Thangalaan vs KGF: ಯಶ್ ಕೆಜಿಎಫ್‌ಗಿಂತ ತಂಗಲಾನ್ ಹಳೆಕಥೆ; ಕೋಲಾರ ಚಿನ್ನದ ಗಣಿಯ ಮತ್ತಷ್ಟು ರಕ್ತಸಿಕ್ತ ಅಧ್ಯಾಯ ಆಗಸ್ಟ್ 15ರಂದು ತೆರೆಗೆ
- ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಸಿನಿಮಾವಾಗಿತ್ತು. ಅದೇ ಕೆಜಿಎಫ್‌ನ ಹಿನ್ನಲೆಯಲ್ಲಿ ಇನ್ನೊಂದು ಸಿನಿಮಾ "ತಂಗಲಾನ್" ಮುಂದಿನ ತಿಂಗಳು ಆಗಸ್ಟ್ 15ರಂದು ತೆರೆ ಕಾಣಲಿದೆ. ಕೆಜಿಎಫ್‌ನ ಸ್ವಾತಂತ್ರ್ಯ ಪೂರ್ವ "ನೈಜ ಕಾಲ್ಪನಿಕ" ಕಥೆಯ ಸಮ್ಮಿಶ್ರವಾಗಿರಲಿದೆ. ಹಲವು ಕಾರಣಗಳಿಂದ ತಂಗಲಾನ್ ನಿರೀಕ್ಷೆ ಹೆಚ್ಚಿಸಿದೆ.
- ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಸಿನಿಮಾವಾಗಿತ್ತು. ಅದೇ ಕೆಜಿಎಫ್‌ನ ಹಿನ್ನಲೆಯಲ್ಲಿ ಇನ್ನೊಂದು ಸಿನಿಮಾ "ತಂಗಲಾನ್" ಮುಂದಿನ ತಿಂಗಳು ಆಗಸ್ಟ್ 15ರಂದು ತೆರೆ ಕಾಣಲಿದೆ. ಕೆಜಿಎಫ್‌ನ ಸ್ವಾತಂತ್ರ್ಯ ಪೂರ್ವ "ನೈಜ ಕಾಲ್ಪನಿಕ" ಕಥೆಯ ಸಮ್ಮಿಶ್ರವಾಗಿರಲಿದೆ. ಹಲವು ಕಾರಣಗಳಿಂದ ತಂಗಲಾನ್ ನಿರೀಕ್ಷೆ ಹೆಚ್ಚಿಸಿದೆ.
(1 / 17)
ಕೆಜಿಎಫ್ ಎಂದಾಗ ನೆನಪಿಗೆ ಬರುವುದು ಕೋಲಾರ ಚಿನ್ನದ ಗಣಿ ಮತ್ತು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್. ಇನ್ನು ಮುಂದೆ ಕೆಜಿಎಫ್ ಎಂದಾಗ ತಂಗಲಾನ್ ಎಂದು ನೆನಪಾದರೆ ಅಚ್ಚರಿಯಿಲ್ಲ. ಚಿಯಾನ್ ವಿಕ್ರಮ್, ಮಾಳವಿಕ ಮೋಹನನ್ ನಟಿಸಿರುವ ತಂಗಲಾನ್ ಸಿನಿಮಾದ ಟ್ರೇಲರ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ತಮಿಳು ಸಿನಿಮಾವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
(2 / 17)
ಯಶ್ ನಟನೆಯ ಕೆಜಿಎಫ್ ಸಿನಿಮಾವು ಕೋಲಾರ ಚಿನ್ನದ ಗಣಿಯ ಆಡಳಿತವನ್ನು ತನ್ನದಾಗಿಸಿಕೊಂಡು ಶ್ರೀಮಂತನಾಗಿ ಬೆಳೆದ ವ್ಯಕ್ತಿಯ ಕಥೆಯಾಗಿದೆ. ಆದರೆ, ತಂಗಲಾನ್ ಸಿನಿಮಾವು ಕೆಜಿಎಫ್ ಅನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಉಳಿಸಿಕೊಳ್ಳಲು ನಡೆಸುವ ಸ್ವಾತಂತ್ರ್ಯದ ಹೋರಾಟದ ಹಿನ್ನಲೆಯನ್ನು ಹೊಂದಿದೆ.
