Kurta neckline design: ಬೇಸಿಗೆಯಲ್ಲಿ ಹೊಸ ವಿನ್ಯಾಸದ ಕುರ್ತಾ ಧರಿಸಲು ಬಯಸಿದರೆ ಇಲ್ಲಿವೆ ಆಕರ್ಷಕ ವಿನ್ಯಾಸ
ಬೇಸಿಗೆಯಲ್ಲಿ ನೀವು ಹೊಸ ವಿನ್ಯಾಸದ ಕುರ್ತಾ ಧರಿಸಲು ಬಯಸಿದರೆ, ಇಲ್ಲಿ ಕೆಲವು ಆಕರ್ಷಕ ಮಾದರಿಗಳನ್ನು ತರಲಾಗಿದೆ. ಅದನ್ನು ಧರಿಸುವುದರಿಂದ ನೀವು ಸ್ಟೈಲಿಶ್ ಲುಕ್ ಪಡೆಯುತ್ತೀರಿ. ಬೇಸಿಗೆಗೆ ಅತ್ಯುತ್ತಮ ಕುರ್ತಾ ವಿನ್ಯಾಸಗಳನ್ನು ಇಲ್ಲಿವೆ ನೋಡಿ.
(1 / 11)
ಬಹುತೇಕ ಹೆಣ್ಮಕ್ಕಳು ಚೂಡಿದಾರ್ ಅಥವಾ ಕುರ್ತಾವನ್ನು ಖರೀದಿಸಲು ಇಷ್ಟಪಡುತ್ತಾರೆ. ಬೇಸಿಗೆಯ ಶೆಖೆಗೆ ಕುರ್ತಿ ಧರಿಸುವುದರಿಂದ ಆರಾಮದಯಕವಾಗಿರಲು ಸಾಧ್ಯ. ಆರಾಮದಾಯಕದ ಜೊತೆಗೆ ಸ್ಟೈಲಿಶ್ ಆಗಿ ಕಾಣಲು ಬಯಸಿದರೆ, ಇಲ್ಲಿ ನೀಡಲಾದ ವಿನ್ಯಾಸಗಳಿಂದ ಮಾಡಿದ ಕುರ್ತಿಯನ್ನು ನೀವು ಪಡೆಯಬಹುದು. ಅತ್ಯುತ್ತಮ ಕುರ್ತಿ ವಿನ್ಯಾಸಗಳು ಇಲ್ಲಿವೆ:
(2 / 11)
ಹೆಚ್ಚಿನ ಜನರು ಸರಳ ವಿನ್ಯಾಸದೊಂದಿಗೆ ಮಾಡಿದ ಕಾಟನ್ ಕುರ್ತಿಯನ್ನು ಪಡೆಯಲು ಇಷ್ಟಪಡುತ್ತಾರೆ. ನೆಕ್‌ಲೈನ್ ವಿನ್ಯಾಸವನ್ನು ಈ ರೀತಿಯ ಕತ್ತರಿಸುವ ಡಿಸೈನ್ ಅನ್ನು ಮಾಡಬಹುದು.
(Photo Credit: needlegraphee)(3 / 11)
ಪ್ರತಿನಿತ್ಯ ಕಚೇರಿಗೆ ಧರಿಸಲು ಕುರ್ತಿ ಹೊಲಿಸುತ್ತಿದ್ದರೆ ಈ ರೀತಿಯ ನೆಕ್‌ಲೈನ್ ಮಾಡಿಸಬಹುದು. ಇದು ತುಂಬಾ ಚೆನ್ನಾಗಿ ಕಾಣುತ್ತಿದೆ. ಅದನ್ನು ಸುಂದರಗೊಳಿಸಲು ನೀವು ಅದಕ್ಕೆ ಲೇಸ್ ಅನ್ನು ಕೂಡ ಹೊಲಿಸಬಹುದು.
(Photo Credit: needlegraphee)(4 / 11)
ನೀವು ಪೂರ್ಣ ತೋಳಿನ ಕುರ್ತಿ ಹೊಲಿಸುತ್ತಿದ್ದರೆ, ಈ ರೀತಿಯ ನೆಕ್‌ಲೈನ್ ವಿನ್ಯಾಸವನ್ನು ಮಾಡಿಸಿ. ಈ ಮಾದರಿಯಲ್ಲಿ, ದುಂಡಗಿನ ವಿನ್ಯಾಸದೊಂದಿಗೆ ಸಣ್ಣ ವಿ ನೆಕ್‌ಲೈನ್ ವಿನ್ಯಾಸವನ್ನು ಮಾಡಬಹುದು. ಇದರೊಂದಿಗೆ, ಕುರ್ತಿಯ ಬಟ್ಟೆಗೆ ಹೊಂದಿಕೆಯಾಗುವ ಬಟನ್ ಅನ್ನು ಸಹ ಸೇರಿಸಲಾಗಿದೆ.
