ವಿಜಯನಗರ ಸಾಮ್ರಾಜ್ಯದ ರಕ್ಷಕಿ 800 ವರ್ಷ ಇತಿಹಾಸದ ಶ್ರೀಕ್ಷೇತ್ರ ಹುಲಿಗಿ ಹುಲಿಗೆಮ್ಮದೇವಿ; ಜಾತ್ರಾ ಮಹೋತ್ಸವದಲ್ಲಿ ನಿರಂತರ ಅನ್ನದಾಸೋಹ
ಕೊಪ್ಪಳ ಜಿಲ್ಲೆ ತುಂಗಭದ್ರಾ ತೀರದ ಮುನಿರಾಬಾದ್‌ನ ಶ್ರೀ ಕ್ಷೇತ್ರ ಹುಲಿಗಿಯಲ್ಲಿ ಈಗ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಸಡಗರ. ಈಗಾಗಲೇ ಜಾತ್ರಾ ಮಹೋತ್ಸವದ ಭಾಗವಾಗಿ ಚಟುವಟಿಕೆ ಶುರುವಾಗಿದ್ದು, ದಾಸೋಹವನ್ನು ಆರಂಭಿಸಲಾಗಿದೆ.
(1 / 8)
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನವು ಉತ್ತರ ಕರ್ನಾಟಕದ ಜನಪ್ರಿಯ ದೇವಾಲಯಗಳಲ್ಲಿ ಒಂದು, ಇದು ತುಂಗಭದ್ರಾ ನದಿಯ ದಡದಲ್ಲಿರುವ 13 ನೇ ಶತಮಾನದ ದೇವಾಲಯ. ಇದು ಹುಲಿಗಿ (ಮುನಿರಾಬಾದ್) ಎಂ ರೇಣುಕಾ ದೇವತೆಯ ರೂಪವಾದ ಹುಲಿಗೆಮ್ಮ ದೇವಿಗೆ ಸಮರ್ಪಿತವಾದ ಕ್ಷೇತ್ರ..
(2 / 8)
ಕೊಪ್ಪಳ ಹಾಗೂ ಹೊಸಪೇಟೆಗೆ ಸಮೀಪದಲ್ಲೇ ಇರುವ ಈ ದೇಗುಲಕ್ಕೆ ತನ್ನದೇ ಆದ ವಿಶೇಷವಿದ್ದು, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
(3 / 8)
ದಂತಕಥೆಗಳ ಪ್ರಕಾರ, ಹುಲಿಗಿಯಲ್ಲಿ ವಾಸಿಸುವ ನಾಗಜೋಗಿ ಮತ್ತು ಬಸವಜೋಗಿ ಎಂಬ ರೇಣುಕಾ ಯಲ್ಲಮ್ಮ ದೇವಿಯ ಇಬ್ಬರು ಭಕ್ತರು ಪ್ರತಿ ಹುಣ್ಣಿಮೆಯ ದಿನದಂದು ದೇವಿಯ ರೇಣುಕಾ ಯಲ್ಲಮ್ಮ ದೇವಿಯನ್ನು ಭೇಟಿ ಮಾಡುತ್ತಿದ್ದರು. ಹುಣ್ಣಿಮೆಯ ದಿನಗಳಲ್ಲಿ ಭಾರಿ ಮಳೆಯಾದ ಕಾರಣ ಈ ಭಕ್ತರು ಯಲ್ಲಮ್ಮ ದೇವಿಯ ಸ್ಮರಣೆಗಾಗಿ ಇಡೀ ರಾತ್ರಿ ಮಳೆಯಲ್ಲಿ ಮುಳುಗಿ ಯಲ್ಲಮ್ಮ ದೇವಿಯನ್ನು ಸ್ಮರಿಸಬೇಕಾಯಿತು. ಶಕ್ತಿ ಮಾತೆ ತನ್ನ ಭಕ್ತರಾದ ನಾಗಜೋಗಿ ಮತ್ತು ಬಸವಜೋಗಿಯ ಮುಂದೆ ಕಾಣಿಸಿಕೊಂಡರು ಮತ್ತು ಹುಣ್ಣಿಮೆಯ ದಿನಗಳಲ್ಲಿ ಯಲ್ಲಮ್ಮಗುಡ್ಡಕ್ಕೆ ಪ್ರಯಾಣಿಸಲು ಅವರು ಕಷ್ಟಪಡಬೇಕಾಗಿಲ್ಲ ಎಂದು ತಮ್ಮ ಪ್ರದೇಶದಲ್ಲಿ ವಾಸಿಸುವುದಾಗಿ ಭರವಸೆ ನೀಡಿದರು. ಆದ್ದರಿಂದ, ದೇವಿಯು ಹುಲಿಗಿಯಲ್ಲಿ ಸಾಲಿಗ್ರಾಮ ಮತ್ತು ಶ್ರೀ ಚಕ್ರವಾಗಿ ಕಾಣಿಸಿಕೊಂಡರು.
(4 / 8)
ವಿಜಯನಗರ ಸಾಮ್ರಾಜ್ಯದ ರಕ್ಷಕಿ ಎಂದು ಕರೆಯಲಾಗುವ ಹುಲಿಗೆಮ್ಮ ದೇವಿ ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ದೇವಿ ಕ್ಷೇತ್ರದಷ್ಟೇ ಮಹತ್ವವಿದೆ.
(5 / 8)
ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು 2025 ರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳನ್ನು ಅತಿ ವಿಜೃಂಭಣೆಯಿಂದ ಮತ್ತು ವ್ಯವಸ್ಥಿತವಾಗಿ ಆಯೋಜಿಸುತ್ತದೆ.ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಪ್ರಯುಕ್ತ ಅಮ್ಮನ ಸನ್ನಿಧಾನದಲ್ಲಿ ಭಕ್ತಾದಿಗಳಿಗೆ ವಿಶೇಷ ಮಹಾಪ್ರಸಾದ ಇರುತ್ತದೆ
(6 / 8)
ಈ ಬಾರಿಯ ಜಾತ್ರಾ ಮಹೋತ್ಸವ ಅಂಗವಾಗಿ ನಾನಾ ಧಾರ್ಮಿಕ ಚಟುವಟಿಕೆಗಳು ಶುರುವಾಗಿದ್ದು. ಇನ್ನೂ ಎರಡು ವಾರಗಳ ಕಾಲ ಇರಲಿದೆ.ದಾಸೋಹ ಒಂದು ತಿಂಗಳು ನಿರಂತರ ಇರಲಿದೆ.
(7 / 8)
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ - 2025ರ ಕಾರ್ಯಕ್ರಮಗಳ ಭಾಗವಾಗಿಮೇ 20 ಮಂಗಳವಾರ ಉತ್ಸವ, ಸಂಜೆ 7-00 ಗಂಟೆಗೆಮೇ 22ರ ಗುರುವಾರ- ಬಾಳೆದಂಡಿಗೆ ಶುಕ್ರವಾರ ಬೆಳಗಿನ ಜಾವ 3.30 ಗಂಟೆಗೆಮೇ 23-ರಂದು ಪಾಯಸ ಅಗ್ನಿಕುಂಡ ಶನಿವಾರ ಬೆಳಗಿನ ಜಾವ 4.00 ಗಂಟೆಯಿಂದ 6.30ರ ವರೆಗೆ ನಡೆಯಲಿದೆ.
ಇತರ ಗ್ಯಾಲರಿಗಳು