ಮಾತು ತಪ್ಪಿದ ಕಮಲ್ ಹಾಸನ್, ನಿರ್ಮಾಪಕ ಲಿಂಗುಸಾಮಿಯಿಂದ ದೂರು; ಮುನ್ನೆಲೆಗೆ ಬಂತು 9 ವರ್ಷದ ಹಿಂದಿನ 'ಉತ್ತಮ ವಿಲನ್' ವಿಚಾರ
- ಉತ್ತಮ್ ವಿಲನ್ ಚಿತ್ರದ ನಿರ್ಮಾಪಕ ಲಿಂಗುಸಾಮಿ ತಮಿಳು ನಟ ಕಮಲ್ ಹಾಸನ್ ವಿರುದ್ಧ ನಿರ್ಮಾಪಕರ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೂಲಕ 9 ವರ್ಷದ ಹಿಂದಿನ ಹಣಕಾಸು ವಿಚಾರ ಮತ್ತೆ ಸುದ್ದಿಯಲ್ಲಿದೆ.
- ಉತ್ತಮ್ ವಿಲನ್ ಚಿತ್ರದ ನಿರ್ಮಾಪಕ ಲಿಂಗುಸಾಮಿ ತಮಿಳು ನಟ ಕಮಲ್ ಹಾಸನ್ ವಿರುದ್ಧ ನಿರ್ಮಾಪಕರ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೂಲಕ 9 ವರ್ಷದ ಹಿಂದಿನ ಹಣಕಾಸು ವಿಚಾರ ಮತ್ತೆ ಸುದ್ದಿಯಲ್ಲಿದೆ.
(1 / 6)
'ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್' ಸಿನಿಮಾದಿಂದ ನಾವು ಎಲ್ಲವನ್ನೂ ಕಳೆದುಕೊಂಡೆವು ಎಂದು ನಿರ್ಮಾಪಕರಲ್ಲಿ ಒಬ್ಬರಾದ ಲಿಂಗುಸಾಮಿ ಮತ್ತವರ ಸಹೋದರರ ಒಡೆತನದ ತಿರುಪತಿ ಬ್ರದರ್ಸ್ ಸಂಸ್ಥೆ, ಕಮಲ್ ಹಾಸನ್ ವಿರುದ್ಧ ನಿರ್ಮಾಪಕರ ಮಂಡಳಿಯಲ್ಲಿ ದೂರು ದಾಖಲಿಸಿದೆ.
(2 / 6)
9 ವರ್ಷಗಳ ಹಿಂದೆ ತಿರುಪತಿ ಬ್ರದರ್ಸ್ ಸಂಸ್ಥೆಗೆ ಕಾಲ್‌ಶೀಟ್ ನೀಡಿದ್ದ ಕಮಲ್, 50 ಕೋಟಿ ಮೊತ್ತದ ಚಿತ್ರ ನಿರ್ಮಿಸುವ ವಿಚಾರಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಕಮಲ್ ಅವರು ತಿರುಪತಿ ಬ್ರದರ್ಸ್‌ಗೆ ಇಷ್ಟವಾಗದ 'ಉತ್ತಮ ವಿಲನ್' ಚಿತ್ರದ ಕಥೆಯನ್ನು ಬಲವಂತವಾಗಿ ತಂದರು. ಸಿನಿಮಾ ಸೋತರೆ ನಷ್ಟದ ಹೊಣೆ ನಾನೇ ಹೊರುವೆ ಎಂದೂ ಹೇಳಿದ್ದರು.
(3 / 6)
ಚಿತ್ರದ ಮೊದಲ ಪ್ರತಿಯನ್ನು ಪ್ರದರ್ಶಿಸಿದಾಗ ತಿರುಪತಿ ಬ್ರದರ್ಸ್ ಗೆ ಚಿತ್ರ ಇಷ್ಟವಾಗಲಿಲ್ಲ. ಅದಾದ ಬಳಿಕ ಚಿತ್ರವು ಹೀನಾಯವಾಗಿ ಸೋಲನುಭವಿಸಿತು. ಈ ಸೋಲಿನಿಂದ ಕಮಲ್ ಹಾಸನ್ 30 ಕೋಟಿಗೆ ಚಿತ್ರ ಮಾಡಿಕೊಡುವುದಾಗಿ ನಿರ್ಮಾಪಕರಿಗೆ ಭರವಸೆ ನೀಡಿದ್ದರು.
(4 / 6)
'ಉತ್ತಮ ವಿಲನ್' ಚಿತ್ರದ ನಷ್ಟವನ್ನು ಸರಿದೂಗಿಸಲು ನಟ ಕಮಲ್ ಹಾಸನ್ ಮತ್ತೊಂದು ಚಿತ್ರದಲ್ಲಿ ನಟಿಸುವುದಾಗಿ ಭರವಸೆ ನೀಡಿದ್ದರು, ಆದರೆ ಕಳೆದ 9 ವರ್ಷಗಳಿಂದ ಈಗ ತಿರುಪತಿ ಬ್ರದರ್ಸ್ ಸಂಸ್ಥೆಗೆ ಯಾವುದೇ ಚಿತ್ರದ ಕಾಲ್‌ಶೀಟ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ.
(5 / 6)
ನಿರ್ಮಾಪಕರ ಮಂಡಳಿಯು ಮಧ್ಯಪ್ರವೇಶಿಸಿ ಕಮಲ್ ಹಾಸನ್ ಅವರೊಂದಿಗೆ ಮಾತುಕತೆ ನಡೆಸಿದೆ. ಆ ನಿರ್ಮಾಪಕರಿಗೆ ಕಾಲ್‌ಶೀಟ್ ನೀಡುವುದಕ್ಕೂ ವಿನಂತಿಸಿದೆ.
ಇತರ ಗ್ಯಾಲರಿಗಳು