(3 / 17)
ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದ ಕಥೆಗಳಲ್ಲಿ ಕೆಜಿಎಫ್‌ನ ಚಿನ್ನದ ಗಣಿಯನ್ನು ದೋಚಿರುವ ಕಥೆಯೂ ಇದೆ. ಇಲ್ಲಿನ ಚಿನ್ನವನ್ನು ರಕ್ಷಿಸಲು ಗ್ರಾಮಸ್ಥರು ಪ್ರಯತ್ನಿಸುವ ಕಥೆಯನ್ನು ಹೊಂದಿರಲಿದೆ. ಇಲ್ಲಿನ ಚಿನ್ನದ ಸಂಪನ್ಮೂಲ ಉಳಿಸಲು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಮಾಯಾವಿಯ ನೆರವೂ ಇರಲಿದೆ.
(4 / 17)
ಕಪ್ಪು ಹುಲಿ, ಹಾವುಗಳು, ಬೆಂಕಿ, ಗ್ರಾಮಸ್ಥರ ವೇಷಭೂಷಣ ಸೇರಿದಂತೆ ಹಲವು ಕಾರಣಗಳಿಂದ ಟ್ರೇಲರ್ ನಿರೀಕ್ಷೆ ಹುಟ್ಟಿಸಿದೆ. ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಹೀರೋಯಿಸಂಗೆ ಎಲ್ಲಿಲ್ಲದ ಮಹತ್ವವಿತ್ತು. ಆದರೆ, ತಂಗಲಾನ್‌ನಲ್ಲಿ ನಟ ಚಿಯಾನ್ ವಿಕ್ರಮ್‌ನ ಹೀರೋಯಿಸಂಗಿಂತ ಗಟ್ಟಿ ಕಥೆ, ಚಿತ್ರಕಥೆಗೆ ಹೆಚ್ಚಿನ ಮಹತ್ವ ನೀಡಿದಂತೆ ಇದೆ.
(5 / 17)
ಈ ಟ್ರೇಲರ್‌ನಲ್ಲಿ ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬುಡಕಟ್ಟು ನಾಯಕನಂತೆ ಕಾಣಿಸುವ ವಿಕ್ರಮ್ ಬ್ರಿಟಿಷರಿಗೆ ತನ್ನ ಗ್ರಾಮದಲ್ಲಿರುವ ಚಿನ್ನದ ಗಣಿಗಳನ್ನು ಪತ್ತೆಹಚ್ಚಲು ನೆರವು ನೀಡುತ್ತಾರೆ. ಚಿನ್ನದ ಹುಡುಕಾಟ ನಡೆಸುವ ಸಂದರ್ಭದಲ್ಲಿ ಹಲವು ಕೊಲೆಗಳು, ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಇದನ್ನೆಲ್ಲ ಮಾಡುತ್ತಿರುವ ಮಾಟಗಾರ ಯಾರು ಎಂಬ ಪ್ರಶ್ನೆಗೆ "ಮಾಟಗಾರ ಅಲ್ಲ, ಮಾಟಗಾರ್ತಿ, ಆರತಿ" ಎನ್ನುವ ಉತ್ತರ ದೊರಕುತ್ತದೆ.
(6 / 17)
ಆ ಮಾಟಗಾರ್ತಿಯನ್ನು ಯಾರು ತಡೆಯುತ್ತಾರೆ? ಈಕೆ ಕೆಜಿಎಫ್ ರಕ್ಷಣೆಗೆ ಇರುವ ಮಹಿಳೆಯೇ? ಇತ್ಯಾದಿ ಪ್ರಶ್ನೆಗಳನ್ನು ಟ್ರೇಲರ್ ಉಳಿಸಿದೆ. ಮಾಟಗಾರ್ತಿಯಾಗಿ ಮಾಲವಿಕ ಮೋಹನನ್ ಅದ್ಭುತವಾಗಿ ನಟಿಸಿರುವುದನ್ನು ಟ್ರೇಲರ್‌ನಲ್ಲಿ ನೋಡಬಹುದು. ಈಕೆಯನ್ನು ತಂಗಲಾನ್ ಹೇಗೆ ಎದುರಿಸುತ್ತಾನೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.
(7 / 17)
ಈ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಸಿನಿಮಾ ಭಾರತದ ಇತಿಹಾಸದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಈ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಖಾತ್ರಿ ಎಂದಿದ್ದಾರೆ.
