Sreeleela: ಸೋಲಿನ ಹಣೆಪಟ್ಟಿಯೊಂದಿಗೆ ತಮಿಳಿಗೆ ಹೊರಟು ನಿಂತ್ರಾ ಶ್ರೀಲೀಲಾ? ಕಾಲಿವುಡ್ ಹಿರಿಯ ನಟನಿಗೆ ಜೋಡಿಯಾದ ಕಿಸ್‌ ಬೆಡಗಿ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sreeleela: ಸೋಲಿನ ಹಣೆಪಟ್ಟಿಯೊಂದಿಗೆ ತಮಿಳಿಗೆ ಹೊರಟು ನಿಂತ್ರಾ ಶ್ರೀಲೀಲಾ? ಕಾಲಿವುಡ್ ಹಿರಿಯ ನಟನಿಗೆ ಜೋಡಿಯಾದ ಕಿಸ್‌ ಬೆಡಗಿ Photos

Sreeleela: ಸೋಲಿನ ಹಣೆಪಟ್ಟಿಯೊಂದಿಗೆ ತಮಿಳಿಗೆ ಹೊರಟು ನಿಂತ್ರಾ ಶ್ರೀಲೀಲಾ? ಕಾಲಿವುಡ್ ಹಿರಿಯ ನಟನಿಗೆ ಜೋಡಿಯಾದ ಕಿಸ್‌ ಬೆಡಗಿ PHOTOS

ಕನ್ನಡತಿ ಶ್ರೀಲೀಲಾ ಟೈಮೇ ಸರಿಯಿಲ್ವಾ? ತೆಲುಗಿನಲ್ಲಿ ಸಾಲು ಸಾಲು ಸಿನಿಮಾ ಸೋಲಿನಿಂದ ಶ್ರೀಲೀಲಾ ಕಂಗೆಟ್ಟಿದ್ದಾರೆ. ಸ್ಟಾರ್‌ ಹೀರೋ ಜತೆಗೆ ನಟಿಸಿದ ಸಿನಿಮಾಗಳೆಲ್ಲ ಮೇಲಿಂದ ಮೇಲೆ ನೆಲಕ್ಕಚ್ಚುತ್ತಿವೆ. ಇದರ ಬೆನ್ನಲ್ಲೇ, ಈಗ ಇದೇ ನಟಿ ಸೋಲಿನ ಹಣೆಪಟ್ಟಿಯೊಂದಿಗೆ ತಮಿಳಿಗೆ ಪದಾರ್ಪಣೆ ಮಾಡಲು ಹೊರಟಿದ್ದಾರೆ.

ಸರಣಿ ಸಿನಿಮಾಗಳ ಸೋಲಿನಿಂದಾಗಿ ತೆಲುಗಿನಲ್ಲಿ ಶ್ರೀಲೀಲಾ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿವೆ ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ಇದೇ ನಟಿ ಈಗ ಪಕ್ಕದ ತಮಿಳಿಗೆ ಹೊರಟಿದ್ದಾರೆ ಎಂದೂ ಹೇಳಲಾಗುತ್ತಿದೆ. 
icon

(1 / 5)

ಅಜಿತ್ ಅಭಿನಯದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ಮೂಲಕ ಶ್ರೀಲೀಲಾ ಕಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಆಕ್ಷನ್ ಎಂಟರ್ಟೈನರ್ ಚಿತ್ರವನ್ನು ಅಧಿಕಾರ್ ರವಿಚಂದ್ರನ್ ನಿರ್ದೇಶಿಸುತ್ತಿದ್ದಾರೆ. 
icon

(2 / 5)

ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ಶ್ರೀಲೀಲಾ ಅವರೊಂದಿಗೆ ಮತ್ತೊಬ್ಬ ಸ್ಟಾರ್ ನಾಯಕಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ಆ ನಟಿ ಯಾರೆಂಬುದನ್ನು ಶೀಘ್ರದಲ್ಲೇ ಘೋಷಿಸಲಿದೆಯಂತೆ ಚಿತ್ರತಂಡ.
icon

(3 / 5)

ಕಳೆದ ವರ್ಷ ತೆಲುಗಿನಲ್ಲಿ ಶ್ರೀಲೀಲಾ ಅಭಿನಯದ  ಸ್ಕಂದ, ಆದಿಕೇಶವ ಮತ್ತು ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಚಿತ್ರಗಳು ಸೋತು ಸುಣ್ಣವಾದವು. 
icon

(4 / 5)

ಇತ್ತ ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿಲ್ಲ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಗೌತಮ್ ಕಾಂಬಿನೇಷನ್‌ ಚಿತ್ರದಿಂದಲೂ ಶ್ರೀಲೀಲಾ ಹಿಂದೆ ಸರಿದರು ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ MBBS ವಿದ್ಯಾಭ್ಯಾಸ ಮುಂದುವರಿಸುವುದಾಗಿಯೂ ಅವರು ಹೇಳಿದ್ದರು. ಹೀಗಿರುವಾಗಲೇ ಈಗ ಅಜಿತ್‌ ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. 
icon

(5 / 5)

ಇತರ ಗ್ಯಾಲರಿಗಳು