Cauvery Theerthodbhava 2024: ಕೊಡಗಿನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿದ ಕಾವೇರಿ ಮಾತೆ; ಭಕ್ತರ ಪುಣ್ಯ ಸ್ನಾನ
- ಕೊಡಗಿನ ಕಾವೇರಿ ತುಲಾ ಸಂಕ್ರಮಣದಲ್ಲಿ ಅವಿರ್ಭವಿಸುವ ತೀರ್ಥೋದ್ಭವ ಈ ಬಾರಿಯೂ ಸಾಂಗವಾಗಿ ನೆರವೇರಿತು. ಭಕ್ತರ ಕಾವೇರಿ ಉದ್ಘೋಷದ ನಡುವೆ ನಡೆ ತೀರ್ಥೋದ್ಭವ 2024ರ ಕ್ಷಣಗಳು ಹೀಗಿದ್ದವು.
- ಕೊಡಗಿನ ಕಾವೇರಿ ತುಲಾ ಸಂಕ್ರಮಣದಲ್ಲಿ ಅವಿರ್ಭವಿಸುವ ತೀರ್ಥೋದ್ಭವ ಈ ಬಾರಿಯೂ ಸಾಂಗವಾಗಿ ನೆರವೇರಿತು. ಭಕ್ತರ ಕಾವೇರಿ ಉದ್ಘೋಷದ ನಡುವೆ ನಡೆ ತೀರ್ಥೋದ್ಭವ 2024ರ ಕ್ಷಣಗಳು ಹೀಗಿದ್ದವು.
(1 / 9)
ಕೊಡಗಿನ ಜೀವನದಿ ಮಾತೆ ಕಾವೇರಿ ಗುರುವಾರ ಬೆಳಿಗ್ಗೆ 7.40ರ ಸಮಯದ ತುಲಾ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವೀರ್ಭವಿಸಿದಳು. ಈ ವೇಳೆ ಅಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಸ್ನಾನ ಮಾಡಿ ತೀರ್ಥ ಸೇವಿಸಿದರು.( ಚಿತ್ರ: ಎಚ್‌ಟಿ ಅನಿಲ್)
(2 / 9)
ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತಿದ್ದರೆ, ಬ್ರಹ್ಮಗಿರಿಯ ಗಿರಿಕಂದರಗಳಿಂದ ಮಾರ್ಧನಿಸಿದ ಕಾವೇರಿ ಮಾತೆಗೆ ಜೈ ಎಂಬ ಭಕ್ತರ ಮುಗಿಲುಮುಟ್ಟಿತು.
(3 / 9)
ಶ್ರದ್ಧಾಭಕ್ತಿಯ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯ ಭಕ್ತ ಸಾಗರ ಸಮಾಗಮಗೊಂಡಿತ್ತು. ಕೊಡಗು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.
(4 / 9)
ಕಾವೇರಿ ಮಾತೆಯ ನಾಮಸ್ಮರಣೆಯ ನಡುವೆ ಪ್ರತಿವರ್ಷದಂತೆ ಈ ದಿನ ಕೂಡ ತುಲಾ ಲಗ್ನದಲ್ಲಿ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು
(5 / 9)
ಕಾವೇರಿ ತೀರ್ಥೋದ್ಭವದ ಉಸ್ತುವಾರಿ ಹೊತ್ತ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕೊಡಗಿನ ದಿರಿಸಿನಲ್ಲಿಯೇ ಕುಟುಂಬದೊಂದಿಗೆ ತಲಕಾವೇರಿಗೆ ಆಗಮಿಸಿದರು.
(6 / 9)
ತಲಕಾವೇರಿ ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವಾರು ಭಕ್ತರು ಕೊಡಗಿನ ನಾನಾ ಭಾಗಗಳಿಂದ ಪಾದಯಾತ್ರ ಮೂಲಕ ಆಗಮಿಸಿದರು.
(7 / 9)
ತಲಕಾವೇರಿಯಲ್ಲಿ ಪುಣ್ಯ ಸ್ನಾನ ಮಾಡಿ ತೀರ್ಥ ಸ್ವೀಕರಿಸಲು ಸಾಗರೋಪಾದಿಯಲ್ಲಿ ಭಕ್ತರು ಸೇರಿದ್ದರು. ರಾತ್ರಿಯಿಂದಲೇ ತೀರ್ಥೋದ್ಭವಕ್ಕೆ ದೂರದೂರುಗಳಿಂದ ಸಾವಿರಾರು ಭಕ್ತರು ಬಂದಿದ್ದರುತಲಕಾವೇರಿಯಲ್ಲಿ ಪುಣ್ಯ ಸ್ನಾನ ಮಾಡಿ ತೀರ್ಥ ಸ್ವೀಕರಿಸಲು ಭಕ್ತರು ಸೇರಿದ್ದರು. ರಾತ್ರಿಯಿಂದಲೇ ತೀರ್ಥೋದ್ಭವಕ್ಕೆ ದೂರದೂರುಗಳಿಂದ ಸಾವಿರಾರು ಭಕ್ತರು ಬಂದಿದ್ದರು
(8 / 9)
ತಲಕಾವೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಿದ್ದರಿಂದ ಭಕ್ತರ ಪ್ರಯಾಣಕ್ಕೆ ಕೆ.ಎಸ್.ಆರ್.ಟಿ.ಸಿ. ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು..
ಇತರ ಗ್ಯಾಲರಿಗಳು