Lakshmi Baramma Serial: ವೈಷ್ಣವ್ ಹಾಗೂ ಲಕ್ಷ್ಮೀ ಜೀವನದಲ್ಲಿ ಮೂಗು ತೂರಿಸೋದೇ ಕಾವೇರಿ ಕೆಲಸ; ರಹಸ್ಯ ಪತ್ತೆ ಮಾಡಿದ ಗಂಗಕ್ಕ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ತನ್ನ ಮಗ ವೈಷ್ಣವ್ ಹಾಗೂ ಸೊಸೆ ಲಕ್ಷ್ಮೀ ಜೀವನದಲ್ಲಿ ಮೂಗು ತೂರಿಸೋದೇ ಕಾವೇರಿ ಕೆಲಸವಾಗಿಬಿಟ್ಟಿದೆ. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ನೋಡಿ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ತನ್ನ ಮಗ ವೈಷ್ಣವ್ ಹಾಗೂ ಸೊಸೆ ಲಕ್ಷ್ಮೀ ಜೀವನದಲ್ಲಿ ಮೂಗು ತೂರಿಸೋದೇ ಕಾವೇರಿ ಕೆಲಸವಾಗಿಬಿಟ್ಟಿದೆ. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ನೋಡಿ.
(1 / 8)
ವೈಷ್ಣವ್ ತನ್ನ ಕೋಣೆಯಲ್ಲಿ ಏನನ್ನೋ ಹುಡುಕುತ್ತಾ ಇರುತ್ತಾನೆ. ಆಗ ಅವನಿಗೆ ಒಂದು ಪತ್ರ ಸಿಗುತ್ತದೆ. ಅದರಲ್ಲಿ ಕವಿತೆ ಇರುತ್ತದೆ.
(Colors Kannada)(2 / 8)
ಲಕ್ಷ್ಮೀ ಬರೆದ ಆ ಕವಿತೆಯ ಸಾಲುಗಳನ್ನು ಅವನು ಓದುತ್ತಾ ಇರುತ್ತಾನೆ. ಆಗ ಎಲ್ಲವೂ ಈಗಿನ ಸಂದರ್ಭಕ್ಕೆ ಹೋಲಿಕೆಯಾಗುವ ಸಾಲುಗಳೇ ಸಿಗುತ್ತದೆ.
(Colors Kannada)(3 / 8)
ಏನಿದು ಎಂದು ಅವನು ಆಲೋಚನೆ ಮಾಡುತ್ತಾ ಪುನಃ ಅದೇ ಪತ್ರವನ್ನು ಓದುತ್ತಾನೆ. ಲಕ್ಷ್ಮೀಯ ನೆನಪು ಮಾಡಿಕೊಳ್ಳುತ್ತಾನೆ.
(Colors Kannada)(4 / 8)
ಆಗ ಕಾವೇರಿ ಅಲ್ಲಿಗೆ ಬಂದು “ಏನ್ ಮಾಡ್ತಾ ಇದೀಯಾ? ವೈಷ್ಣವ್, ನಾನು ಆ ಲೆಟರ್ ಓದ್ಬೋದಾ?" ಎಂದು ಪ್ರಶ್ನೆ ಮಾಡಿದ್ದಾಳೆ.
(Colors Kannada)(5 / 8)
ಇನ್ನು ಇತ್ತ ಗಂಗಕ್ಕ ಮತ್ತು ಅಂಕಿತ್ ಚಿಂಗಾರಿ ಎಂದು ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಚಿಂಗಾರಿಯೇ ಸುಬ್ಬಿ ಅನ್ನೋದು ಗಂಗಕ್ಕನಿಗೆ ಗೊತ್ತಾಗಿದೆ.
(Colors Kannada)(6 / 8)
ಚಿಂಗಾರಿ ನಂಬರ್‍ಗೆ ಕಾಲ್ ಮಾಡಿದರೆ ಆ ಕಡೆಯಿಂದ ಸುಬ್ಬಿಯ ಧ್ವನಿ ಅವರಿಗೆ ಕೇಳಿಸಿದೆ. ಆಗ ಗಂಗಕ್ಕನ ಅನುಮಾನ ನಿಜ ಆಗಿದೆ.
(Colors Kannada)(7 / 8)
ಇತ್ತ ಕೀರ್ತಿ ತಾನೊಬ್ಬಳೇ ಕುಂಟೇ ಬಿಲ್ಲೆ ಆಟ ಆಡುತ್ತಾ ಇರುತ್ತಾಳೆ. ಅವಳ ಜತೆ ಆಟವಾಡಲು ಯಾರೂ ಇರೋದಿಲ್ಲ. ಲಕ್ಷ್ಮೀಯೂ ತುಂಬಾ ಬೇಸರದಲ್ಲಿದ್ದಾಳೆ. ಆದರೆ ಕೀರ್ತಿಗೆ ಅಂಕಿತ್ ಸಿಗುತ್ತಾನೆ.
(Colors Kannada)ಇತರ ಗ್ಯಾಲರಿಗಳು