Lakshmi Baramma Serial: ಜೈಲಿನಿಂದ ಮನೆಗೆ ಮರಳಿ ಬಂದ ಕಾವೇರಿ; ದುಪ್ಪಟ್ಟಾಗಿದೆ ದುರಹಂಕಾರ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಮರಳಿ ಮನೆಗೆ ಬಂದಿದ್ದಾಳೆ. ಲಕ್ಷ್ಮೀ ಹಾಗೂ ಸುಪ್ರಿತಾ ತುಂಬಾ ಅಸಮಾಧಾನದಿಂದಿದ್ದಾರೆ. ಆದರೆ ವಿಧಿ ಮಾತ್ರ ಅಮ್ಮನನ್ನು ಕಂಡು ಅಪ್ಪಿಕೊಂಡಿದ್ದಾಳೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಮರಳಿ ಮನೆಗೆ ಬಂದಿದ್ದಾಳೆ. ಲಕ್ಷ್ಮೀ ಹಾಗೂ ಸುಪ್ರಿತಾ ತುಂಬಾ ಅಸಮಾಧಾನದಿಂದಿದ್ದಾರೆ. ಆದರೆ ವಿಧಿ ಮಾತ್ರ ಅಮ್ಮನನ್ನು ಕಂಡು ಅಪ್ಪಿಕೊಂಡಿದ್ದಾಳೆ.
(1 / 8)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಮಾಡುವ ಕೆಟ್ಟ ಕೆಲಸಗಳು ಲಕ್ಷ್ಮೀಗೆ ಆಗದೇ ಇದ್ದರೂ, ಕಾವೇರಿ ಕಾಲಿಗೆ ಬೀಳುವ ಪರಿಸ್ಥಿತಿ ಲಕ್ಷ್ಮೀಗೆ ಎದುರಾಗಿದೆ.
(Colors Kannada)(2 / 8)
ಕಾವೇರಿಯ ಗಂಡ ಈಗ ಮತ್ತೆ ಕಾವೇರಿಯ ಪರ ನಿಂತಿದ್ದಾನೆ. ಅವನ ಜೀವನದಲ್ಲಿ ಇಷ್ಟವಿಲ್ಲದೇ ಇದ್ದರೂ ಕೆಲವು ಸಂಗತಿಗಳು ಅನಿವಾರ್ಯ ಎಂಬಂತಾಗಿದೆ.
(Colors Kannada)(3 / 8)
ಅಮ್ಮ ಮನೆಗೆ ಬಂದಿರುವುದನ್ನು ನೋಡಿ ವಿಧಿ ತುಂಬಾ ಖುಷಿಪಟ್ಟಿದ್ದಾಳೆ, ಓಡಿ ಬಂದು ಅಮ್ಮನನ್ನು ಅಪ್ಪಿಕೊಂಡಿದ್ದಾಳೆ. “ನನಗೆ ಗೊತ್ತಿತ್ತು ಅಮ್ಮಾ, ನೀನು ಯಾವ ತಪ್ಪನ್ನೂ ಮಾಡಿಲ್ಲ” ಎನ್ನುತ್ತಿದ್ದಾಳೆ.
(Colors Kannada)(4 / 8)
ಇನ್ನು ಕಾವೇರಿಯ ತಾಯಿ, ಸುಬ್ಬಿ ಮಾತು ಕೇಳಿ ಲಕ್ಷ್ಮೀ ಹತ್ತಿರ ಕಾವೇರಿಯನ್ನು ಆರತಿ ಮಾಡಿ ಮನೆಯೊಳಗಡೆ ಕರೆದುಕೊಳ್ಳಲು ಹೇಳುತ್ತಾಳೆ. ಆದರೆ ಸುಪ್ರಿತಾ ಇದಕ್ಕೆ ಒಪ್ಪುವುದಿಲ್ಲ.
(Colors Kannada)(5 / 8)
“ಅತ್ತೆ ಈಗ ಇದೆಲ್ಲ ಬೇಕಿತ್ತಾ? ನೀವೇ ಹೇಳಿ” ಎಂದು ಸುಪ್ರಿತಾ ಪ್ರಶ್ನೆ ಮಾಡುತ್ತಾಳೆ. ಆದರೆ ಅತ್ತೆ “ಒಳ್ಳೆದಾಗುತ್ತೆ ಅಂತ ಯಾರೇ ಹೇಳಿದ್ರೂ ಮಾಡೋಣ… ಅದರಲ್ಲೇನಿದೆ” ಎಂದು ಉತ್ತರಿಸುತ್ತಾಳೆ.
(Colors Kannada)(6 / 8)
ಆದರೆ ಅತ್ತೆ “ಒಳ್ಳೆದಾಗುತ್ತೆ ಅಂತ ಯಾರೇ ಹೇಳಿದ್ರೂ ಮಾಡೋಣ… ಅದರಲ್ಲೇನಿದೆ” ಎಂದು ಉತ್ತರಿಸುತ್ತಾಳೆ.
(Colors Kannada)(7 / 8)
ಕಾವೇರಿ ಇದೆಲ್ಲವನ್ನೂ ನೋಡಿ ಒಳಗೊಳಗೇ ನಗುತ್ತಾಳೆ. ಕುತಂತ್ರದಿಂದ ಮನೆಯೊಳಗಡೆ ಕಾಲಿಡುತ್ತಿದ್ದರೂ. ಮೈ ತುಂಬಾ ಸೇಡನ್ನೇ ತುಂಬಿಕೊಂಡಿರುತ್ತಾಳೆ.
(Colors Kannada)ಇತರ ಗ್ಯಾಲರಿಗಳು