ಕನ್ನಡ ಸುದ್ದಿ  /  Photo Gallery  /  Kollywood News Actress Khushbu Sundar Latest Interview About Her Husband Sundar C Love Story And Marriage Life Mnk

Actress Kushboo Sundar: 'ನಾನು ಅವನನ್ನು ಯಾಕೆ ಮದುವೆಯಾದೆ?' ಕಹಿ ಘಟನೆ ನೆನೆದ ಖುಷ್ಬು!

ಬಹುಭಾಷಾ ನಟಿ ಖುಷ್ಬೂ ಸುಂದರ್‌ ಈಗಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಆಗೊಂದು ಈಗೊಂದು ಸಿನಿಮಾಗಳ ಜತೆಗೆ ಸಕ್ರಿಯ ರಾಜಕಾರಣದಲ್ಲೂ ಬಿಜಿಯಾಗಿದ್ದಾರೆ. ಇದೇ ಖುಷ್ಬೂ ಸುಂದರ್‌ ಅವರನ್ನು ಏಕೆ ಮದುವೆ ಆದೆ ಎಂಬುದನ್ನು ಸಂದರ್ಶನವೊಂದರಲ್ಲಿ ಈ ಹಿಂದೆ ಹೇಳಿಕೊಂಡಿದ್ದರು. ಹೀಗಿದೆ ಅವರ ಪ್ರತಿಕ್ರಿಯೆ.

ಪತಿ ಸುಂದರ್‌ ಬಗ್ಗೆ ಮಾತನಾಡುತ್ತ, "ಸುಂದರ್ ಮತ್ತು ನಾನು ಸುಮಾರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅದರ ನಂತರ ನಾವು ಮದುವೆಯಾದೆವು. ಹಾಗಂತ ನಮ್ಮ ಕುಟುಂಬ ಜೀವನ ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ ಎಂದು ಹೇಳಲಾಗುವುದಿಲ್ಲ. ನಮ್ಮಲ್ಲಿ ಜಗಳವಿಲ್ಲ, ಕಹಿ ವಿಷಯಗಳಿಲ್ಲ ಎಂದು ಹೇಳಲು ನನ್ನಿಂದ ಆಗದು. ಏಕೆಂದರೆ, ನಮ್ಮ ನಡುವೆಯೂ ಅವೆಲ್ಲವೂ ಘಟಿಸಿವೆ" 
icon

(1 / 7)

"ಸಾಮಾನ್ಯ ಪತಿ- ಪತ್ನಿಯಲ್ಲಿ ಏನೆಲ್ಲ ಸಮಸ್ಯೆಗಳು ಬರುತ್ತವೆಯೋ, ಅದನ್ನು ನಾವೂ ಅನುಭವಿಸಿದ್ದೇವೆ. ನಮ್ಮಿಬ್ಬರ ನಡುವಿನ ಒಳ್ಳೆಯ ವಿಷಯವೆಂದರೆ, ನೀವು ನನಗಾಗಿ ಬದಲಾಗಿ, ನಾನು ನಿಮಗಾಗಿ ಬದಲಾಗಿ ಎಂದು ನಾವು ಹೇಳಿಕೊಂಡಿಲ್ಲ. ಇಬ್ಬರೂ ಹೇಗಿದ್ದೇವೋ ಹಾಗೆಯೇ ಇದ್ದೇವೆ." 
icon

(2 / 7)

ನಾವು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳುವ ಮೂಲಕ ನಮ್ಮ ಜೀವನದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆಯನ್ನು ತಂದುಕೊಂಡಿದ್ದೇವೆ. ಇವತ್ತು ಏನಾದರೂ ಸಮಸ್ಯೆಯಾದರೆ ಹತ್ತು ದಿನಗಳ ನಂತರ ಮತ್ತೆ ಅದರ ಬಗ್ಗೆ ನಾವಿಬ್ಬರೂ ಮಾತನಾಡುವುದಿಲ್ಲ" 
icon

(3 / 7)

