Koppal Jatre 2025: ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅಕ್ಕ ಅಂಗಾರ ತಂಗಿ ಬಂಗಾರ ನಾಟಕದ ವೈಭವ; ಕಲಾಭಿಮಾನಿಗಳಿಗೆ ರಸದೌತಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Koppal Jatre 2025: ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅಕ್ಕ ಅಂಗಾರ ತಂಗಿ ಬಂಗಾರ ನಾಟಕದ ವೈಭವ; ಕಲಾಭಿಮಾನಿಗಳಿಗೆ ರಸದೌತಣ

Koppal Jatre 2025: ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅಕ್ಕ ಅಂಗಾರ ತಂಗಿ ಬಂಗಾರ ನಾಟಕದ ವೈಭವ; ಕಲಾಭಿಮಾನಿಗಳಿಗೆ ರಸದೌತಣ

  • ಕೊಪ್ಪಳ ಜಾತ್ರೆಯಲ್ಲಿ ಏನುಂಟು ಏನಿಲ್ಲ. ಜಾತ್ರೆಯಲ್ಲಿ ಕುಮಾರೇಶ್ವರ ಕೃಪಾ ಪೋಷಿತ  ಪಂಡಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘವು ಅಕ್ಕ ಅಂಗಾರ ತಂಗಿ ಬಂಗಾರವನ್ನು ಪ್ರದರ್ಶಿಸುತ್ತಿದೆ. ಇದರ ಚಿತ್ರ ನೋಟ ಇಲ್ಲಿದೆ
  • ಚಿತ್ರಗಳು: ಜಗದೀಶ್‌ ಚೆಟ್ಟಿ

ತಂತ್ರಜ್ಞಾನದ ವೇಗಕ್ಕೆ ಸಿಲುಕಿ ನಶಿಸುತ್ತಿರುವ ರಂಗಭೂಮಿ ಕಲೆಯನ್ನು ಉಳಿಸಲು ಕೆಲವೇ ಕೆಲವು ರಂಗಭೂಮಿ ಕಲಾ ತಂಡಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿವೆ. ಅದರಲ್ಲಿ ಒಂದಾಗಿರುವ ಶ್ರೀಕುಮಾರೇಶ್ವರ_ಕೃಪಾಪೋಷಿತ ಶ್ರೀ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘ ಸುಮಾರು ಎಂಟು ದಶಕಗಳಿಂದ ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂದಿದೆ.  
icon

(1 / 6)

ಹೇಮರಡ್ಡಿ ಮಲ್ಲಮ್ಮ” “ಶಿವಶರಣೆ ಅಕ್ಕಮಹಾದೇವಿ”, ಅಂತಹ ಪ್ರಸಿದ್ಧ ನಾಟಕಗಳನ್ನು ಸಾವಿರ ಪ್ರಯೋಗಗಳ ಮೂಲಕ ನಾಡಿಗೆ ಪ್ರಸ್ತುತಪಡಿಸಿದ ಪಂಡಿತ್ ಪುಟ್ಟರಾಜ ಗವಾಯಿಗಳವರ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಸಂಘವು ಈಗ ಕೊಪ್ಪಳದಲ್ಲಿ ‘ಮಹದೇವ ಹೊಸೂರ' ಅವರು ಬರೆದು, ನಿರ್ದೇಶಿಸಿ, ನಟಿಸಿರುವ “ಅಕ್ಕ ಅಂಗಾರ ತಂಗಿ ಬಂಗಾರ” (ಗಡಿಗಿ ಜ್ವಾಕಿ ತಂಗಿ) ಎಂಬ ನಾಟಕ ಪ್ರದರ್ಶನ ರೂಪಿಸಿದೆ.
icon

(2 / 6)

(ಜಗದೀಶ ಚೆಟ್ಟಿ)

ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಡಗರ ಈಗಾಗಲೇ ಶುರುವಾಗಿದೆ. ಜಾತ್ರಾ ಮಹೋತ್ಸವದಲ್ಲಿ ನಾಟಕ ಕೂಡ ಕಲಾಭಿಮಾನಿಗಳನ್ನು ಆಕರ್ಷಿಸುತ್ತಿದ್ದು ನಾಟಕೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು.
icon

(3 / 6)

ಗ್ರಾಮೀಣ ಬದುಕಿನ ಜಾತಿ-ಮತ-ಪಂಥಗಳನ್ನು ಮೀರಿದ ಕುಟುಂಬದ ಕಥಾ ಹಂದರವನ್ನು ಹೊಂದಿರುವ ಅತ್ಯಂತ ಸರಳ ಅರ್ಥಗರ್ಭಿತ ನಿರೂಪಣೆ, ಅನುಭವಿ ಕಲಾ ಬಳಗವನ್ನು ಹೊಂದಿರುವ ನಾಟಕ ಇದಾಗಿದೆ.  
icon

(4 / 6)

ಈ ವರೆಗೆ ಭಕ್ತಿ ಪ್ರಧಾನ ಸೇರಿದಂತೆ ಸಾಮಾಜಿಕ ಕಳಕಳಿಯುಳ್ಳ ಹತ್ತು ಹಲವು ನಾಟಕಗಳ ಸಾವಿರಾರು ಪ್ರದರ್ಶನ ನೀಡಿದ ಹಿರಿಮೆ ಈ ಸಂಘಕ್ಕೆ ಸಲ್ಲುತ್ತದೆ. ಅಲ್ಲದೇ ಈ ನಾಟಕದ ಆದಾಯ ಬಹುಪಾಲು ಗದಗದ ವಿರೇಶ್ವರ ಪುಣ್ಯಾಶ್ರಮದ ಅಂಧ, ಅನಾಥ ಮಕ್ಕಳ ಆರೈಕೆಗೆ ತಲುಪಲಿದೆ ಎನ್ನುವುದು ವಿಶೇಷ 
icon

(5 / 6)

ಕೊಪ್ಪಳದ ಶ್ರೀ ಗವಿಮಠದ ಕೂಗಳತೆ ದೂರದಲ್ಲಿ ಫಕ್ಕೀರಪ್ಪ ಆರೇರ ಅವರ ಜಾಗೆಯಲ್ಲಿ ಜೇವರ್ಗಿ ಅವರು ಹಾಕಿಕೊಟ್ಟಿರುವ ಭವ್ಯರಂಗ ಸಜ್ಜಿಕೆಯಲ್ಲಿ ಪ್ರತಿ ಸಂಜೆ 6.15 ಮತ್ತು ರಾತ್ರಿ 9.45 ಕ್ಕೆ ನಾಟಕ ಪ್ರದರ್ಶನ ನಡೆಯುತ್ತದೆ. ಏಕಕಾಲಕ್ಕೆ ಸುಮಾರು 400 ಕ್ಕೂ ಅಧಿಕ ಜನ ಕುಳಿತುಕೊಂಡು ಈ ನಾಟಕ ವೀಕ್ಷಣೆ ಮಾಡಬಹುದಾಗಿದೆ. 
icon

(6 / 6)

ಇತರ ಗ್ಯಾಲರಿಗಳು