Lakshmi Baramma Serial: ಸೊಸೆ ಅತ್ತರೆ ಅತ್ತೆ ಮುಖದಲ್ಲಿ ಸಂತೋಷದ ಹೊನಲು; ವೈಷ್ಣವ್ ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ
- Lakshmi Baramma Serial: 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ಕಾವೇರಿ ತಾನೇ ಉಪಾಯ ಮಾಡಿ ಅವಳನ್ನು ಮನೆಯಿಂದ ಹೊರಗಟ್ಟಿದ್ದಾಳೆ. ಸೊಸೆ ಅತ್ತರೆ ಅತ್ತೆ ಮುಖದಲ್ಲಿ ಸಂತೋಷದ ಹೊನಲು ಹರಿಯುತ್ತದೆ.
- Lakshmi Baramma Serial: 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ಕಾವೇರಿ ತಾನೇ ಉಪಾಯ ಮಾಡಿ ಅವಳನ್ನು ಮನೆಯಿಂದ ಹೊರಗಟ್ಟಿದ್ದಾಳೆ. ಸೊಸೆ ಅತ್ತರೆ ಅತ್ತೆ ಮುಖದಲ್ಲಿ ಸಂತೋಷದ ಹೊನಲು ಹರಿಯುತ್ತದೆ.
(1 / 8)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸೊಸೆ ಅತ್ತರೆ ಅತ್ತೆ ಮುಖದಲ್ಲಿ ಸಂತೋಷದ ಹೊನಲು ಹರಿಯುತ್ತದೆ. ಲಕ್ಷ್ಮೀ ನೋವಲ್ಲಿದ್ದರೆ ಕಾವೇರಿ ಖುಷಿಪಡುತ್ತಾಳೆ.
(Colors Kannada)(2 / 8)
ತನ್ನವರು ಯಾರೂ ಇಲ್ಲ ಎಂಬ ಭಾವನೆಯಲ್ಲಿ ಲಕ್ಷ್ಮೀ, ಕೀರ್ತಿ ಮನೆಯಲ್ಲಿ ಕೂತು ಅಳುತ್ತಿರುತ್ತಾಳೆ. ಆಗ ಅಲ್ಲಿಗೆ ಕೀರ್ತಿ ಬರುತ್ತಾಳೆ.
(Colors Kannada)(3 / 8)
ಬಂದು ತಾನೇ ಲಕ್ಷ್ಮೀಗೆ ಸಮಾಧಾನ ಮಾಡಬೇಕು ಎಂದು ಬಯಸುತ್ತಾಳೆ. ಲಕ್ಷ್ಮೀ ಹತ್ತಿರ ಹೋಗಿ ಪದೇ ಪದೇ ಮಾತಾಡಿಸುತ್ತಾಳೆ. ಆಗ ಲಕ್ಷ್ಮೀ ಕೋಪದಿಂದ ಅವಳಿಗೆ ಬೈದು ಕಳಿಸುತ್ತಾಳೆ.
(Colors Kannada)(4 / 8)
ಹಾಗೆ ಕೂಗಾಡಿ ಕೀರ್ತಿಯನ್ನು ಕಳಿಸಿದ ನಂತರವೂ ಲಕ್ಷ್ಮೀಗೆ ಸಮಾಧಾನ ಆಗುವುದಿಲ್ಲ. ಅವಳ ನೋವು ಇಮ್ಮಡಿಯಾಗುತ್ತದೆ.
(Colors Kannada)(5 / 8)
ಇನ್ನು ಇತ್ತ ಕಾವೇರಿ ಮನೆಯಲ್ಲಿ ಅಜ್ಜಿ ಲಕ್ಷ್ಮೀಯ ಗುಣಗಳ ಬಗ್ಗೆ ಮಾತಾಡುತ್ತಾ ಇರುತ್ತಾರೆ. ಅದರೆ ಅದು ಕಾವೇರಿಗೆ ಆಗೋದಿಲ್ಲ.
(Colors Kannada)(6 / 8)
“ಏನಮ್ಮ ಈ ಮನೆಯಲ್ಲಿ ನಾನು ಸಮಾಧಾನವಾಗಿ ಇರೋದು ನಿಂಗೆ ಇಷ್ಟ ಇಲ್ವಾ?” ಎಂದು ಕಾವೇರಿ ಪ್ರಶ್ನೆ ಮಾಡುತ್ತಾಳೆ.
(Colors Kannada)(7 / 8)
ಕಾವೇರಿಯ ಗಂಡ ಕೃಷ್ಣ ಕೂಡ ಅಲ್ಲೇ ಕೂತಿರುತ್ತಾನೆ. ಅಜ್ಜಿ ಆಗ ಮಾತು ಬದಲಾಯಿಸುತ್ತಾರೆ. ಈ ಕಾವೇರಿಯ ಸಹವಾಸವೇ ಬೇಡ ಎಂದು ಅವರು ಅಂದುಕೊಳ್ಳುತ್ತಾರೆ.
(Colors Kannada)ಇತರ ಗ್ಯಾಲರಿಗಳು