ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Thalapathy Vijay: ದಳಪತಿ ವಿಜಯ್‌ 68ನೇ ಸಿನಿಮಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ಗೂ ಇದೆ ನಂಟು; ಆದರೆ ಇದು ಧೋನಿ ಬಯೋಪಿಕ್‌ ಅಲ್ಲ

Thalapathy Vijay: ದಳಪತಿ ವಿಜಯ್‌ 68ನೇ ಸಿನಿಮಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ಗೂ ಇದೆ ನಂಟು; ಆದರೆ ಇದು ಧೋನಿ ಬಯೋಪಿಕ್‌ ಅಲ್ಲ

  • ಇದೇ ವರ್ಷ ಜನವರಿಯಲ್ಲಿ ತೆರೆ ಕಂಡ ದಳಪತಿ ವಿಜಯ್‌ ಅಭಿನಯದ 'ವಾರಿಸು' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸಿನಿಮಾವನ್ನು ದಿಲ್‌ ರಾಜು ನಿರ್ಮಿಸಿದ್ದರು. ಚಿತ್ರದಲ್ಲಿ ವಿಜಯ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಸದ್ಯಕ್ಕೆ ವಿಜಯ್‌ 'ಲಿಯೋ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

ಲಿಯೋ ಸಿನಿಮಾ ಚಿತ್ರೀಕರಣದ ಇನ್ನು ಕೆಲವು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದರ ನಡುವೆ ವಿಜಯ್‌ ಮುಂದಿನ ಸಿನಿಮಾಗೆ ಮಾತುಕತೆ ನಡೆಯುತ್ತಿದೆ. ಇದು ವಿಜಯ್‌ ಅಭಿನಯದ 68ನೇ ಸಿನಿಮಾ. ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ ತಿಳಿಯಲು ವಿಜಯ್‌ ಅಭಿಮಾನಿಗಳು ಕಾಯುತ್ತಿದ್ದಾರೆ.
icon

(1 / 10)

ಲಿಯೋ ಸಿನಿಮಾ ಚಿತ್ರೀಕರಣದ ಇನ್ನು ಕೆಲವು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದರ ನಡುವೆ ವಿಜಯ್‌ ಮುಂದಿನ ಸಿನಿಮಾಗೆ ಮಾತುಕತೆ ನಡೆಯುತ್ತಿದೆ. ಇದು ವಿಜಯ್‌ ಅಭಿನಯದ 68ನೇ ಸಿನಿಮಾ. ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ ತಿಳಿಯಲು ವಿಜಯ್‌ ಅಭಿಮಾನಿಗಳು ಕಾಯುತ್ತಿದ್ದಾರೆ.(PC: Twitter, Vijay Facebook)

ಈ ಚಿತ್ರವನ್ನು ಎಜಿಎಸ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದ್ದು ವೆಂಕಟ್‌ ಪ್ರಭು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಯುವನ್‌ ಶಂಕರ್‌ ರಾಜಾ ಸಂಗೀತ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ಅನೌನ್ಸ್‌ ಆಗಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. 
icon

(2 / 10)

ವಿಜಯ್‌ 68ನೇ ಸಿನಿಮಾಗೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ. ಆದರೆ ಮೂಲಗಳ ಪ್ರಕಾರ ನಿರ್ದೇಶಕ ವೆಂಕಟ್‌ ಪ್ರಭು ಈ ಚಿತ್ರಕ್ಕೆ CSK ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹೆಸರು ಕೇಳಿ, ಚೆನ್ನೈ ಸೂಪರ್‌ ಕಿಂಗ್ಸ್‌ ಕ್ರಿಕೆಟ್‌ ತಂಡದ ಪ್ರೇಮಿಗಳಿಗೆ ಖುಷಿಯಾಗಿದ್ದಾರಂತೆ. 
icon

(3 / 10)

ವೆಂಕಟ್‌ ಪ್ರಭು ಕೂಡಾ ಕ್ರಿಕೆಟ್‌ ಪ್ರೇಮಿ ಆಗಿದ್ದು ಸಿಎಸ್‌ಕೆ ಬೆಂಬಲಿಗರಾಗಿದ್ದಾರೆ. ಮತ್ತೊಂದೆಡೆ ವಿಜಯ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ ಉತ್ತಮ ಫ್ರೆಂಡ್ಸ್ ಆಗಿದ್ದು ವಿಜಯ್‌ ಕೆಲವು ವರ್ಷಗಳ ಹಿಂದೆ ಸಿಎಸ್‌ಕೆ ತಂಡದ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದರು.‌
icon

(4 / 10)

ಈ ಎಲ್ಲಾ ಕಾರಣಗಳಿಂದ ಸಿನಿಮಾಗೆ CSK ಹೆಸರು ಬಹುತೇಕ್‌ ಫಿಕ್ಸ್‌ ಎಂಬ ಮಾಹಿತಿ ಇದೆ. ಆದರೆ ಸಿನಿಮಾ ಪ್ರಕಾರ ಸಿಎಸ್‌ಕೆ ಎಂದರೆ ಏನು ಎಂಬುದನ್ನು ತಿಳಿಯಲು ಇನ್ನೂ ಬಹಳ ಸಮಯ ಬೇಕು. 
icon

(5 / 10)

ಚಿತ್ರತಂಡ ಸಿನಿಮಾ ಹೆಸರನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ. ಒಂದು ವೇಳೆ ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಿನಿಮಾಗೆ ಸಿಎಸ್‌ಕೆ ಎಂದು ಹೆಸರಿಟ್ಟಿದ್ದೇ ಆದಲ್ಲಿ ಸಿನಿಮಾ ಖಂಡಿತ ಕ್ರಿಕೆಟ್‌ ಪ್ರೇಮಿಗಳನ್ನೂ ಸೆಳೆಯಲಿದೆ. 
icon

(6 / 10)

ಜೂನ್‌ 22ರಂದು ವಿಜಯ್‌ ಹುಟ್ಟುಹಬ್ಬ ಇದ್ದು ಆ ದಿನ ಬಹುಶ: ಸಿನಿಮಾದ ಹೆಸರು ಅಥವಾ ಸಿನಿಮಾಗೆ ಸಂಬಂಧಿಸಿದ ಅಪ್‌ಡೇಟ್‌ ದೊರೆಯಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 
icon

(7 / 10)

ವಿಜಯ್‌ ಜೊತೆ ನಿರ್ದೇಶಕ ವೆಂಕಟ್‌ ಪ್ರಭು
icon

(8 / 10)

ವಿಜಯ್‌ ಜೊತೆ ನಿರ್ದೇಶಕ ವೆಂಕಟ್‌ ಪ್ರಭು

 'ಲಿಯೋ' ಸಿನಿಮಾ ಬಗ್ಗೆ ಹೇಳುವುದಾದರೆ ಈ ಚಿತ್ರವನ್ನು ಲೋಕೇಶ್‌ ಕನಕರಾಜು ನಿರ್ದೇಶಿಸುತ್ತಿದ್ದಾರೆ. ಸೆವೆನ್‌ ಸ್ಕ್ರೀನ್‌ ಸ್ಟುಡಿಯೋಸ್‌ ಹಾಗೂ ದಿ ರೂಟ್‌ ಚಿತ್ರ ನಿರ್ಮಾಣ ಸಂಸ್ಥೆ ಜೊತೆ ಸೇರಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ. 
icon

(9 / 10)

'ಲಿಯೋ' ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ತ್ರಿಷಾ ನಟಿಸುತ್ತಿದ್ದಾರೆ. ಇವರೊಂದಿಗೆ ಸಂಜಯ್‌ ದತ್‌, ಅರ್ಜುನ್‌ , ಪ್ರಿಯಾ ಆನಂದ್‌, ಗೌತಮ್‌ ವಾಸುದೇವ್‌ ಮೆನನ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಸುಮಾರು 250 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಇದೇ ವರ್ಷ ಅಕ್ಟೋಬರ್‌ನಲ್ಲಿ ತೆರೆ ಕಾಣಲಿದೆ. 
icon

(10 / 10)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು