Daniel Balaji Death: ಯಶ್ ಜತೆ ‘ಕಿರಾತಕ’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ಡೇನಿಯಲ್ ಬಾಲಾಜಿ ನಿಧನ PHOTOS
- Daniel Balaji Death: ಸ್ಯಾಂಡಲ್‌ವುಡ್‌ನಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ, ಕಿರಾತಕ ಸೇರಿ ಹಲವು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ತಮಿಳು ಮೂಲದ ನಟ ಡೇನಿಯಲ್ ಬಾಲಾಜಿ (48) ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ನಟನ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.

(1 / 7)
ಡೆನಿಯಲ್ ಬಾಲಾಜಿ ಅವರಿಗೆ ಶುಕ್ರವಾರ (ಮಾ. 29) ರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೆನ್ನೈನ ಕೊಟ್ಟಿಕಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
(2 / 7)
ಡೇನಿಯಲ್ ಬಾಲಾಜಿ ಸೌತ್‌ನ ಎಲ್ಲ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದರಲ್ಲೂ ತಮಿಳು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಭಿಮಾನಿಗಳಲ್ಲಿ ಮರೆಯಲಾಗದ ಖಳನಾಯಕರಾಗಿದ್ದರು.
(3 / 7)
1975 ರಲ್ಲಿ ಚೆನ್ನೈನ ತಾರಾಮಣಿ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ತಮ್ಮ ನಿರ್ದೇಶನದ ಕ್ಲಾಸ್ ಮುಗಿಸಿ ಕಮಲ್ ಹಾಸನ್ ಅವರ ಚಿತ್ರದಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು.
(4 / 7)
ಕಿರುತೆರೆಯಲ್ಲಿ ಮೂಡಿಬಂದ ಚಿಟ್ಟಿ ಸೀರಿಯಲ್‌ನಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು. ಅಲ್ಲಿಯವರೆಗೂ ಡೇನಿಯಲ್ ಎಂದಿದ್ದ ಹೆಸರಿನ ಜತೆಗೆ ಬಾಲಾಜಿ ಎಂದೂ ಸೇರಿಸಿಕೊಂಡರು.
(5 / 7)
ಅದಾದ ಬಳಿಕ ಎಲ್ಲ ಸೌತ್ ಚಿತ್ರರಂಗದಲ್ಲಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಖಳನಾಯಕನಾಗಿಯೇ ಬಾಲಾಜಿ ಕಾಣಿಸಿಕೊಂಡಿದ್ದಾರೆ.
(6 / 7)
ಕನ್ನಡದಲ್ಲಿ ಯಶ್ ಅಭಿನಯದ ಕಿರಾತಕ ಚಿತ್ರದಲ್ಲೂ ಖಳನಾಗಿದ್ದರು. ಇನ್ನುಳಿದಂತೆ ಶಿವಾಜಿನಗರ, ಬೆಂಗಳೂರು ಅಂಡರ್‌ವರ್ಲ್ಡ್, ಡವ್ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
ಇತರ ಗ್ಯಾಲರಿಗಳು