ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rashmika Mandanna: ಪುಷ್ಪ 2 ಸಿನಿಮಾದ ಬಳಿಕ ಕುಬೇರನ ಸಹವಾಸ ಮಾಡಿದ ರಶ್ಮಿಕಾ ಮಂದಣ್ಣ; ಅನಿಮಲ್‌ ನಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

Rashmika Mandanna: ಪುಷ್ಪ 2 ಸಿನಿಮಾದ ಬಳಿಕ ಕುಬೇರನ ಸಹವಾಸ ಮಾಡಿದ ರಶ್ಮಿಕಾ ಮಂದಣ್ಣ; ಅನಿಮಲ್‌ ನಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

Rashmika Mandanna Kubera Movie: ಸ್ಯಾಂಡಲ್‌ವುಡ್‌ನ ಕಿರಿಕ್‌ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ ಈಗ ಸಖತ್‌ ಬಿಝಿ. ಒಂದೆಡೆ ರಶ್ಮಿಕಾ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆಗೆ ಕಾಯುತ್ತಿದೆ. ಇನ್ನೊಂದೆಡೆ ಧನುಷ್‌ ನಟನೆಯ ಕುಬೇರ ಸಿನಿಮಾದ ಚಿತ್ರೀಕರಣದಲ್ಲಿ ಒಂದು ದಿನವೂ ಬಿಡುವು ತೆಗೆದುಕೊಳ್ಳದೆ ಭಾಗಿಯಾಗಿದ್ದಾರೆ.

ಶೇಖರ್ ಕಮ್ಮುಲಾ ನಿರ್ದೇಶನದ ಕುಬೇರ ಚಿತ್ರದಲ್ಲಿ ಧನುಷ್ ನಾಯಕನಾಗಿ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.
icon

(1 / 6)

ಕುಬೇರ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಪ್ರಾರಂಭವಾಗಿದೆ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ಚಿತ್ರತಂಡ ಸೇರಿಕೊಂಡಿದ್ದಾರೆ.ಶೇಖರ್ ಕಮ್ಮುಲಾ ಅವರು ಧನುಷ್ ಮತ್ತು ರಶ್ಮಿಕಾ ಅವರ ರೊಮ್ಯಾಂಟಿಕ್‌ ಸೀನ್‌ಗಳನ್ನು ಶೂಟಿಂಗ್‌ ಮಾಡುತ್ತಿದ್ದಾರೆ.
icon

(2 / 6)

ಕುಬೇರ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಧನುಷ್‌ ಜತೆ ನಟಿಸುತ್ತಿದ್ದಾರೆ.  ಕುಬೇರ ಚಿತ್ರದ ಮೂಲಕ ರಶ್ಮಿಕಾ ಸುಮಾರು ಮೂರು ವರ್ಷಗಳ ನಂತರ ತಮಿಳಿಗೆ ಮರಳುತ್ತಿದ್ದಾರೆ. 
icon

(3 / 6)

ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾವು ಇದೇ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನದಂದು ರಿಲೀಸ್‌ ಆಗಲಿದೆ.  ಅಲ್ಲು ಅರ್ಜುನ್ ನಟನೆಯ ಈ ಚಿತ್ರವು ದೇಶಾದ್ಯಂತ ಸಾಕಷ್ಟು ನಿರೀಕ್ಷೆಗಳನ್ನು ಸೃಷ್ಟಿಸಿದೆ.
icon

(4 / 6)

ರಶ್ಮಿಕಾ ತೆಲುಗಿನಲ್ಲಿ 'ಗರ್ಲ್ ಫ್ರೆಂಡ್' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ರಾಹುಲ್ ರವೀಂದ್ರನ್ ನಿರ್ದೇಶನದ ಸಿನಿಮಾ.
icon

(5 / 6)

ತಮಿಳು ಚಿತ್ರ ಮಾಸ್ಟರ್ ನಲ್ಲಿ ತಲಪತಿ ವಿಜಯ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಬೇಕಿತ್ತು. ಆದರೆ ನಾಯಕಿ ಪಾತ್ರ ಮುಖ್ಯವಲ್ಲದ ಕಾರಣ ರಶ್ಮಿಕಾ ಚಿತ್ರವನ್ನು ತಿರಸ್ಕರಿಸಿದ್ದರು. ಇದಾದ ಬಳಿಕ  ರಶ್ಮಿಕಾ ನಟ ವಿಜಯ್ ಅವರೊಂದಿಗೆ ವಾರಿಸು ಚಿತ್ರದಲ್ಲಿ ನಟಿಸಿದ್ದರು.
icon

(6 / 6)

IPL_Entry_Point

ಇತರ ಗ್ಯಾಲರಿಗಳು