Lakshmi Baramma Serial: ವೈಷ್ಣವ್ ಹಾಗೂ ಲಕ್ಷ್ಮೀ ನಡುವೆ ಬಿರುಕು; ಇದೆಲ್ಲವೂ ಕಾವೇರಿಯದೇ ಕುತಂತ್ರ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ವಿಜಯ ಸಾಧಿಸುವ ದಿನಗಳು ಹತ್ತಿರ ಬಂದಿದೆ. ಅವಳು ಅಂದುಕೊಂಡಂತೆ ಮಗ ಹಾಗೂ ಸೊಸೆ ಕೂಡ ಬೇರೆಯಾಗುವ ಸೂಚನೆ ಇದೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ವಿಜಯ ಸಾಧಿಸುವ ದಿನಗಳು ಹತ್ತಿರ ಬಂದಿದೆ. ಅವಳು ಅಂದುಕೊಂಡಂತೆ ಮಗ ಹಾಗೂ ಸೊಸೆ ಕೂಡ ಬೇರೆಯಾಗುವ ಸೂಚನೆ ಇದೆ.
(1 / 9)
ಕಾವೇರಿ ಮೊದಲಿನಿಂದಲೂ ಹಾಗೇ ಯಾವಾಗಲೂ ತನ್ನ ಮಗನ ಮೇಲೆ ವ್ಯಾಮೋಹ ಜಾಸ್ತಿ. ಅವನಿಗೆ ಮದುವೆ ಆದರೂ ಅವನು ಮಾತ್ರ ತನ್ನನ್ನೇ ಹೆಚ್ಚು ಪ್ರೀತಿಸಬೇಕು ಎಂಬುದು ಅವಳ ಆಶಯ.
(Colors Kannada)(2 / 9)
ನ್ಯಾಯಾಲಯದಲ್ಲಿ ಕಾವೇರಿ ಹಾಗೂ ಲಕ್ಷ್ಮೀ ವಿಚಾರಣೆ ನಡೆಯುತ್ತಿದೆ. ಆಗ ಎಲ್ಲ ಸಾಕ್ಷಿಯೂ ಕಾವೇರಿ ಪರವಾಗಿಯೇ ಇದೆ.
(Colors Kannada)(3 / 9)
ಕಾವೇರಿ ಮುಖದಲ್ಲಂತೂ ಖುಷಿ ಎದ್ದು ತೋರುತ್ತಿದೆ. ಇಷ್ಟು ದಿನ ಜೈಲಿನಲ್ಲಿದ್ದು ಬೇಸತ್ತ ಅವಳಿಗೆ ಮತ್ತೆ ಮನೆಗೆ ಹೋಗುವ ಭರವಸೆ ಇದೆ.
(Colors Kannada)(4 / 9)
ಕಾವೇರಿ ಪರ ವಕೀಲೆ ತುಂಬಾ ಚೆನ್ನಾಗಿ ವಾದ ಮಂಡಿಸುತ್ತಾ ಇದ್ದಾರೆ. ಎಲ್ಲ ರೀತಿಯ ಸಾಕ್ಷಿ ವದಗಿಸಿದ್ದಾರೆ. ಇದರಿಂದ ಲಕ್ಷ್ಮೀ ಸೋಲುತ್ತಿದ್ದಾಳೆ.
(Colors Kannada)(5 / 9)
ಕಾವೇರಿ ಮುಖದಲ್ಲಿ ಸೇಡು ಎದ್ದು ಕಾಣುತ್ತಿದೆ, "ನಾನು ಮನೆಗೇನಾದರೂ ಬಂದರೆ ನಿನಗೆ ಯಾವ ರೀತಿ ಕಾಟ ಕೊಡುತ್ತೀನಿ ನೋಡ್ತಾ ಇರು" ಎಂದು ಕೋಪದಿಂದ ಮನಸಿನಲ್ಲಿ ಹೇಳಿಕೊಳ್ಳುತ್ತಿದ್ದಾಳೆ.
(Colors Kannada)(6 / 9)
ಲಕ್ಷ್ಮೀ ಸೋತು ಇನ್ನೇನು ಎಲ್ಲರ ಎದುರು ಅವಳು ಅಳುವುದೊಂದೇ ಬಾಕಿ ಎಂಬಂತಾಗಿದೆ. ವೈಷ್ಣವ್ ಮುಖ ನೋಡಿ ಅವಳಿಗೆ ಬೇಸರ ಆಗಿದೆ.
(Colors Kannada)(7 / 9)
ನ್ಯಾಯಾಲಯದಲ್ಲಿ ನ್ಯಾಯಾಧೀಶರು ಲಕ್ಷ್ಮೀ ಹತ್ತಿರ “ನಿಮಗೇನಾದರೂ ಹೇಳೋದಿದ್ದರೆ ಹೇಳಿ” ಎಂದು ಅನುಮತಿ ನೀಡಿದ್ದಾರೆ.
(Colors Kannada)(8 / 9)
ಆದರೆ ಕೊಟ್ಟ ಅವಕಾಶವನ್ನು ಯಾವ ರೀತಿ ಬಳಸಿಕೊಂಡು ಮಾತಾಡಬೇಕು ಎಂದು ಲಕ್ಷ್ಮೀಗೆ ಆ ದುಃಖದಲ್ಲಿ ತೋಚುತ್ತಿಲ್ಲ.
(Colors Kannada)ಇತರ ಗ್ಯಾಲರಿಗಳು