ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Thalapathy Vijay: ದಳಪತಿ ವಿಜಯ್‌ ಅವರು ದೇವರ ಮಗು; ನೆನಪಿನ ಪುಟಗಳಿಂದ ತಮಿಳು ನಟನ ಬಾಲ್ಯದ ಘಟನೆಗಳನ್ನು ನೆನಪಿಸಿಕೊಂಡ ಶಿಕ್ಷಕಿ

Thalapathy Vijay: ದಳಪತಿ ವಿಜಯ್‌ ಅವರು ದೇವರ ಮಗು; ನೆನಪಿನ ಪುಟಗಳಿಂದ ತಮಿಳು ನಟನ ಬಾಲ್ಯದ ಘಟನೆಗಳನ್ನು ನೆನಪಿಸಿಕೊಂಡ ಶಿಕ್ಷಕಿ

Thalapathy Vijay: ತಮಿಳಿನ ಜನಪ್ರಿಯ ನಟ ದಳಪತಿ ವಿಜಯ್‌ ಕುರಿತು ಅವರ ಶಾಲಾ ಶಿಕ್ಷಕಿ ಮೀನಾ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಲಿಯೋ, ವರಿಸು, ಮಾಸ್ಟರ್‌, ಗಿಲ್ಲಿ, ಮಾರ್ಷಲ್‌, ಬೀಸ್ಟ್‌, ಥೇರಿ, ತುಪಾಕಿ, ಬಿಗಿಲ್‌, ಸರ್ಕಾರ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ವಿಜಯ್‌ ಬಾಲ್ಯದ ಕುರಿತಾದ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

ಬಿಹಾಂಡ್‌ ವುಡ್ಸ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟ ವಿಜಯ್‌ ಅವರ ಶಾಲಾ ಶಿಕ್ಷಕಿ ಮೀನಾ ಅವರು ದಳಪತಿ ವಿಜಯ್‌ ಅವರ ಬಾಲ್ಯದ ಕಥೆಗಳನ್ನು ಹೇಳಿದ್ದಾರೆ. ವಿಜಯ್‌ ಬಾಲ್ಯದ ಫೋಟೋಗಳನ್ನು ನೋಡುತ್ತ ಅವರ ಆ ದಿನಗಳನ್ನು ತಿಳಿಯೋಣ ಬನ್ನಿ.
icon

(1 / 6)

'ನಟ ವಿಜಯ್ ಐದನೇ ತರಗತಿಯಿಂದ ನಮ್ಮ ಶಾಲೆಯಲ್ಲಿ ಓದಿದ್ದಾರೆ. ಅವನು ಎಲ್ಲಾ ಮಕ್ಕಳಂತೆ ತಮಾಷೆ ಮಾಡುತ್ತ ಇರಲಿಲ್ಲ. ತುಂಟನೂ ಆಗಿರಲಿಲ್ಲ. ಅವರು ಯಾವುದೇ ಸಂದರ್ಭದಲ್ಲೂ ಯಾವುದೇ ವಿದ್ಯಾರ್ಥಿಗೆ ಕಿರುಕುಳ ನೀಡಿಲ್ಲ. ಯಾರನ್ನೂ ನೋಯಿಸಲಿಲ್ಲ" ಎಂದು ವಿಜಯ್‌ ಕಲಿತ ಪ್ರಾಥಮಿಕ ಶಾಲೆಯ ಶಿಕ್ಷಕರು ನೆನಪಿಸಿಕೊಂಡಿದ್ದಾರೆ.
icon

(2 / 6)

ತನ್ನ ಮಾತಿನಲ್ಲಾಗಲಿ, ಕೃತಿಯಲ್ಲಿ ಆಗಿರಲಿ, ಯಾರಿಗೂ ಅವನು ತೊಂದರೆ ನೀಡುತ್ತಿರಲಿಲ್ಲ. ಅದಕ್ಕಾಗಿ ನಾವು ಅವನನ್ನು ದೇವರ ಮಗು ಎಂದು ಕರೆಯುತ್ತೇವೆ. ವಿಜಯ್ 5ನೇ ತರಗತಿಯಲ್ಲಿದ್ದಾಗ, ಅವರ ತಂಗಿ ವಿದ್ಯಾ ಎಲ್ಕೆಜಿಯಲ್ಲಿ ಓದುತ್ತಿದ್ದರು. ನಾವು ಅವನನ್ನು ಚಿಟ್ಟೆ ಎಂದು ಕರೆಯುತ್ತೇವೆ ಎಂದು ಅವರು ಹೇಳಿದ್ದಾರೆ. 
icon

(3 / 6)

ವಿಜಯ್ ಗಿಟಾರ್ ನುಡಿಸುತ್ತಿದ್ದ. ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ. ಹೀಗಿರುವಾಗ ವಿದ್ಯಾ ಇದ್ದಕ್ಕಿದ್ದಂತೆ ನಿಧನರಾದರು. ಇದಾದ ಬಳಿಕ ಆಟೋಟಗಳಲ್ಲಿ ಭಾಗವಹಿಸುವುದನ್ನು ವಿಜಯ್‌ ನಿಲ್ಲಿಸಿದರು. 
icon

(4 / 6)

ಬೇಸರದಲ್ಲಿದ್ದ ಈತ ಗಿಟಾರ್‌, ಚಿತ್ರಕಲೆ ಎಲ್ಲವನ್ನೂ ಬಿಟ್ಟುಬಿಟ್ಟ. ತನ್ನ ಮಗಳನ್ನು ಕಳೆದುಕೊಂಡು ಶೋಭಾ ಕೂಡ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಇದು ವಿಜಯ್‌ಗೆ ಸಾಕಷ್ಟು ತೊಂದರೆ ನೀಡಿತ್ತು. ಇವರ ಬಾಲ್ಯ ಸಾಕಷ್ಟು ಕಷ್ಟಮಯವಾಗಿತ್ತು. 
icon

(5 / 6)

ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಮಗು ವಿಜಯ್‌ಗೆ ತಿಳಿದಿರಲಿಲ್ಲ. ಬಳಿಕ ಆತ ಮೌನಿಯಾದನು. ಅವನಿಗೆ ಯಾವುದಾದರೂ ವಿಷಯದಲ್ಲಿ ಆಸಕ್ತಿ ಇದ್ದರೆ ಆತ ಅದರ ಮೇಲೆ ಹೆಚ್ಚಿನ ಗಮನ ನೀಡುತ್ತಾನೆ. ಕ್ರೀಡೆಯಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಸಾಧನೆ ಮಾಡಿದನು. ಕೆಲವೊಮ್ಮೆ ಕೆಲವೊಂದು ವಿಷಯಗಳಲ್ಲಿ ವಿಜಯ್‌ನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು