ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಜಯ್‌ ಸೇತುಪತಿಯ ಮಹಾರಾಜ ಚಿತ್ರದ ಟ್ರೇಲರ್‌ ಚಿಂದಿ ಗುರೂ! ಮತ್ತೊಂದು ಮಾಸ್ಟರ್‌ಪೀಸ್‌ ಜತೆಗೆ ಬರ್ತಿದ್ದಾರೆ ಮಕ್ಕಳ್‌ ಸೇಲ್ವನ್‌

ವಿಜಯ್‌ ಸೇತುಪತಿಯ ಮಹಾರಾಜ ಚಿತ್ರದ ಟ್ರೇಲರ್‌ ಚಿಂದಿ ಗುರೂ! ಮತ್ತೊಂದು ಮಾಸ್ಟರ್‌ಪೀಸ್‌ ಜತೆಗೆ ಬರ್ತಿದ್ದಾರೆ ಮಕ್ಕಳ್‌ ಸೇಲ್ವನ್‌

  • ಕಾಲಿವುಡ್‌ನ ಸ್ಟಾರ್‌ ನಟ, ಮಕ್ಕಳ್‌ ಸೇಲ್ವನ್‌ ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ಮಹಾರಾಜ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷ ಏನೆಂದರೆ ಸೇತುಪತಿ ಅವರ 50ನೇ ಸಿನಿಮಾ ಇದಾಗಿದೆ. ರಿಲೀಸ್‌ ಆದ ಟ್ರೇಲರ್‌ ಕುತೂಹಲ ಮೂಡಿಸಿದ್ದು, ನಟನ ಹೊಸ ಅವತಾರ ಅಚ್ಚರಿ ಮೂಡಿಸಿದೆ.

ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ಮಹಾರಾಜ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಂಕಿ ಟಾಯ್ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿಥಿಲನ್ ಸಾಮಿನಾಥನ್ ಮಹಾರಾಜ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 
icon

(1 / 6)

ಈ ಚಿತ್ರದಲ್ಲಿ ಕ್ಷೌರಿಕನಾಗಿ ವಿಜಯ್‌ ಸೇತುಪತಿ ಎದುರಾಗಿದ್ದಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಮನೋಜ್ಞ ಅಭಿನಯದ ಮೂಲಕವೇ ಗಮನ ಸೆಳೆಯುತ್ತಾರೆ.
icon

(2 / 6)

ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದು, ಟ್ರೇಲರ್‌ನಲ್ಲಿ ಕಂಡಿದ್ದಾರೆ. 
icon

(3 / 6)

ನಾಪತ್ತೆಯಾದ ಲಕ್ಷ್ಮೀಯನ್ನು ಹುಡುಕಿ ಕೊಡಿ ಎಂದು ಕಥಾನಾಯಕ ಪೊಲೀಸ್‌ ಸ್ಟೇಷನ್‌ಗೆ ಬರ್ತಾನೆ. ಅಷ್ಟಕ್ಕೂ ಆ ಲಕ್ಷ್ಮೀ ಯಾರು? ಹೀಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯಲ್ಲಿಯೇ ಟ್ರೇಲರ್‌ ನೋಡಿಸಿಕೊಂಡು ಹೋಗುತ್ತದೆ. 
icon

(4 / 6)

ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸ್ವಾಮಿ ಈ ಚಿತ್ರದ ನಿರ್ಮಾಪಕರು. ದಿನೇಶ್ ಪುರುಷೋತ್ತಮನ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.
icon

(5 / 6)

 ಕನ್ನಡದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಟ್ರೇಲರ್‌ನಲ್ಲಿರುವ ಸಂಗೀತವೇ ಭಯ ಹುಟ್ಟಿಸುವಂತಿದೆ. 
icon

(6 / 6)

 ಕನ್ನಡದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಟ್ರೇಲರ್‌ನಲ್ಲಿರುವ ಸಂಗೀತವೇ ಭಯ ಹುಟ್ಟಿಸುವಂತಿದೆ. 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು