ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Srividya Love Story: ದೊರಕದ ಕಮಲ್‌ ಹಾಸನ್‌ ಪ್ರೀತಿ, ಎರಡನೇ ಲವ್‌ ಸ್ಟೋರಿಯೂ ಭಗ್ನ; ನಟಿ ಶ್ರೀವಿದ್ಯಾರ ದುರಂತ ಪ್ರೇಮಕಥೆ

Srividya Love Story: ದೊರಕದ ಕಮಲ್‌ ಹಾಸನ್‌ ಪ್ರೀತಿ, ಎರಡನೇ ಲವ್‌ ಸ್ಟೋರಿಯೂ ಭಗ್ನ; ನಟಿ ಶ್ರೀವಿದ್ಯಾರ ದುರಂತ ಪ್ರೇಮಕಥೆ

Srividya - Kamal Haasan Love Story: ಕಾಲಿವುಡ್‌ ನಟಿ ಶ್ರೀವಿದ್ಯಾ ಅವರು ನಟ ಕಮಲ್‌ ಹಾಸನ್‌ರನ್ನು ಪ್ರೀತಿಸುತ್ತಿದ್ದರು. ಆದರೆ, ಕಮಲ್‌ ಹಾಸನ್‌ ಅವರು ವಾಣಿ ಗಣಪತಿ ಮೇಲೆ ಪ್ರೀತಿಸುತ್ತಿದ್ದರು. ಕಾಲಿವುಡ್‌ ಕಂಡ ಟ್ರಾಜಿಡಿ ಪ್ರೇಮಕಥೆಯನ್ನು ಇತ್ತೀಚೆಗೆ ಟೂರಿಂಗ್‌ ಟಾಕಿಸ್‌ನಲ್ಲಿ ನಟ ಚಿತ್ರ ಲಕ್ಷ್ಮಣನ್‌ ನೆನಪಿಸಿಕೊಂಡಿದ್ದಾರೆ.

ಇತ್ತೀಚೆಗೆ ಟೂರಿಂಗ್‌ ಟಾಕೀಸ್‌ ಚಾನೆಲ್‌ನಲ್ಲಿ ಖ್ಯಾತ ನಟಿ ಚಿತ್ರ ಲಕ್ಷ್ಮಣ್‌ ಅವರು ನಟಿ ಶ್ರೀವಿದ್ಯಾರ ಆ ಕಾಲದ ಪ್ರೇಮಕಥೆಯನ್ನು ನೆನಪಿಸಿಕೊಂಡಿದ್ದಾರೆ. ಶ್ರೀವಿದ್ಯಾಗೆ ನಟ ಕಮಲ್‌ ಹಾಸನ್‌ ಮೇಲೆ ಲವ್‌ ಆಗಿತ್ತು. ಇನ್ನೇನೂ ತನ್ನ ಪ್ರೀತಿಯನ್ನು ಕಮಲ್‌ ಜತೆ ಹೇಳಿಕೊಳ್ಳಬೇಕೆಂದು ತವಕಿಸುತ್ತಿದ್ದ ಸಂದರ್ಭದಲ್ಲಿ ಕಮಲ್‌ ಹಾಸನ್‌ಗೆ ಬೇರೊಬ್ಬಳ ಜತೆ ಲವ್‌ ಇರುವ ಸಂಗತಿ ಗೊತ್ತಾಯಿತು. ಕಮಲ್‌ ಹಾಸನ್‌ ಅವರು ವಾಣಿ ಗಣಪತಿಯನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದಾಗ ಶ್ರೀವಿದ್ಯಾ ಹತಾಶೆಗೆ ಒಳಗಾದರಂತೆ. 
icon

(1 / 5)

ಶ್ರೀವಿದ್ಯಾ ಅವರು ಮಲಯಾಳಂ ಮತ್ತು ತಮಿಳು ಸಿನಿಮಾದ ಜನಪ್ರಿಯ ನಟಿ. ಇವರು ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಎರಡು ಮುಖ (1969), ಶಿವಭಕ್ತ, ಗೆದ್ದವಳು ನಾನೇ, ಇದು ಸಾಧ್ಯ (1987), ಸುಪ್ರಭಾತ, ಲೇಡಿ ಕಮಿಷನರ್‌, ಭಾಮಾ ಸತ್ಯಭಾಮಾ, ಎಕೆ 47, ನನ್ನವಳು ನನ್ನವಳು, ಸೈನಿಕಾ, ನಾಗಾಭರಣ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
icon

(2 / 5)

ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಇವರು ತಮಿಳು, ಮಲಯಾಳಂನಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಕೆ ಬಾಲಚಂದರ್‌ ಅವರ ಅಪೂರ್ವ ರಾಗಂಗಲ್‌ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿತ್ತು. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ನಾಯಕ ನಟನಾಗಿ ನಟಿಸಿದ್ದರು. ರಜನಿಕಾಂತ್‌ ಅವರು ಈ ಚಿತ್ರದಲ್ಲಿ ಸೈಡ್‌ ಹೀರೋ ಆಗಿದ್ದರು. ಈ ಸಿನಿಮಾದ ಮೂಲಕ ರಜನಿಕಾಂತ್‌ ಸಿನಿ ರಂಗಕ್ಕೆ ಎಂಟ್ರಿ ನೀಡಿದ್ದರು. ಈ ಸಿನಿಮಾದ ಮೂಲಕ ಶ್ರೀವಿದ್ಯಾ ಜನಪ್ರಿಯ ನಟಿಯಾದರು. ಈ ಮೊದಲ ಸಿನಿಮಾ ಶ್ರೀವಿದ್ಯಾ ಜೀವನವನ್ನು ಸಾಕಷ್ಟು ಬದಲಾಯಿಸಿತು.
icon

(3 / 5)

ಶ್ರೀವಿದ್ಯಾ ಅವರು ಅನೈ ವೆಲನ್‌ಕಣ್ಣೈ, ಅನ್‌ಆರ್ಚಿಗಲ್‌, ಅಪೂರ್ವ ರಾಗಂಗಳ್‌ ಸಿನಿಮಾವನ್ನು ಕಮಲ್‌ ಹಾಸನ್‌ ಜತೆ ನಟಿಸಿದ್ದರು. ಈ ಚಿತ್ರದ ನಟನೆ ಸಂದರ್ಭದಲ್ಲಿ ಕಮಲ್‌ ಹಾಸನ್‌ ಜತೆಗೆ ಶ್ರೀವಿದ್ಯಾಗೆ ಪ್ರೀತಿ ಉಂಟಾಗಿತ್ತು. ಆದರೆ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಬೇಕಾದ ಸಂದರ್ಭದಲ್ಲಿ ಕಮಲ್‌ ಹಾಸನ್‌ಗೆ ವಾಣಿ ಗಣಪತಿ ಜತೆ ಲವ್‌ ಇರುವ ಸಂಗತಿ ಗೊತ್ತಾಯಿತು. ಕಮಲ್‌ ಹಾಸನ್‌, ವಾಣಿ ವಿವಾಹ ನಡೆಯಲಿದೆ ಎಂದು ತಿಳಿದಾಗ ತನ್ನ ಪ್ರೀತಿಯನ್ನು ಕೊನೆಗೊಳಿಸಬೇಕಾದ ಪರಿಸ್ಥಿತಿ ಇವರಿಗೆ ಉಂಟಾಯಿತು.
icon

(4 / 5)

ಈ ಭಗ್ನ ಪ್ರೇಮದ ಸಮಯದಲ್ಲಿ  ನಿರ್ದೇಶಕ ಭರತನ್‌ ಅವರ ಜತೆ ಶ್ರೀವಿದ್ಯಾರಿಗೆ ಹೊಸ ಪ್ರೀತಿ ಚಿಗುರಿತು. ಈ ನಿರ್ದೇಶಕರು ಶ್ರೀವಿದ್ಯಾರಿಗೆ ಹಲವು ಸಿನಿಮಾಗಳಲ್ಲಿ ನಾಯಕಿ ಪಾತ್ರ ನೀಡಿದ್ದರು. ಆದರೆ, ಬಳಿಕ ಭರತನ್‌ ಬೇರೆ ಯುವತಿ ಲಲಿತಾ ಎಂಬವರನ್ನು ವಿವಾಹವಾದರು. ಶ್ರೀವಿದ್ಯಾಗೆ ಇದು ಎರಡನೇ ಶಾಕ್‌. ಮೂರನೇ ಬಾರಿ ಶ್ರೀವಿದ್ಯಾಗೆ ಜಾರ್ಜ್‌ ಥಾಮಸ್‌ ಮೇಲೆ ಪ್ರೇಮಾಂಕುರವಾಯಿತು. ಅವರು ಮಲಯಾಳಂ ಸಿನಿಮಾ ಥೆಕ್ಕನಲ್‌ನ ಸಹಾಯಕ ನಿರ್ದೇಶಕರು. ತನ್ನ ಕುಟುಂಬದ ವಿರೋಧದ ನಡುವೆಯೂ ಜಾರ್ಜ್‌ ಥಾಮಸ್‌ರನ್ನು ಶ್ರೀವಿದ್ಯಾ ವಿವಾಹವಾದರು. 
icon

(5 / 5)

IPL_Entry_Point

ಇತರ ಗ್ಯಾಲರಿಗಳು