ಕನ್ನಡ ಸುದ್ದಿ  /  Photo Gallery  /  Kolkata Knight Riders Sacked Three Coaches Before The Ipl 2024 Ar Srikanth James Foster Omkar Salvi Carl Crowe Kkr Prs

ಐಪಿಎಲ್ ಹಬ್ಬಕ್ಕೂ ಮೊದಲೇ ಮೂವರು ಕೋಚ್​​ಗಳನ್ನು ವಜಾಗೊಳಿಸಿದ ಕೋಲ್ಕತ್ತಾ ನೈಟ್​ ರೈಡರ್ಸ್

  • Kolkata Knight Riders: ಐಪಿಎಲ್​ಗೆ ಎಲ್ಲಾ 10 ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ ಕೋಲ್ಕತಾ ನೈಟ್ ರೈಡರ್ಸ್ ತನ್ನ ಕೋಚಿಂಗ್​ ಸ್ಟಾಫ್​​ನಲ್ಲಿ ಮೂವರನ್ನು ವಜಾಗೊಳಿಸಿದೆ.

ಮಾರ್ಚ್ 22 ರಿಂದ ಐಪಿಎಲ್ ಅಧಿಕೃತವಾಗಿ ಚಾಲನೆ ಪಡೆಯಲಿದೆ. ಎಲ್ಲಾ 10 ತಂಡಗಳು ಭರ್ಜರಿ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಇದರ ನಡುವೆ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮೂವರು ಕೋಚಿಂಗ್​ ಸಿಬ್ಬಂದಿಯನ್ನು ವಜಾಗೊಳಿಸಿದೆ.
icon

(1 / 5)

ಕೆಕೆಆರ್​ ತಂಡದ ಕೋಚಿಂಗ್ ಸಿಬ್ಬಂದಿಯಿಂದ ಜೇಮ್ಸ್ ಫಾಸ್ಟರ್ ಮತ್ತು ಎ.ಆರ್.ಶ್ರೀಕಾಂತ್ ಅವರನ್ನು ವಜಾಗೊಳಿಸಲಾಗಿದೆ. ಫಾಸ್ಟರ್ ತಂಡದ ಸಹಾಯಕ ಕೋಚ್ ಆಗಿದ್ದರು. ಶ್ರೀಕಾಂತ್ ವಿಶ್ಲೇಷಕರಾಗಿದ್ದರು.
icon

(2 / 5)

ಕೆಕೆಆರ್ ಸಹಾಯಕ ಬೌಲಿಂಗ್​ ಕೋಚ್​ ಆಗಿದ್ದ ಓಂಕಾರ್ ಸಾಲ್ವಿ ಅವರನ್ನೂ ತೆಗೆದುಹಾಕಲಾಗಿದೆ. ಆದಾಗ್ಯೂ, ಅವರು ಕೆಕೆಆರ್ ಅಕಾಡೆಮಿಯೊಂದಿಗೆ ಕೆಲಸವನ್ನು ಮುಂದುವರಿಸುತ್ತಾರೆ.
icon

(3 / 5)

ಏತನ್ಮಧ್ಯೆ, ಕಾರ್ಲ್ ಕ್ರೋವ್ ಕೆಕೆಆರ್​ಗೆ ಸ್ಪಿನ್ ಬೌಲಿಂಗ್ ತರಬೇತುದಾರರಾಗಿ ಸೇರಿಕೊಂಡಿದ್ದಾರೆ. ಈ ಹಿಂದೆ ಕ್ರೋವ್ ಕೋಲ್ಕತಾ ಸ್ಪಿನ್ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಈಗ ಮತ್ತೆ ಅದೇ ಪೋಸ್ಟ್​ಗೆ ನೇಮಕಗೊಂಡಿದ್ದಾರೆ. ಅಲ್ಲದೆ, ಅವರು ಲಂಕಾಷೈರ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
icon

(4 / 5)

ಭರತ್ ಅರುಣ್ ಮತ್ತು ರಯಾನ್ ಟೆನ್ ದೋಸ್ಚೆಟ್ ಬೌಲಿಂಗ್ ಮತ್ತು ಫೀಲ್ಡಿಂಗ್ ತರಬೇತುದಾರರಾಗಿ ಮುಂದುವರಿಯಲಿದ್ದಾರೆ. ಚಂದ್ರಕಾಂತ್ ಪಂಡಿತ್ ಕೆಕೆಆರ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಅಭಿಷೇಕ್ ನಾಯರ್ ಕೋಚ್ ಆಗಿ ಮುಂದುವರಿಯಲಿದ್ದಾರೆ. ಗೌತಮ್ ಗಂಭೀರ್ ಅವರನ್ನು ತಂಡದ ಮಾರ್ಗದರ್ಶಕರಾಗಿ ನೇಮಿಸಲಾಗಿದೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು