ಕೋಲ್ಕತ್ತಾ-ಗುಜರಾತ್ ಮೊದಲ ಬಾರಿಗೆ ಮುಖಾಮುಖಿ; ಹೈವೋಲ್ಟೇಜ್ ಪಂದ್ಯದ ಪ್ರಮುಖ 10 ಅಂಶಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೋಲ್ಕತ್ತಾ-ಗುಜರಾತ್ ಮೊದಲ ಬಾರಿಗೆ ಮುಖಾಮುಖಿ; ಹೈವೋಲ್ಟೇಜ್ ಪಂದ್ಯದ ಪ್ರಮುಖ 10 ಅಂಶಗಳು

ಕೋಲ್ಕತ್ತಾ-ಗುಜರಾತ್ ಮೊದಲ ಬಾರಿಗೆ ಮುಖಾಮುಖಿ; ಹೈವೋಲ್ಟೇಜ್ ಪಂದ್ಯದ ಪ್ರಮುಖ 10 ಅಂಶಗಳು

  • 2025ರ ಐಪಿಎಲ್​ನ 39ನೇ ಪಂದ್ಯದಲ್ಲಿ ಕೆಕೆಆರ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ. ಹೈವೋಲ್ಟೇಜ್ ಕದನಕ್ಕೂ ಮುನ್ನ ಪ್ರಮುಖ ಅಂಶಗಳನ್ನು ತಿಳಿಯಿರಿ.

ಇಂಡಿಯನ್ ಪ್ರೀಮಿಯರ್ ಲೀಗ್​ನ​ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ. ಅಂಕಪಟ್ಟಿಯಲ್ಲಿ ಜಿಟಿ ಅಗ್ರಸ್ಥಾನ ಪಡೆದಿದ್ದರೆ, ಕೆಕೆಆರ್​ 6ನೇ ಸ್ಥಾನದಲ್ಲಿದೆ.
icon

(1 / 12)

ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 112 ರನ್​ ಗುರಿ ಬೆನ್ನಟ್ಟಲು ವಿಫಲವಾಗಿದ್ದ ಕೋಲ್ಕತಾ 95 ರನ್​ಗಳಿಗೆ ಆಲೌಟ್ ಆಗಿತ್ತು. ಬ್ಯಾಟ್ಸ್​​ಮನ್​ಗಳ ಈ ಕಳಪೆ ಪ್ರದರ್ಶನದ ಬಗ್ಗೆ ಕೆಕೆಆರ್​ ಮ್ಯಾನೇಜ್​ಮೆಂಟ್ ಚಿಂತೆಗೊಳಗಾಗಿದೆ. ಮತ್ತೊಂದೆಡೆ ಜಿಟಿ ಆಲ್​ರೌಂಡ್​ ಪ್ರದರ್ಶನ ನೀಡುತ್ತಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ 10 ಅಂಶಗಳು ಇಲ್ಲಿವೆ.
icon

(2 / 12)

18ನೇ ಆವೃತ್ತಿಯ ದುಬಾರಿ ಆಟಗಾರರಲ್ಲಿ ಒಬ್ಬರಾದ ವೆಂಕಟೇಶ್ ಅಯ್ಯರ್​, ಕಳಪೆ ಪ್ರದರ್ಶನದೊಂದಿಗೆ ಟೀಕೆಗೆ ಗುರಿಯಾಗಿದ್ದಾರೆ. 23.75 ಕೋಟಿ ರೂ ಪಡೆದಿರುವ ಅಯ್ಯರ್ 24.20 ಸರಾಸರಿಯಲ್ಲಿ ಕೇವಲ 121 ರನ್ ಗಳಿಸಿದ್ದಾರೆ. ಆಂಡ್ರೆ ರಸೆಲ್ ಐದು ಇನ್ನಿಂಗ್ಸ್​​ಗಳಲ್ಲಿ ಕೇವಲ 34 ರನ್ ಗಳಿಸಿದ್ದರೆ, ರಿಂಕು ಸಿಂಗ್ 116 ರನ್ ಗಳಿಸಿದ್ದಾರೆ. ಬ್ಯಾಟ್ಸ್​​ಮನ್​ಗಳ ಪೈಕಿ ನಾಯಕ ಅಜಿಂಕ್ಯ ರಹಾನೆ (221 ರನ್, 2 ಅರ್ಧಶತಕ) ಮತ್ತು ಯುವ ಆಟಗಾರ ಆಂಗ್​ಕ್ರಿಶ್ ರಘುವಂಶಿ (170 ರನ್) ಉತ್ತಮ ಪ್ರದರ್ಶನ ನೀಡಿದ್ದಾರೆ.
icon

(3 / 12)

(PTI)

ಅಗ್ರ ಕ್ರಮಾಂಕದಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ಸುನಿಲ್ ನರೈನ್ ಕೆಲವು ಪಂದ್ಯಗಳಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಆದರೆ ಅವರ ಪ್ರದರ್ಶನದಲ್ಲಿ ಸ್ಥಿರತೆಯ ಕೊರತೆಯಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿದ್ದು, ಕೆಕೆಆರ್ ಪುಟಿದೇಳುತ್ತಾ ಎನ್ನುತ್ತಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
icon

(4 / 12)

(REUTERS)

ಈ ಪಂದ್ಯಕ್ಕಾಗಿ ಎರಡು ಪಿಚ್​​ಗಳನ್ನು ಸಿದ್ಧಪಡಿಸಲಾಗಿದೆ. ಒಂದು ಹೆಚ್ಚುವರಿ ಹುಲ್ಲಿನ ಪದರ ಹೊಂದಿದೆ, ಅದನ್ನು ಕತ್ತರಿಸಲಾಗಿಲ್ಲ. ತವರು ನೆಲದಲ್ಲಿ ಆಡುವ ಅನುಕೂಲವನ್ನು ತಂಡ ಪಡೆಯದ ಕಾರಣ ಕೋಲ್ಕತಾ ತಂಡದ ಮ್ಯಾನೇಜ್​ಮೆಂಟ್ ಈಗಾಗಲೇ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
icon

(5 / 12)

ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಇದುವರೆಗೂ ಉತ್ತಮ ಪ್ರದರ್ಶನ ನೀಡಿದೆ. ಈ ಋತುವಿನಲ್ಲಿ ಆಡಿರುವ 7 ಪಂದ್ಯಗಳಲ್ಲಿ ಈವರೆಗೆ ಕೇವಲ ಎರಡು ಪಂದ್ಯಗಳಲ್ಲಿ ಸೋತಿದೆಯಷ್ಟೆ. ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ (14 ವಿಕೆಟ್) ಮತ್ತು ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ (11 ವಿಕೆಟ್) ಜಿಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
icon

(6 / 12)

(HT_PRINT)

ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಆಟಗಾರ ಸಾಯಿ ಸುದರ್ಶನ್ (365 ರನ್) ಆರೆಂಜ್ ಕ್ಯಾಪ್ ಹೊಂದಿರುವ ನಿಕೋಲಸ್ ಪೂರನ್ ಅವರಿಗಿಂತ ಕೇವಲ 3 ರನ್ ಹಿಂದಿದ್ದರೆ, ಜೋಸ್ ಬಟ್ಲರ್ (315 ರನ್, ಸರಾಸರಿ 63.00) ಮೂರನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಬ್ಯಾಟಿಂಗ್​​ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಶುಭ್ಮನ್ ಗಿಲ್ ನಿರಾಸೆ ಮೂಡಿಸುತ್ತಿದ್ದಾರೆ.
icon

(7 / 12)

ಮುಖಾಮುಖಿ ದಾಖಲೆ: ಕೆಕೆಆರ್​​ ಮತ್ತು ಜಿಟಿ ಉಭಯ ತಂಡಗಳು ನಾಲ್ಕು ಸಲ ಮುಖಾಮುಖಿಯಾಗಿವೆ. ಈ ಪೈಕಿ ಗುಜರಾತ್ 2 ಸಲ, ಕೆಕೆಆರ್​ 1 ಗೆಲುವು ದಾಖಲಿಸಿದೆ. ಆದರೆ 1 ಪಂದ್ಯ ಫಲಿತಾಂಶ ಕಾಣದೆ ಅಂತ್ಯಗೊಂಡಿದೆ.
icon

(8 / 12)

ಪಿಚ್​ ರಿಪೋರ್ಟ್: ಈಡನ್ ಗಾರ್ಡನ್ಸ್​ ಮೈದಾನವು ಬ್ಯಾಟರ್​ಗಳಿಗೆ ನೆರವಾಗಲಿದೆ. ಬ್ಯಾಟ್ಸ್​ಮನ್​ಗಳ ಸ್ವರ್ಗ ಎಂದೂ ಕರೆಯುತ್ತಾರೆ. ಪಂದ್ಯ ಮುಂದುವರೆದಂತೆ ಪಿಚ್​ ವೇಗಿಗಳಿಗೆ ನೆರವಾಗಲಿದೆ. ಇಲ್ಲಿ ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಎರಡನೇ ಇನ್ನಿಂಗ್ಸ್​ನಲ್ಲಿ ಇಬ್ಬನಿ ಕಾಡುವ ಕಾರಣ ಬೌಲರ್​​ಗಳ ರನ್ ಬಿಟ್ಟುಕೊಡುವ ಸಾಧ್ಯತೆ ಹೆಚ್ಚು.
icon

(9 / 12)

(AFP)

ಹವಾಮಾನ ವರದಿ: ಕೋಲ್ಕತ್ತಾದಲ್ಲಿ ನಡೆಯಲಿರುವ ಕೆಕೆಆರ್ vs ಜಿಟಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿಲ್ಲ. ತಾಪಮಾನವು ಗರಿಷ್ಠ 36 ಡಿಗ್ರಿ ಮತ್ತು ಕನಿಷ್ಠ 27 ಡಿಗ್ರಿ ಇರಬಹುದೆಂದು ಊಹಿಸಲಾಗಿದೆ. ಹಾಗಾಗಿ ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ಯಾವುದೇ ಅಡೆತಡೆ ಇಲ್ಲದೆ ನೋಡಬಹುದು.
icon

(10 / 12)

ಜಿಟಿ ಸಂಭಾವ್ಯ ತಂಡ: ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶೆರ್ಫಾನೆ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ/ವಾಷಿಂಗ್ಟನ್ ಸುಂದರ್.
icon

(11 / 12)

Kolkata: KKR spin-bowling coach Carl Crowe (C) with bowler Varun Chakravarthy and Sunil Narine during a practice session ahead of the IPL match between Kolkata Knight Riders and Gujarat Titans, at the Eden Gardens in Kolkata, Sunday, April 20, 2025. (PTI Photo/Swapan Mahapatra)(PTI04_20_2025_000472A)
icon

(12 / 12)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು