜೋರಾಗಿದ್ದು. ಶನಿವಾರ ದಿನವಿಡೀ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲ್ಲೂಕಿನಲ್ಲಿ ಮಳೆಯಾಗುತ್ತಿದೆ. ಮಳೆಯಿಂದ ಅನಾಹುತವಾಗಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಭಾಗಮಂಡಲ ಭಾಗದಲ್ಲಿ ಕಾವೇರಿ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
(2 / 7)
ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಭಾರೀ ಗಾಳಿಗೆ ಮಳೆ ಮರ ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ವಿದ್ಯುತ್ ಸಂಪರ್ಕವೂ ಕಡಿದು ಹೋಗಿತ್ತು.
(3 / 7)
ಕೊಡಗಿನ ವಿರಾಜಪೇಟೆ ತಾಲೂಕು ತೋರ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಗಾಳಿ ಹಾಗೂ ಮಳೆಗೆ 9 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ. ಮಳೆಯಿಂದಾಗಿ ವಿದ್ಯುತ್ ಸಂಪರ್ಕವಿಲ್ಲದೇ ಜನ ತೊಂದರೆ ಅನುಭವಿಸಿದರು.
(Coorgthekashmir)(4 / 7)
ಕೊಡಗು ಜಿಲ್ಲೆಯಲ್ಲಿ ಮಳೆಯ ಜತೆಗೆ ಗಾಳಿಯೂ ಇದ್ದುದರಿಂದ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಆದರೆ ವಿದ್ಯುತ್ ಕಂಬ ವಿದ್ಯುತ್ ಎಲ್ಲಿಯೂ ಅನಾಹುತವಾದ ವರದಿಯಾಗಿಲ್ಲ.
(5 / 7)
ಕೊಡಗಿನಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದ ಸಂಭವಿಸಿದ ಅನಾಹುತದಲ್ಲಿ ವಿರಾಜಪೇಟೆ ಹೋಬಳಿಯ ಆರ್ಜಿ ಗ್ರಾಮದ ಕಬ್ಬಚೀರ ಉತ್ತಪ್ಪ ರವರ ಲೈನ ಮನೆ ವಾಸವಿದ್ದ ಗೌರಿ ಎಂಬುವವರ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಅಧಿಕಾರಿಗಳು ಭೇಟಿ ನೀಡಿದ್ದರು.
(6 / 7)
ಭಾರೀ ಮಳೆಯ ಪರಿಣಾಮವಾಗಿ ಕೊಡಗಿನ ಹಲವು ಎಸ್ಟೇಟ್ ಗಳಲ್ಲೂ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ದುರಸ್ಥಿ ಕಾರ್ಯ ಭರದಿಂದ ಸಾಗಿದೆ.
ಇತರ ಗ್ಯಾಲರಿಗಳು