(Photo Credit: needlegraphee)(5 / 11)
ಕುರ್ತಿಯಲ್ಲಿರುವ ಹಾಫ್ ಕಾಲರ್ ವಿನ್ಯಾಸವು ತುಂಬಾ ಕ್ಲಾಸಿಯಾಗಿ ಕಾಣುತ್ತದೆ. ಈ ವಿನ್ಯಾಸವು ಬಟ್ಟೆಯಿಂದ ಮಾಡಿದ ಬಟನ್ ಅನ್ನು ಹೊಂದಿದೆ. ಇದಕ್ಕೆ ಪಲಾಝೊ ಅಥವಾ ಲೆಗ್ಗಿಂಗ್ಸ್ ಧರಿಸಬಹುದು.
(Photo Credit: eyal_thedesignstudio)(6 / 11)
ಈ ರೀತಿಯ ಕತ್ತರಿಸಿರುವ ಮಾದರಿಯ ನೆಕ್‌ಲೈನ್ ವಿನ್ಯಾಸದಲ್ಲಿ ಮಾಡಬಹುದು. ಅದು ನೋಡಲು ನಿಜಕ್ಕೂ ಚೆನ್ನಾಗಿ ಕಾಣುತ್ತದೆ. ಈ ವಿನ್ಯಾಸದ ಪಲಾಝೋಗಳನ್ನು ನೀವು ಕುರ್ತಿ ಜೊತೆಗೆ ಧರಿಸಬಹುದು.
(Photo Credit: deha_thecouture)(7 / 11)
ನೀವು ಅಲಂಕಾರಿಕ ಕುರ್ತಿ ವಿನ್ಯಾಸಗಳನ್ನು ಹುಡುಕುತ್ತಿದ್ದರೆ ಈ ರೀತಿಯ ಅಂಗ್ರಾಖಾ ವಿನ್ಯಾಸವನ್ನು ಹೊಲಿಸಿ. ಅದರ ಸೌಂದರ್ಯವನ್ನು ಹೆಚ್ಚಿಸಲು, ನೀವು ದಾರಕ್ಕೆ ಸುಂದರವಾದ ಡೋರಿ ಜೋಡಿಸಬಹುದು.
(Photo Credit: kavana.in)(8 / 11)
ನೀವು ಹೆಚ್ಚು ವಿನ್ಯಾಸಗಳನ್ನು ಮಾಡಲು ಬಯಸದಿದ್ದರೆ, ನಿಮ್ಮ ಕುರ್ತಿಯಲ್ಲಿ ಈ ರೀತಿಯ ಸರಳ ಲೂಪ್ ವಿನ್ಯಾಸವನ್ನು ಮಾಡಬಹುದು. ತೋಳುಗಳ ಮೇಲೂ ಈ ರೀತಿಯ ವಿನ್ಯಾಸವನ್ನು ಮಾಡಬಹುದು.
(Photo Credit: beenu_toun)(9 / 11)
ಈ ರೀತಿಯ ವಿನ್ಯಾಸದೊಂದಿಗೆ ವರ್ಣರಂಜಿತ ಕುರ್ತಿ ಬಟ್ಟೆಯನ್ನು ಹೊಲಿಯಬಹುದು. ಅದರ ಸೌಂದರ್ಯವನ್ನು ಹೆಚ್ಚಿಸಲು, ನೀವು ದಾರದ ಟಸೆಲ್‌ಗಳನ್ನು ಅಳವಡಿಸಬಹುದು.
(Photo Credit: needlegraphee)(10 / 11)
ನೀವು ಸರಳ ಕುರ್ತಿಯಲ್ಲಿ ಹೊಸ ವಿನ್ಯಾಸವನ್ನು ಪಡೆಯಲು ಬಯಸಿದರೆ ಈ ಮಾದರಿಯನ್ನು ಆರಿಸಿಕೊಳ್ಳಿ. ಇದು ಸರಳ ವಿನ್ಯಾಸವಾದರೂ ಧರಿಸಿದಾಗ ಸ್ಟೈಲಿಶ್ ಲುಕ್ ನೀಡುತ್ತದೆ.
(Photo Credit: needlegraphee)ಇತರ ಗ್ಯಾಲರಿಗಳು