(8 / 17)
ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಮಾತ್ರವಲ್ಲದೆ ಪಾರ್ವತಿ ಥಿರುವೊಟ್ಟು, ಪಶುಪತಿ, ಡೇನಿಯಲ್ ಕ್ಲಾಟಿಗೆರನ್, ಹರಿಕೃಷ್ಣನ್, ವಿಟ್ಟೈ ಮುತ್ತುಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(9 / 17)
ಎರಡು ನಿಮಿಷದ ಈ ಟ್ರೇಲರ್‌ನಲ್ಲಿ ಬ್ರಿಟಿಷ್ ಆಫೀಸರ್‌ಗೆ ಗ್ರಾಮಸ್ಥರು ಚಿನ್ನದ ಹುಡುಕಾಟಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಆಗ ಅಲ್ಲಿನ ನಿಗೂಢ ಶಕ್ತಿಧಾರಿಣಿ ಆರತಿ ಕಾಣಿಸಿಕೊಳ್ಳುತ್ತಾಳೆ.
(10 / 17)
ಯಾರು ಈ ಆರತಿ? ಈಕೆ ಚಿನ್ನ ಹುಡುಕದಂತೆ ಗ್ರಾಮಸ್ಥರನ್ನು ತಡೆಯುವುದೇಕೆ? ವಿಕ್ರಮ್‌ಗೆ ಆರತಿ ಬಗ್ಗೆ ಏನು ಗೊತ್ತು? ಮುಂತಾದ ಪ್ರಶ್ನೆಗಳನ್ನು ಈ ಟ್ರೇಲರ್ ಉಳಿಸಿದೆ.
(11 / 17)
ಆಗಸ್ಟ್ 15ರಂದು ಬಿಡುಗಡೆಯಾಗುವ ಈ ತಂಗಲಾನ್ ಸಿನಿಮಾ ಯಶ್ ಕೆಜಿಎಫ್ ದಾಖಲೆಗಳನ್ನು ಅಳಿಸಿ ಹಾಕುವುದೇ ಎಂಬ ಕುತೂಹಲವೂ ಇದೆ.
(12 / 17)
ಈ ಸಿನಿಮಾ ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ರಿಲೀಸ್ ಆಗಬೇಕಿತ್ತು. ಬಳಿಕ ಇದನ್ನು ಏಪ್ರಿಲ್‌ಗೆ ಪೋಸ್ಟ್ ಪೋನ್ ಮಾಡಲಾಗಿತ್ತು.
(13 / 17)
ಇದೀಗ ಈ ವರ್ಷದ ಸ್ವಾತಂತ್ರ್ಯ ದಿನದಂದು ಅಂದರೆ, ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕನ್ನಡದ ಕೆಜಿಎಫ್‌ನಂತೆ ಬ್ಲಾಕ್ ಬಸ್ಟರ್ ಸಿನಿಮಾವಾಗುವುದೇ ಎಂಬ ನಿರೀಕ್ಷೆಯನ್ನು ಟ್ರೇಲರ್ ಹುಟ್ಟುಹಾಕಿದೆ.
(14 / 17)
ಮಿಳು ನಟ ಚಿಯಾನ್ ವಿಕ್ರಮ್ ನಟನೆಯ ತಂಗಲಾನ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದ ಟ್ರೇಲರ್ ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.
(15 / 17)
19ನೇ ಶತಮಾನದ ಕೋಲಾರ ಚಿನ್ನದ ಗಣಿಯ ಐತಿಹಾಸಿಕ ಸಾಹಸ ಕಥೆಯನ್ನು ಹೇಳುವ ಭರವಸೆಯನ್ನು ತಂಗಲಾನ್ ಸಿನಿಮಾ ನೀಡಿದೆ.
(16 / 17)
ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಸ್ವಾತಂತ್ರ್ಯದ ಕಥೆಯಾಗಿ, ಬ್ರಿಟಿಷರಿಂದ ಕೋಲಾರದ ಚಿನ್ನದ ಗಣಿಯ ಸಂಪತ್ತು ಉಳಿಸಿಕೊಳ್ಳುವ ಕಥನವಾಗಿಯೂ ತಂಗಲಾನ್ ಗಮನ ಸೆಳೆಯುವ ನಿರೀಕ್ಷೆಯಿದೆ.
ಇತರ ಗ್ಯಾಲರಿಗಳು