Koppal Jatre 2025: ಕೊಪ್ಪಳ ಗವಿಮಠದ ದಾಸೋಹದ ಹಿಂದೆ ಇವೆ ನೂರಾರು ಕೈಗಳ ದಾನದ ಸೇವೆ; ಹೀಗಿತ್ತು ಆ ಸಂತೃಪ್ತಿ ಕ್ಷಣಗಳು
Koppal Jatre 2025: ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ದಾಸೋಹವೂ ಪ್ರಮುಖ. ನಿತ್ಯ ಬರುವ ಭಕ್ತರಿಗೆ ಉಣಬಡಿಸುವ ಹಿಂದೆ ಭಕ್ತರ ಸೇವೆಯೂ ಇದೆ. ಅದರ ನೋಟ ಇಲ್ಲಿದೆ.
(1 / 9)
ಕೊಪ್ಪಳ ಅಜ್ಜನ ಜಾತ್ರೆಗೆ ಏನಾದರೂ ಕೊಟ್ಟರೆ ನಮಗೂ ನೆಮ್ಮದಿ ಎಂಬ ಭಾವದೊಂದಿಗೆ ಲಾಯದುಣಸಿ ಗ್ರಾಮಸ್ಥರು ಮಾಡಿದ್ದು ಬೂಂದಿಸೇವೆ.
(2 / 9)
ಲಕ್ಷಾಂತರ ಭಕ್ತರಿಗೆ ನಿತ್ಯ ರೊಟ್ಟಿ ಊಟ ಇರುವುದರಿಂದ ಅದಕ್ಕೆ ಜತೆಯಾಗಿ ಶೇಂಗಾ ಚಟ್ನಿಯನ್ನೂ ನೀಡಲಾಗುತ್ತದೆ. ಹೀಗೆ ಟನ್‌ಗಟ್ಟಲೇ ಶೇಂಗಾ ಚಟ್ನಿ ಮಠದ ದಾಸೋಹ ಭವನಕ್ಕೆ ಬಂದಿದೆ.
(3 / 9)
ನರೇಗಾದಲ್ಲಿ ಕೆಲಸ ಮಾಡುವವರು ಸೇರಿದಂತೆ ಹಲವು ಮಂದಿ ಪ್ರೀತಿಯಿಂದ ಕೊಪ್ಪಳ ಜಾತ್ರೆಗೆ ರೊಟ್ಟಿ ನೀಡಿದ್ದಾರೆ, ಈಗ ನೀಡಿದ ರೊಟ್ಟಿ ಪ್ರಮಾಣವೇ 20 ಲಕ್ಷ ತಲುಪಿದೆ.
(4 / 9)
ಕೊಪ್ಪಳದ ಜಾತ್ರೆಯಲ್ಲಿ ದಾನ ಮಾಡಿದವರು ಯಾರುಂಟು ಯಾರಿಲ್ಲ ಎನ್ನುವಂತೆ ಶೇಂಗಾ ಚಟ್ನಿ ಸಹಿತ ಹಲವು ವಸ್ತುಗಳನ್ನು ನೀಡಲಾಗಿದೆ.
(5 / 9)
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಹಾಗರಗುಂಡ ಗ್ರಾಮದ ಗ್ರಾಮಸ್ಥರು ಪ್ರೀತಿಯಿಂದ ಶೇಂಗಾ ಚಟ್ನಿಯನ್ನು ತಯಾರಿಸಿ ಕಳುಹಿಸಿದ್ದಾರೆ.
(6 / 9)
ಕೊಪ್ಪಳದ ಹಲವು ಭಕ್ತರು ಶ್ರೀ ಮಠಕ್ಕೆ ಬೆಲ್ಲ ಸೇರಿದಂತೆ ವಿವಿಧ ವಸ್ತುಗಳನ್ನು ದಾಸೋಹಕ್ಕಾಗಿ ನೀಡಿ ದೊಡ್ಡತನ ಮೆರೆದಿದ್ದಾರೆ.
(7 / 9)
ಕೊಪ್ಪಳದ ಜಾತ್ರೆ ಅಡುಗೆಗೆ ನಿಂಬೆ ಹಣ್ಣು ಕೂಡ ಬೇಕು. ಇದನ್ನೂ ನೂರಾರು ರೈತರು ತಾವು ಬೆಳೆದ ಜಮೀನುಗಳಿಂದಲೇ ತಂದು ಕೊಟ್ಟಿದ್ಧಾರೆ.
(8 / 9)
ಕೊಪ್ಪಳ ಸಮೀಪದ ತಾವರಗೇರಾ ಹಂಚಿನಾಳ ಗ್ರಾಮಸ್ಥರು ಅಭಿಮಾನದಿಂದ ನೀಡಿರುವ ನಿಂಬೆ ಹಣ್ಣು ಜಾತ್ರೆಯ ದಾಸೋಹದ ಸವಿಯನ್ನು ಹೆಚ್ಚಿಸಿದೆ.
ಇತರ ಗ್ಯಾಲರಿಗಳು