Lakshmi Baramma Serial: ಕೋರ್ಟ್ ಕಟಕಟೆಯಲ್ಲಿ ನಿಂತಿರುವ ಲಕ್ಷ್ಮೀ; ನ್ಯಾಯಾಲಯದ ಮುಂದಿರುವ ಸಾಕ್ಷಿ ಏನು?
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಹೊರ ಬರಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾಳೆ. ಅವಳಿಗೆ ಚಿಂಗಾರಿ ಹಾಗೂ ಲಾಯರ್ ಸಹಾಯ ಮಾಡುತ್ತಿದ್ದಾರೆ.
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಹೊರ ಬರಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾಳೆ. ಅವಳಿಗೆ ಚಿಂಗಾರಿ ಹಾಗೂ ಲಾಯರ್ ಸಹಾಯ ಮಾಡುತ್ತಿದ್ದಾರೆ.
(1 / 9)
ವೈಷ್ಣವ್ ತನ್ನ ಹೆಂಡತಿ ಮತ್ತು ತಾಯಿ ಇಬ್ಬರ ನಡುವೆಯೂ ಸಿಲುಕಿದ್ದಾನೆ. ಏನು ಮಾಡಬೇಕು ಎಂದೇ ಅವನಿಗೆ ತಿಳಿಯುತ್ತಿಲ್ಲ.
(Colors Kannada)(2 / 9)
ಕೋರ್ಟನಲ್ಲಿ ಸಾಕ್ಷಿ ಹೇಳಲು ಅಂದು ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸನ್ನು ಕರೆಸಿದ್ದಾರೆ. ಅವಳಿಗೆ ಲಾಯರ್ ಪ್ರಶ್ನೆ ಕೇಳುತ್ತಿದ್ದಾರೆ.
(Colors Kannada)(3 / 9)
ಲಕ್ಷ್ಮೀ ಈ ಬಾರಿ ಕಟಕಟೆಯಲ್ಲಿ ಸಾಕ್ಷಿ ಹೇಳಲು ನಿಂತಿದ್ದಾಳೆ. ಅತ್ತ ಕಾವೇರಿ ಪರ ಲಾಯರ್ ಕೂಡ ತಮ್ಮ ನಿಲುವನ್ನು ಸಾಬೀತು ಪಡಿಸುತ್ತಿದ್ದಾರೆ.
(Colors Kannada)(4 / 9)
ಕಾವೇರಿ ಈ ಬಾರಿ ಲಕ್ಷ್ಮೀಯನ್ನು ಸೋಲಿಸಿಯೇ ಸೋಲಿಸುತ್ತೇನೆ ಎಂದು ಧೈರ್ಯವಾಗಿ ನಿಂತಿದ್ದಾಳೆ.
(Colors Kannada)(5 / 9)
ನ್ಯಾಯಾಧೀಶರು ವಕೀಲರು ವಾದವನ್ನು ಆಲಿಸುತ್ತಿದ್ದಾರೆ. ಗಿರಿಜಾ ಸತ್ಯ ಹೇಳಲು ಬಂದಿದ್ದಾಳೆ. ಅವಳಿಗೆ ಲಾಯರ್ ಪ್ರಶ್ನೆ ಕೇಳುತ್ತಿದ್ದಾರೆ.
(Colors Kannada)(6 / 9)
ಈ ಹಿಂದೆ ನಡೆಸಿದ ವಿಚಾರಣಯ ಬಗ್ಗೆಯೂ ಅಲ್ಲಿ ಮಾತು ಬರುತ್ತದೆ. ಅದಾದ ನಂತರದಲ್ಲಿ ಗಿರಿಜಾ ಬ್ಯಾಂಕ್ ಪಾಸ್‌ಬುಕ್ ಪ್ರತಿಯ ಬಗ್ಗೆ ಚರ್ಚೆ ಆಗುತ್ತದೆ.
(Colors Kannada)(7 / 9)
ಅವಳ ಖಾತೆಗೆ ಲಕ್ಷ್ಮೀ 25 ಸಾವಿರ ಹಣ ಹಾಕಿದ್ದಾಳೆ ಎಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯನ್ನೂ ಅಲ್ಲೇ ನೀಡಲಾಗುತ್ತದೆ.
(Colors Kannada)(8 / 9)
ಗಿರಿಜಾ ನರ್ಸಿಂಗ್ ಹೋಮ್‌ನಲ್ಲಿ ಹೌಸ್ ಕೀಪಿಂಗ್ ಮಾಡುತ್ತಾ ಇರುತ್ತಾಳೆ. ಅವಳಿಗೆ ಸಂಬಳ ತಿಂಗಳಿಗೆ ಕೇವಲ 15 ಸಾವಿರ ಇರುತ್ತದೆ. ಆ ವಿಚಾರವನ್ನು ಅವಳು ಹೇಳುತ್ತಾಳೆ.
(Colors Kannada)ಇತರ ಗ್ಯಾಲರಿಗಳು