ಜೈಲರ್ ಬ್ಲಾಕ್ ಬಸ್ಟರ್ ಹಿಟ್ ಆಗ್ತಿದ್ದಂತೆ ಅರಣ್ಮನೈ 4 ಚಿತ್ರಕ್ಕೆ ತಮನ್ನಾ ಭಾಟಿಯಾಗೆ ಸಿಕ್ಕ ಸಂಭಾವನೆ ಎಷ್ಟಿರಬಹುದು?
ಕಳೆದ ವರ್ಷ ತಮನ್ನಾ ಭಾಟಿಯಾ ನಟನೆಯ ನಾಲ್ಕು ಸಿನಿಮಾಗಳು ಬಿಡುಗಡೆಯಾದರೂ, ಆ ಪೈಕಿ ಜೈಲರ್ ಮತ್ತು ಲಸ್ಟ್ ಸ್ಟೋರಿಸ್ ಹೆಚ್ಚು ಸದ್ದು ಮಾಡಿದ್ದವು. ಅದರಲ್ಲೂ ಜೈಲರ್ ಸಿನಿಮಾ 600 ಪ್ಲಸ್ ಕೋಟಿ ಬಾಚಿಕೊಂಡಿತ್ತು. ಆ ಸಿನಿಮಾದ ಖ್ಯಾತಿಯಿಂದಲೇ ತಮನ್ನಾ ಸಂಭಾವನೆಯೂ ಏರಿಕೆಯಾಗಿತ್ತು.
(1 / 5)
ಇತ್ತೀಚೆಗಷ್ಟೇ ತೆರೆಕಂಡಿದ್ದ ತಮಿಳಿನ ಅರಣ್ಮನೈ 4 ಚಿತ್ರ 10 ದಿನಗಳಲ್ಲಿ 35 ಕೋಟಿ ಗಳಿಸಿತ್ತು. ಈ ಮೂಲಕ ತಮಿಳು ನಿರ್ಮಾಪಕರಿಗೆ ಈ ವರ್ಷದ ಅತ್ಯಂತ ಲಾಭದಾಯಕ ಚಿತ್ರಗಳಲ್ಲಿ ಇದೂ ಒಂದಾಗಿತ್ತು.
(2 / 5)
ಅರಣ್ಮನೈ 4 ಚಿತ್ರವನ್ನು ತೆಲುಗಿನಲ್ಲಿ 'ಬಕ್' ಎಂದು ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಟಾಲಿವುಡ್‌ನಲ್ಲಿ ಈ ಹಾರರ್ ಕಾಮಿಡಿ ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ. ಅದೇ 10 ದಿನಗಳಲ್ಲಿ 4 ಕೋಟಿಗೂ ಕಡಿಮೆ ಕಲೆಕ್ಷನ್ ಮಾಡಿತ್ತು.(Instagram\ Tamannah Bhatia)
(3 / 5)
ಅರಣ್ಮನೈ 4 ಚಿತ್ರಕ್ಕಾಗಿ ತಮನ್ನಾ ಭಾಟಿಯಾ ಬರೋಬ್ಬರಿ 5 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಜೈಲರ್ ಸಿನಿಮಾ ಹಿಟ್ ಬಳಿಕ, ನಟಿ ತಮನ್ನಾ ತಮಿಳಿನಲ್ಲಿ ತಮ್ಮ ಸಂಭಾವನೆಯನ್ನು ದ್ವಿಗುಣಗೊಳಿಸಿದ್ದಾರೆ ಎನ್ನಲಾಗುತ್ತಿದೆ.
(4 / 5)
ಕಳೆದ ಎರಡು ವರ್ಷಗಳಲ್ಲಿ ಜೈಲರ್ ಹೊರತುಪಡಿಸಿ, ತಮನ್ನಾ ಅವರ ಯಾವುದೇ ಚಿತ್ರ ಯಶಸ್ಸಿ ಕಂಡಿರಲಿಲ್ಲ. ಹೀಗಿದ್ದರೂ, ಸಂಭಾವನೆ ವಿಚಾರದಲ್ಲಿ ಮುಂದಡಿ ಇರಿಸಿದ್ದಾರೆ.
ಇತರ ಗ್ಯಾಲರಿಗಳು