Koppal News: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಜಾತ್ರೆ ಸಡಗರ, 27ಕ್ಕೆ ಬನ್ನಿ ಶೇಂಗಾ ಹೋಳಿಗೆ ತಿನ್ನಿ Photos
- ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯೂ ಒಂದು. ಲಕ್ಷಾಂತರ ಮಂದಿ ಸೇರಿ ತೇರು ಎಳೆಯುತ್ತಾರೆ. ಈ ಬಾರಿಯೂ ಜಾತ್ರೆಗೆ ಭರ್ಜರಿ ತಯಾರಿಯೇ ಆಗಿದೆ. ಜನವರಿ 27ರಂದು ಶೇಂಗಾ ಹೋಳಿಗೆ, ಮೆಣಸಿಕಾಯಿ ಮಿರ್ಚಿ ತಿಂದು ತೇರು ಎಳೆಯುವ ಖುಷಿಯೇ ಬೇರೆ. ಜಾತ್ರೆಯ ನೋಟ ಇಲ್ಲಿದೆ.

(1 / 6)
ಕೊಪ್ಪಳ ಜಾತ್ರೆಗೆ ಎಲ್ಲರೂ ಬನ್ನಿ ಎಂದು ಆಹ್ವಾನಿಸುತ್ತಾರೆ ಗವಿಸಿದ್ದೇಶ್ವರ ಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ಆಹ್ವಾನ. ಈಗಾಗಲೇ ಜಾತ್ರಾ ಮಹೋತ್ಸವದ ಚಟುವಟಿಕೆ ಶುರುವಾಗಿದ್ದು, ಜನವರಿ 27ರಂದು ಮಹಾರಥೋತ್ಸವ ನಿಗದಿಯಾಗಿದೆ.
(2 / 6)
ಕೊಪ್ಪಳ ಜಾತ್ರೆ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗಿಯಾದ ನವ ದಂಪತಿಗಳಿಗೆ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಶುಭ ಹಾರೈಸಿದರು.
(3 / 6)
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಗೆ ಈ ಬಾರಿ ಎಂಟು ಲಕ್ಷ ಶೇಂಗಾ ಹೋಳಿಗೆಗಳು ಬರಲಿವೆ. ಹೆಣ್ಣು ಮಕ್ಕಳು ಅಭಿಮಾನದಿಂದಲೇ ಹೋಳಿಗೆ ಮಾಡಿದ್ದಾರೆ. ಮಹಾದಾಸೋಹಕ್ಕಾಗಿ ಸಿಂಧನೂರು, ಕಾರಟಗಿ ಹಾಗೂ ಮಸ್ಕಿ ತಾಲ್ಲೂಕಿನ ಸುತ್ತಮತ್ತಲಿನ 50 ಗ್ರಾಮಗಳ ಭಕ್ತರು 15 ದಿನ ಶ್ರಮಪಟ್ಟು ಹೋಳಿಗೆ ಸಿದ್ದಪಡಿಸಿದ್ದಾರೆ.
(4 / 6)
ಕೊಪ್ಪಳ ಜಾತ್ರೆ ಎಂದರೆ ಅದು ಸಾಂಸ್ಕೃತಿಕ ಸಂಗಮವೂ ಹೌದು. ನಾಟಕ, ಬಯಲಾಟವೂ ಜಾತ್ರೆಯ ಪ್ರಮುಖ ಆಕರ್ಷಣೆ. ಈ ಬಾರಿ ರಥೋತ್ಸವ ದಿನದಂದು ಪ್ರದರ್ಶನಗೊಳ್ಳಲಿರುವ ರಾಮಾಯಣ ಬಯಲಾಟ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದಾರೆ ಕಲಾವಿದರು.
(5 / 6)
‘ಸ್ವಯಂ ಉದ್ಯೋಗ’ ಹಾಗೂ ‘ವೃತ್ತಿ ಕೌಶಲ್ಯದ ಸಂಕಲ್ಪ’ ಜಾಗೃತಿಗೆ ಕಾಯಕ ದೇವೋಭವ ಜಾಗೃತಿ ಜಾಥಾ ಕೊಪ್ಪಳದ ಜಾತ್ರೆ ಅಂಗವಾಗಿ ನಡೆಯಿತು ‘ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು’ಎಂಬ ಘೋಷವಾಕ್ಯದೊಂದಿಗೆ ಜಾಥಾದಲ್ಲಿ ಹಲವು ಸಂಘಟನೆಗಳು ಭಾಗಿಯಾದವು..
ಇತರ ಗ್ಯಾಲರಿಗಳು