ಕಾರಟಗಿಯಲ್ಲಿ ಹಂದಿ ಕಳ್ಳರ ಗ್ಯಾಂಗ್ ಸಕ್ರಿಯ, ಹಿಡಿಯೆಲೆತ್ನಿಸಿದ ಪುರಸಭೆ ಸದಸ್ಯನಿಗೆ ವಾಹನ ಡಿಕ್ಕಿ ಹೊಡೆಸಿ ಕೊಂದ ಕಳ್ಳರು
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನಲ್ಲಿ ಹಂದಿ ಕಳ್ಳರ ಗ್ಯಾಂಗ್ ಸಕ್ರಿಯವಾಗಿದೆ. ಈ ಕಳ್ಳರ ಗ್ಯಾಂಗ್ ಅನ್ನು ಹಿಡಿಯಲು ಹೋಗಿ ಪುರಸಭೆ ಸದಸ್ಯರೊಬ್ಬರು ಪ್ರಾಣ ಕಳೆದುಕೊಂಡ ಕಳವಳಕಾರಿ ಘಟನೆ ವರದಿಯಾಗಿದೆ.
(1 / 6)
ಕಾರಟಗಿ ತಾಲೂಕಿನಲ್ಲಿ ಹಂದಿ ಸಾಕಣಿಕೆಯನ್ನು ಕಸುಬನ್ನಾಗಿ ಮಾಡಿಕೊಂಡವರು ಹಲವರು. ಇವರೆಲ್ಲರಿಗೂ ಈಗ ಸವಾಲಾಗಿ ಪರಿಣಮಿಸಿರುವುದು ಹಂದಿ ಕಳ್ಳರ ಗ್ಯಾಂಗ್‌ನಿಂದ ತಾವು ಸಾಕಿದ ಹಂದಿಯನ್ನು ರಕ್ಷಿಸುವುದು.
(2 / 6)
ಹಾಗೆ, ಹಂದಿ ಕಳ್ಳರ ಗ್ಯಾಂಗ್ ಅನ್ನು ಹಿಡಿಯಲು ಹೋಗಿ ಪುರಸಭೆ ಸದಸ್ಯ ರಾಮಣ್ಣ ಕೊರವರ ಮೃತಪಟ್ಟ ಆತಂಕಕಾರಿ ಘಟನೆ ಸೋಮವಾರ ರಾತ್ರಿ ನಡೆದಿದೆ.
(3 / 6)
ಪುರಸಭೆಯ ಹಿಂಭಾಗದ ರಸ್ತೆಯಲ್ಲಿ ಕೊರವರ ಸಮುದಾಯದವರು ಹಂದಿಗಳನ್ನು ಸಾಕಿದ್ದರು. ಈ ಹಂದಿಗಳನ್ನು ಕದಿಯುವುದಕ್ಕಾಗಿ ಹಂದಿ ಕಳ್ಳರ ಗ್ಯಾಂಗ್ ಸೋಮವಾರ ರಾತ್ರಿ ಬೊಲೆರೋ ಪಿಕಅಪ್ ವಾಹನದಲ್ಲಿ ಅಲ್ಲಿಗೆ ಬಂದಿತ್ತು.
(4 / 6)
ಈ ಹಂದಿ ಕಳ್ಳರ ಗ್ಯಾಂಗ್ 45 ಹಂದಿಗಳನ್ನು ಪಿಕ್‌ಅಪ್ ವಾಹನಕ್ಕೆ ಏರಿಸಿಕೊಂಡಿದ್ದರು. ಇದೇ ವೇಳೆ ಹಂದಿಗಳ ಚೀರಾಟದಿಂದ ರಾಮಣ್ಣ ಕೊರವರ ಎಚ್ಚರಗೊಂಡರು. ಮನೆಯ ಬಾಗಿಲು ತೆರೆದು ಹೊರಬರುವಾಗ ಕಳ್ಳರ ಗ್ಯಾಂಗ್ ಬೊಲೆರೊವನ್ನು ಚಲಾಯಿಸಿಕೊಂಡು ಹೊರಟಿತ್ತು
(5 / 6)
ಕೂಡಲೇ ರಾಮಣ್ಣ ತಮ್ಮ ಪುತ್ರ ಮತ್ತು ನೆರೆಹೊರೆಯ ಒಂದಿಬ್ಬರನ್ನು ಕರೆದುಕೊಂಡು ಬೊಲೆರೋವನ್ನು ಬೆನ್ನಟ್ಟಲು ಹೊರಟರು. ಸ್ವಲ್ಪ ದೂರದಲ್ಲಿ ಬೊಲೆರೊ ಪತ್ತೆಯಾಗಿತ್ತು. ಅದನ್ನು ಅಡ್ಡಗಟ್ಟಲು ಪ್ರಯತ್ನಿಸಿದಾಗ ಅಲ್ಲಿ ಸಂಘರ್ಷ ಉಂಟಾಗಿದೆ
ಇತರ ಗ್ಯಾಲರಿಗಳು