Malavika Mohanan: ಮೇಡಂ ನಿಮ್ಮ ಮದುವೆ ಯಾವಾಗ? ಅಭಿಮಾನಿಯ ಪ್ರಶ್ನೆಗೆ ತಂಗಲಾನ್‌ ನಟಿ ಮಾಳವಿಕಾ ಮೋಹನನ್ ಹೀಗಂದ್ರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Malavika Mohanan: ಮೇಡಂ ನಿಮ್ಮ ಮದುವೆ ಯಾವಾಗ? ಅಭಿಮಾನಿಯ ಪ್ರಶ್ನೆಗೆ ತಂಗಲಾನ್‌ ನಟಿ ಮಾಳವಿಕಾ ಮೋಹನನ್ ಹೀಗಂದ್ರು

Malavika Mohanan: ಮೇಡಂ ನಿಮ್ಮ ಮದುವೆ ಯಾವಾಗ? ಅಭಿಮಾನಿಯ ಪ್ರಶ್ನೆಗೆ ತಂಗಲಾನ್‌ ನಟಿ ಮಾಳವಿಕಾ ಮೋಹನನ್ ಹೀಗಂದ್ರು

  • Actresss Malavika Mohanan marriage: ಕೆಜಿಎಫ್‌ ಕಥೆ ಹೊಂದಿರುವ ತಂಗಲಾನ್‌ ಸಿನಿಮಾ ಈ ತಿಂಗಳು ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ಮಾಳವಿಕಾ ಮೋಹನನ್ ಎಕ್ಸ್ (ಟ್ವಿಟರ್) ನಲ್ಲಿ ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಪ್ರಶ್ನೆಗಳು, ಅದಕ್ಕೆ ನಟಿ ನೀಡಿರುವ ಉತ್ತರಗಳು ಸಾಕಷ್ಟು ಸ್ವಾರಸ್ಯದಿಂದ ಕೂಡಿತ್ತು.

Thangalaan Movie Actresss Malavika Mohanan: ಪಾ ರಂಜಿತ್ ನಿರ್ದೇಶನದ ಮತ್ತು ಚಿಯಾನ್ ವಿಕ್ರಮ್ ಮತ್ತು ಮಾಳವಿಕಾ ಮೋಹನನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ತಂಗಲನ್ ಬಿಡುಗಡೆಗೆ ಸಿದ್ಧವಾಗಿದೆ. ಈ ಪಿರೆಯಿಡಿಕಲ್‌ ಆಕ್ಷನ್ ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಮಯದಲ್ಲಿ, ಮಾಳವಿಕಾ ಮೋಹನನ್ ನಿನ್ನೆ ಎಕ್ಸ್ (ಟ್ವಿಟರ್) ನಲ್ಲಿ ಆಸ್ಕ್‌ ಮಾಳವಿಕಾ ಹ್ಯಾಷ್‌ಟ್ಯಾಗ್‌ನಡಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ಇವರು ಉತ್ತರಿಸಿದ್ದಾರೆ. 
icon

(1 / 7)

ವಿಕ್ರಮ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ನಿಮಗೆ ಹೇಗನಿಸಿತು? ಅವರೊಂದಿಗಿನ ನಟನೆಯ ನಿಮ್ಮ ಅನುಭವ ಹೇಗಿತ್ತು? ಎಂದು ಒಬ್ಬರು ಪ್ರಶ್ನಿಸಿದರು.ಇದಕ್ಕೆ ಮಾಳವಿಕಾ ಪ್ರತಿಕ್ರಿಯೆ ಹೀಗಿತ್ತು. "ವಿಕ್ರಮ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಸ್ವಲ್ಪ ಭಯವಾಯಿತು" ಎಂದು ಅವರು ಉತ್ತರಿಸಿದರು. "ನಾನು ಇದೇ ಮೊದಲ ಬಾರಿಗೆ ಸ್ಟಂಟ್‌ ಮಾಡಿರುವೆ. ವಿಕ್ರಮ್ ಎಲ್ಲರೊಂದಿಗೂ ಸ್ನೇಹದಿಂದಿರುತ್ತಾನೆ. ಅವರು ಇತರ ನಟರಿಗೆ ತುಂಬಾ ಸಹಾಯ ಮಾಡುತ್ತಾರೆ. ಅವರು ಅದ್ಭುತ ಸಹ ನಟ. ವಿಕ್ರಮ್ ಬಗ್ಗೆ ತನಗೆ ತುಂಬಾ ಗೌರವವಿದೆ" ಎಂದು ಮಾಳವಿಕಾ ಹೇಳಿದ್ದಾರೆ. 
icon

(2 / 7)

ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಅಭಿಮಾನಿಯೊಬ್ಬರು ತುಂಟತನದಿಂದ ಪ್ರಶ್ನಿಸಿದ್ದಾರೆ. ಅದಕ್ಕೆ ಮಾಳವಿಕಾ  "ನನ್ನನ್ನು ವಿವಾಹಿತ ವ್ಯಕ್ತಿಯಾಗಿ ನೋಡಲು ನೀವು ಏಕೆ ಆತುರಪಡುತ್ತೀರಿ?"  ಎಂದು ಉತ್ತರಿಸಿದ್ದಾರೆ. 
icon

(3 / 7)

ತಂಗಲನ್ ಬಗ್ಗೆ ಒಂದು ಮಾತು ಹೇಳಿ ಎಂಬ ಪ್ರಶ್ನೆಗೆ ಮಾಳವಿಕಾ 'ಅದ್ಭುತ' ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು "ತಮ್ಮ ಮುಂದಿನ ಚಿತ್ರದ ಘೋಷಣೆ ಶೀಘ್ರದಲ್ಲೇ ಮಾಡಲಾಗುವುದು" ಎಂದು ಹೇಳಿದ್ದಾರೆ. 
icon

(4 / 7)

"ಮಾಳವಿಕಾ ಮೇಡಂ ನೀವು ಇಲ್ಲಿಯವರೆಗೆ ಮಾಡದ ಯಾವ ಪಾತ್ರವನ್ನು ಮಾಡಲು ಬಯಸುವಿರಿ" ಎಂದು ಒಬ್ಬರು ಕೇಳಿದರು. ಅದಕ್ಕೆ ಮಾಳವಿಕ "ದರೋಡೆಕೋರ" ಪಾತ್ರ ಮಾಡಲು ಬಯಸುವುದಾಗಿ ಹೇಳಿದರು. 
icon

(5 / 7)

ಮಿಳು ನಟ ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾ ಆಗಸ್ಟ್‌ 15ರಂದು ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.
icon

(6 / 7)

ಈ ಸಿನಿಮಾದಲ್ಲಿ  ಮಾಟಗಾರ್ತಿಯಾಗಿ ಮಾಲವಿಕ ಮೋಹನನ್‌  ನಟಿಸಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು