Mani Ratnam Birthday: ನಿರ್ದೇಶಕ ಮಣಿರತ್ನಂ ಪ್ರೀತಿಯನ್ನು ನಿರಾಕರಿಸಿದ್ದ ನಟಿ ಸುಹಾಸಿನಿ: ಕಾಲಿವುಡ್ ಜೋಡಿಯ ಲವ್ ಸ್ಟೋರಿ ಓದಿ
ಬಹುಭಾಷಾ ನಿರ್ದೇಶಕ ಮಣಿರತ್ನಂ ಇಂದು 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಸಿನಿಮಾ ರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿದ ಮಣಿರತ್ನಂಗೆ ಅಭಿಮಾನಿಗಳು, ಸಿನಿಮಾ ಗಣ್ಯರು ಶುಭ ಕೋರುತ್ತಿದ್ದಾರೆ.
(1 / 9)
ಮಣಿರತ್ನಂ ಸಿನಿಮಾ ನಿರ್ದೇಶಕನಾಗಿ ಕರಿಯರ್ ಆರಂಭಿಸಿದ್ದು ಕನ್ನಡ ಸಿನಿಮಾ 'ಪಲ್ಲವಿ ಅನುಪಲ್ಲವಿ' ಮೂಲಕ. ಅಲ್ಲಿಂದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. (PC: Suhasini Hasan Instagram )
(2 / 9)
ಖ್ಯಾತ ನಟಿ ಸುಹಾಸಿನಿ, ಮಣಿರತ್ನಂ ಅವರ ಪತ್ನಿ. 1988 ರಲ್ಲಿ ಇಬ್ಬರೂ ಮದುವೆಯಾದರು. ಈ ದಂಪತಿಗೆ ನಂದನ್ ಎಂಬ ಒಬ್ಬ ಮಗ ಇದ್ದಾರೆ.
(3 / 9)
ಇವರ ಪ್ರೀತಿ ಹಾಗೂ ಮದುವೆಗೆ ಸಂಬಂಧಿಸಿದಂತೆ ಇಂಟ್ರೆಸ್ಟಿಂಗ್ ವಿಚಾರವೊಂದಿದೆ. ಆಗಲೇ ಸುಹಾಸಿನಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು.
(4 / 9)
ಸುಹಾಸಿನಿ ಅವರನ್ನು ಅನೇಕ ಬಾರಿ ನೋಡಿದ್ದ ಮಣಿರತ್ನಂ ಆಕೆಗೆ ಪ್ರಪೋಸ್ ಮಾಡಿದ್ಧಾರೆ. ಆದರೆ ಸುಹಾಸಿನಿ ಮಾತ್ರ ಮಣಿರತ್ನಂ ಪ್ರೀತಿಯನ್ನು ನಿರಾಕರಿಸಿದ್ದಾರೆ.
(5 / 9)
ಪ್ರೀತಿ-ಪ್ರೇಮ ಎಂದೆಲ್ಲಾ ಸುತ್ತಾಡುವುದು ನನಗೆ ಇಷ್ಟವಿಲ್ಲ, ನನಗೆ ಇಂತಹ ರಿಲೇಶನ್‌ಶಿಪ್‌ನಲ್ಲಿ ನಂಬಿಕೆ ಇಲ್ಲ, ಏನಿದ್ದರೂ ಮದುವೆ ಮಾತ್ರ ಎಂದು ಉತ್ತರಿಸಿದ್ದಾರೆ. ನಂತರ ಮಣಿರತ್ನಂ ಸ್ವಲ್ಪವೂ ತಡ ಮಾಡದೆ ಸುಹಾಸಿನಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ.
(7 / 9)
ಸಿನಿಮಾಗಳ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾ ತೆರೆ ಕಂಡು ಯಶಸ್ವಿಯಾಗಿದೆ.
(8 / 9)
ಸುಹಾಸಿನಿ ಮದುವೆ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ತೆರೆ ಕಂಡ ಮಾನ್ಸೂನ್ ರಾಗ ಸಿನಿಮಾದಲ್ಲಿ ಸುಹಾಸಿನಿ ನಟಿಸಿದ್ದರು. ಸದ್ಯಕ್ಕೆ ಅವರು ತೆಲುಗಿನ 'ಮಿಸ್ಟರ್ ಪ್ರೆಗ್ನೆಂಟ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ.
ಇತರ ಗ್ಯಾಲರಿಗಳು