ಐಶ್ವರ್ಯಾ ಅರ್ಜುನ್- ಉಮಾಪತಿ ರಾಮಯ್ಯ ಲವ್ ಸ್ಟೋರಿ; ಅರ್ಜುನ್ ಸರ್ಜಾ ಮಗಳಿಗೆ ತಂಬಿ ರಾಮಯ್ಯನ ಮಗನೊಂದಿಗೆ ಯಾವಾಗ ಶುಭವಿವಾಹ
- Umapathy Ramaiah & Aishwarya Arjun Marriage Date: ಉಮಾಪತಿ ರಾಮಯ್ಯ ಮತ್ತು ಐಶ್ವರ್ಯಾ ಅರ್ಜುನ್ ವಿವಾಹ ಯಾವಾಗ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಇದೇ ಸಮಯದಲ್ಲಿ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯರಿಗೆ ಲವ್ ಆಗಿರುವುದು ಹೇಗೆ, ಇವರ ಲವ್ ಸ್ಟೋರಿ ಏನು ಎಂಬ ಕುತೂಹಲವೂ ಮನೆ ಮಾಡಿದೆ.
- Umapathy Ramaiah & Aishwarya Arjun Marriage Date: ಉಮಾಪತಿ ರಾಮಯ್ಯ ಮತ್ತು ಐಶ್ವರ್ಯಾ ಅರ್ಜುನ್ ವಿವಾಹ ಯಾವಾಗ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಇದೇ ಸಮಯದಲ್ಲಿ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯರಿಗೆ ಲವ್ ಆಗಿರುವುದು ಹೇಗೆ, ಇವರ ಲವ್ ಸ್ಟೋರಿ ಏನು ಎಂಬ ಕುತೂಹಲವೂ ಮನೆ ಮಾಡಿದೆ.
(1 / 9)
ಉಮಾಪತಿ ರಾಮಯ್ಯ ಮತ್ತು ಐಶ್ವರ್ಯಾ ಅರ್ಜುನ್ ವಿವಾಹ ಯಾವಾಗ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಇದೇ ಸಮಯದಲ್ಲಿ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯರಿಗೆ ಲವ್ ಆಗಿರುವುದು ಹೇಗೆ, ಇವರ ಲವ್ ಸ್ಟೋರಿ ಏನು ಎಂಬ ಕುತೂಹಲವೂ ಮನೆ ಮಾಡಿದೆ.
(2 / 9)
Umapathy Ramaiah & Aishwarya Arjun Love Story: ಬಹುಭಾಷಾ ನಟ ಅರ್ಜುನ್ ಸರ್ಜಾರ ಪುತ್ರಿ ಐಶ್ವರ್ಯಾ. ಇವರಿಗೆ ಇತ್ತೀಚೆಗೆ ತಮಿಳು ನಟ ಉಮಾಪತಿ ರಾಮಯ್ಯರ ಜತೆ ನಿಶ್ಚಿತಾರ್ಥ ನಡೆದಿತ್ತು. ಇವರಿಬ್ಬರದ್ದು ಲವ್ ಸ್ಟೋರಿ. ಈ ಪ್ರೇಮಕಥೆಗೆ ಎರಡೂ ಕುಟುಂಬ ಸಮ್ಮತಿ ನೀಡಿ ನಿಶ್ಚಿತಾರ್ಥ ಮಾಡಿದ್ದಾರೆ.
(3 / 9)
Umapathy Ramaiah & Aishwarya Arjun Marriage Date: ಇತ್ತೀಚೆಗೆ ನಿಶ್ಚಿತಾರ್ಥಗೊಂಡಿರುವ ಇವರಿಬ್ಬರ ಮದುವೆ ದಿನಾಂಕ ಸದ್ಯದಲ್ಲಿಯೇ ಬಹಿರಂಗಗೊಳ್ಳಲಿದೆ. ವರದಿಗಳ ಪ್ರಕಾರ ಎರಡೂ ಕುಟುಂಬ ಇದೇ ನವೆಂಬರ್ 8ರಂದು ವಿವಾಹ ದಿನಾಂಕ ಪ್ರಕಟಿಸಲಿದೆ. ಒಂದು ಮೂಲದ ಪ್ರಕಾರ ಇವರ ಶುಭವಿವಾಹ ಫೆಬ್ರವರಿ 2024ರಲ್ಲಿ ನಡೆಯಲಿದೆ.
