Kamal Haasan Movies: ರಾಮ ಶಾಮ ಭಾಮದಿಂದ ವಿಕ್ರಮ್‌ವರೆಗೆ; ಇಂದು ಕಮಲ್ ಹಾಸನ್ ಹುಟ್ಟುಹಬ್ಬ, ಇವರು ನಟಿಸಿದ ಈ 8 ಚಿತ್ರ ಮಿಸ್ ಮಾಡಬೇಡಿ
- Happy Birthday Kamal Haasan: ಇಂದು ತಮಿಳು ನಟ ಸೂಪರ್ ಸ್ಟಾರ್ ಕಮಲ್ ಹಾಸನ್ ಹುಟ್ಟುಹಬ್ಬ. ಭಾರತದ ಚಿತ್ರರಂಗದಲ್ಲಿ ಅದ್ಭುತ ಕಲಾವಿದ ಎಂದು ಹೆಸರು ಮಾಡಿರುವ ಇವರು ನವೆಂಬರ್ 7 ಅಂದರೆ ಇಂದು ತನ್ನ 6ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಮಲ್ ಹಾಸನ್ ಅವರ ನೋಡಲೇಬೇಕಾದ 8 ಚಿತ್ರಗಳ ಕುರಿತು ತಿಳಿದುಕೊಳ್ಳೋಣ.
- Happy Birthday Kamal Haasan: ಇಂದು ತಮಿಳು ನಟ ಸೂಪರ್ ಸ್ಟಾರ್ ಕಮಲ್ ಹಾಸನ್ ಹುಟ್ಟುಹಬ್ಬ. ಭಾರತದ ಚಿತ್ರರಂಗದಲ್ಲಿ ಅದ್ಭುತ ಕಲಾವಿದ ಎಂದು ಹೆಸರು ಮಾಡಿರುವ ಇವರು ನವೆಂಬರ್ 7 ಅಂದರೆ ಇಂದು ತನ್ನ 6ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಮಲ್ ಹಾಸನ್ ಅವರ ನೋಡಲೇಬೇಕಾದ 8 ಚಿತ್ರಗಳ ಕುರಿತು ತಿಳಿದುಕೊಳ್ಳೋಣ.
(1 / 11)
ಇಂದು ತಮಿಳು ನಟ ಸೂಪರ್ ಸ್ಟಾರ್ ಕಮಲ್ ಹಾಸನ್ ಹುಟ್ಟುಹಬ್ಬ. ಭಾರತದ ಚಿತ್ರರಂಗದಲ್ಲಿ ಅದ್ಭುತ ಕಲಾವಿದ ಎಂದು ಹೆಸರು ಮಾಡಿರುವ ಇವರು ನವೆಂಬರ್ 7 ಅಂದರೆ ಇಂದು ತನ್ನ 69ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
(2 / 11)
ಕಮಲ್ ಹಾಸನ್ ಅವರು ಕನ್ನಡ, ತಮಿಳು, ತೆಲುಗು, ಬಂಗಾಳಿ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಟನೆ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಸಿನಿಮಾ ಬರಹಗಾರರಾಗಿ, ಹಿನ್ನೆಲೆ ಸಂಗೀತಗಾರರಾಗಿಯೂ ಮಿಂಚಿದ್ದಾರೆ.
(3 / 11)
ತನ್ನ ಹುಟ್ಟುಹಬ್ಬದ ಮೊದಲ ದಿನ ಅಂದರೆ ನಿನ್ನೆ ಕಮಲ್ ಹಾಸನ್ ನಟನೆಯ ಮುಂಬರುವ ಚಿತ್ರ ಥಗ್ ಲೈಫ್‌ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಸುಮಾರು 36 ವರ್ಷಗಳ ಬಳಿಕ ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟಿಸುವ ಚಿತ್ರ ಇದಾಗಿದೆ.
(4 / 11)
ಕಮಲ್ ಹಾಸನ್ ಅವರು 1954ರ ನವೆಂಬರ್ 7ರಂದು ತಮಿಳು ಐಯ್ಯಂಗಾರ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತನ್ನ ಬಾಲ್ಯದ ಆರು ವರ್ಷ ಇವರು ಬಾಲ ಕಲಾವಿದರಾಗಿಯೂ ಸಿನಿಪ್ರೇಕ್ಷಕರನ್ನು ರಂಜಿಸಿದ್ದಾರೆ. ಬನ್ನಿ ಕಮಲ್ ಹಾಸನ್ ಅವರು ನಟಿಸಿರುವ ಎಂಟು ನೋಡಲೇಬೇಕಾದ ಚಿತ್ರಗಳ ಕುರಿತು ತಿಳಿದುಕೊಳ್ಳೋಣ.
(5 / 11)
ರಾಮ ಶಾಮ ಭಾಮ (2005): ಕನ್ನಡಿಗರಿಗೆ ಕಮಲ ಹಾಸನ್ ಎಂದಾಕ್ಷಣ ನೆನಪಾಗುವುದು ರಾಮ ಭಾಮ ಶಾಮ. ರಮೇಶ್ ಅರವಿಂದ್ ಮತ್ತು ಕಮಲ ಹಾಸನ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಹಾಸ್ಯ ಚಿತ್ರವಿದು. ಕಮಲ್ ಹಾಸನ್ ಅವರ ನಟನಾ ಕೌಶಲವನ್ನು ಈ ಚಿತ್ರದಲ್ಲಿ ಸೊಗಸಾಗಿ ನೋಡಬಹುದು.
(6 / 11)
ವಿಕ್ರಮ್ (2022): ತಮಿಳು, ಕನ್ನಡ, ಮಲಯಾಳಂ, ಹಿಂದಿ, ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ವಿಕ್ರಮ್ ಸಿನಿಮಾ ಬಿಡುಗಡೆಯಾಗಿತ್ತು. ಕಮಲ್ ಹಾಸನ್ ಮಾತ್ರವಲ್ಲದೆ ಫಹದ್ ಫಾಸಿಲ್, ವಿಜಯ್ ಸೇತುಪತಿ, ಕಾಲಿದಾಸ್ ಜಯರಾಮ್ ಮತ್ತು ಸೂರ್ಯ ಸೇರಿದಂತೆ ಹಲವು ಪ್ರಮುಖ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.
(7 / 11)
ಇಂಡಿಯನ್ (1996): ಮಾಜಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಚಿತ್ರವಿದು. ಕಮಲ್ ಹಾಸನ್ ಜತೆಗೆ ಮನಿಶಾ ಕೊಯಿರಾಲ, ಸುಖನ್ಯ ಮತ್ತು ಊರ್ಮಿಲಾ ಮಾಟೊಂಡ್ಕರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(8 / 11)
ದಶವತಾರಂ (2008): ಕಮಲ್ ಹಾಸನ್ ಅವರ ಜನಪ್ರಿಯ ಚಿತ್ರಗಳಲ್ಲಿ ದಶವತಾರಂ ಪ್ರಮುಖವಾಗದ್ದು. ಇವು ವೈಜ್ಞಾನಿಕ ಕಾಲ್ಪನಿಕ ಚಿತ್ರ. ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಹತ್ತು ಪ್ರಮುಖ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ನಟ ಭಯಂಕರನ ಪ್ರತಿಭೆಯ ದರ್ಶನವಾಗಿದೆ. ಮಲ್ಲಿಕಾ ಶೆರಾವತ್, ರೇಖಾ ಮತ್ತು ಜಯಪ್ರದಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
(9 / 11)
ವಿಶ್ವ ರೂಪಂ (2013): ಈ ಚಿತ್ರವನ್ನೂ ಮರೆಯುವಂತೆ ಇಲ್ಲ. ಈ ಚಿತ್ರದಲ್ಲಿ ಅಮಾಯಕ ಮತ್ತು ಉಗ್ರ ವ್ಯಕ್ತಿತ್ವದ ಎರಡು ಶೇಡ್‌ಗಳಲ್ಲಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಅಮಾಯಕ ಪಾತ್ರದಿಂದ ಉಗ್ರಪಾತ್ರಕ್ಕೆ ಬದಲಾವಣೆ ಕಾಣುವ ಸೀನ್ ಅಂತೂ ಮರೆಯುವಂತೆ ಇಲ್ಲ.
(10 / 11)
ವಿಶ್ವರೂಪಂ 2 (2018): ವಿಶ್ವರೂಪಂ ಯಶಸ್ಸಿನ ಬಳಿಕ ಅದರ ಸೀಕ್ವೆಲ್ ವಿಶ್ವರೂಪಂ 2 ಬಿಡುಗಡೆಯಾಗಿತ್ತು. ಇದು ಕೂಡ ಭಯೋತ್ಪಾದನೆ ವಿರುದ್ಧದ ಹೋರಾಟದ ಚಿತ್ರ. ಇಲ್ಲಿ ಕಮಲ್ ಹಾಸನ್ ಸಾಹಸ ಮರೆಯುವಂತೆ ಇಲ್ಲ.
ಇತರ ಗ್ಯಾಲರಿಗಳು