“ನಮ್ಮೆದುರು ಒಂದು ಸಮಸ್ಯೆ ಎದುರಾದರೆ, ನಾವು ಅದನ್ನೇ ಪೋಸ್ಟ್‌ ಮಾರ್ಟಮ್‌ ಮಾಡುತ್ತ ಕೂರುವುದಿಲ್ಲ. ಅದನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗುತ್ತೇವೆ. ನಾವು ಚಿತ್ರರಂಗದಲ್ಲಿ ಇರುವುದರಿಂದ ಒಬ್ಬರಿಗೊಬ್ಬರು ತುಂಬಾ ನಂಬಿಕೆ ಇಟ್ಟುಕೊಳ್ಳಬೇಕು. ಅದೇ ಇಲ್ಲಿ ಮುಖ್ಯ. ಏಕೆಂದರೆ, ಇಲ್ಲಿ ನಮ್ಮ ಬಗ್ಗೆ ಇಲ್ಲ ಸಲ್ಲದ ವದಂತಿಗಳು ಹರಿದಾಡುತ್ತಿರುತ್ತವೆ ಹಾಗಾಗಿ”
icon

(4 / 7)

"ಅದೇ ಸಮಯದಲ್ಲಿ, ಒಬ್ಬರು ಒಂದು ಹೇಳಿದರೆ, ಅದು ಇನ್ನುಳಿದ ಹತ್ತು ಜನರಿಗೆ ಬೇರೆ ರೀತಿಯಲ್ಲಿ ರವಾನೆಯಾಗಿರುತ್ತದೆ. ಒಂದು ವಿಷಯ ನನ್ನ ಕಿವಿಗೆ ಬೀಳುವ ಹೊತ್ತಿಗೆ ಅದು 10 ಜನರಿಗೆ, 10 ರೀತಿಯಲ್ಲಿ ಹೋದ ಉದಾಹರಣೆಗಳು ಸಾಕಷ್ಟಿವೆ. ಈ ವಿಚಾರವಾಗಿ ಇಲ್ಲಿಯವರೆಗೆ ನಾನು ಅವನನ್ನು (ಸುಂದರ್‌) ಕೇಳಿಲ್ಲ. ಅವನು ನನಗೆ ಯಾವುದೇ ಪ್ರಶ್ನೆ ಕೇಳಿಲ್ಲ. ನಮಗೆ ನಂಬಿಕೆಯೇ ಜೀವನ" 
icon

(5 / 7)

"ಒಬ್ಬರಿಗೊಬ್ಬರು ಪರಸ್ಪರ ಗೌರವ ಕೊಡುವುದೇ ಇಲ್ಲಿ ದೊಡ್ಡದು. ಅವನೇ ನನಗೆ ಗೌರವ ಕೊಡದಿದ್ದರೆ ಹೊರಗಿನಿಂದ ಬಂದವನು ನನಗೆ ಗೌರವ ಕೊಡುವುದಿಲ್ಲ. ಹಾಗಾಗಿ ನಮ್ಮಿಬ್ಬರ ನಡುವೆ ಆ ಗೌರವ ಮನೋಭಾವನೆ ಈಗಲೂ ಇದೆ. ಮುಂದೆಯೂ ಇರಲಿದೆ"  
icon

(6 / 7)

"ಜೀವನದಲ್ಲಿ ಆತನ ಬಗ್ಗೆ ನನಗೆ ತುಂಬ ಗೌರವವಿದೆ. ಯಾಕೆ ನಾನು ಅವನನ್ನೇ ಮದುವೆಯಾಗಬೇಕು ಎಂದು ಯೋಚಿಸುವ ಸಮಯ ಬಹಳಷ್ಟಿತ್ತು. ಅದೇ ರೀತಿ ಆತನಿಗೂ ಸಮಯ ಇತ್ತು. ಆದರೆ, ಅದರಾಚೆಗೆ ನಮ್ಮ ಪ್ರೀತಿ ಮತ್ತು ವಾತ್ಸಲ್ಯ ಬೆಟ್ಟದಷ್ಟಿತ್ತು. ಅದೇ ನಮ್ಮನ್ನು ಇಷ್ಟು ವರ್ಷಗಳ ಕಾಲ ಕರೆದುಕೊಂಡು ಬಂದಿದೆ.
icon

(7 / 7)

ಇತರ ಗ್ಯಾಲರಿಗಳು