(4 / 9)
Umapathy Aishwarya Love: ತಂಬಿ ರಾಮಯ್ಯ ಅವರು ತಮಿಳು ಸಿನಿಮೋದ್ಯಮದಲ್ಲಿ ಪ್ರಮುಖ ಕಾಮಿಡಿಯನ್. ಹಲವು ಸಿನಿಮಾಗಳಲ್ಲಿ ತನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಇಂತಹ ಜನಪ್ರಿಯ ಹಾಸ್ಯನಟನ ಮಗ ಉಮಾಪತಿ. ಇವರು ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮನಿಯಾರ್ ಕುಡುಂಬಂ, ತಿರುಮನಮ್, ತನ್ನೆ ವಂದಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
(5 / 9)
Umapathy Ramaiah & Aishwarya Arjun: ಇದೇ ರೀತಿ ಅರ್ಜುನ್ ಸರ್ಜಾರ ಪುತ್ರಿಯೂ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು. ಇವರು ವಿಶಾಲ್‌ರ ಪಟ್ಟಥು ಯಾನೈ ಚಿತ್ರದ ಮೂಲಕ ತಮಿಳು ಚಿತ್ರದಲ್ಲಿ ನಟನೆ ಆರಂಭಿಸಿದರು. ಪ್ರೇಮ ಬರಹ ಎಂಬ ಚಿತ್ರದಲ್ಲಿಯೂ ನಟಿಸಿದ್ದರು. ಬಳಿಕ ಇವರು ಸಿನಿಮಾದಲ್ಲಿ ಮುಂದುವರೆಯಲಿಲ್ಲ.
(6 / 9)
ಐಶ್ವರ್ಯಾ ಅರ್ಜುನ್ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ನೀವು ಹೇಗೆ ಇಬ್ಬರು ಪ್ರೇಮಕ್ಕೆ ಬಿದ್ದಿರಿ? ನಿಮ್ಮ ಲವ್ ಸ್ಟೋರಿಯೇನು ಎಂದು ಅಭಿಮಾನಿಗಳು ಕೇಳ್ತಾ ಇರ್ತಾರೆ. ಆದರೆ, ಈ ಪ್ರಶ್ನೆಗೆ ಐಶ್ವರ್ಯಾ ಇಲ್ಲಿಯವರೆಗೆ ಉತ್ತರಿಸಿಲ್ಲ.
(7 / 9)
ಕೆಲವು ಮೂಲಗಳ ಪ್ರಕಾರ ಇವರಿಬ್ಬರದು ಹಲವು ವರ್ಷಗಳ ಲವ್. ತಮಿಳು ಚಿತ್ರರಂಗದ ಸುಂದರವಾದ ನಟಿಯೆಂಬ ಖ್ಯಾತಿ ಪಡೆದಿದ್ದ ಐಶ್ವರ್ಯಾರನ್ನು ಉಮಾಪತಿ ಇಷ್ಟಪಟ್ಟು ವಿವಾಹವಾಗುತ್ತಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಇತ್ತೀಚೆಗೆ ನಡೆದಿದೆ.
(8 / 9)
ಉಮಾಪತಿ ಈಗ ನಟನೆಯಿಂದ ನಿರ್ದೇಶನದತ್ತ ಹೊರಳಿದ್ದಾರೆ. ರಾಜಕಿಲಿ ಹೆಸರಿನ ಸಿನಿಮಾವನ್ನು ಇವರು ಈಗ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಅಂದಹಾಗೆ ಐಶ್ವರ್ಯ ಅವರು ಕನ್ನಡದಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು