Lakshmi Baramma Serial: ಯಾರಿಂದಲೂ ಲಕ್ಷ್ಮೀ ಹಾಗೂ ವೈಷ್ಣವ್‌ನ ದೂರ ಮಾಡಲು ಸಾಧ್ಯ ಇಲ್ಲ; ಆದರೆ ಒಂದು ಮಾಡುವ ಎಲ್ಲ ಸಾಧ್ಯತೆ ಇದೆ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ದೂರವಾಗಿದ್ದಾರೆ. ಆದರೆ ಕೀರ್ತಿ ಮತ್ತು ವೈಷ್ಣವ್ ಅವರನ್ನು ಒಂದು ಮಾಡುವ ಪ್ರಯತ್ನದಲ್ಲಿದ್ದಾರೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ದೂರವಾಗಿದ್ದಾರೆ. ಆದರೆ ಕೀರ್ತಿ ಮತ್ತು ವೈಷ್ಣವ್ ಅವರನ್ನು ಒಂದು ಮಾಡುವ ಪ್ರಯತ್ನದಲ್ಲಿದ್ದಾರೆ.
(1 / 8)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಒಂದೆಡೆಯಾದರೆ, ಲಕ್ಷ್ಮೀ ಇನ್ನೊಂದೆಡೆ. ಆದರೆ, ಅಂಕಿತ್ ಹಾಗೂ ಕೀರ್ತಿ ಏನೋ ಹೊಸ ಉಪಾಯ ಮಾಡಿದಂತಿದೆ.
(Colors Kannada)(2 / 8)
ಸುಪ್ರಿತಾ ಲಕ್ಷ್ಮೀಯನ್ನು ಮಾತಾಡಿಸಿಕೊಂಡು ಬರಲು ಕೀರ್ತಿ ಮನೆಗೆ ಹೋಗುತ್ತಾಳೆ. ಅಲ್ಲಿ ಕೀರ್ತಿಯನ್ನು ಕಂಡು ಅವಳಿಗೆ ಕೋಪ ಬಂದಿದೆ.
(Colors Kannada)(3 / 8)
ಈ ಕೀರ್ತಿ ಮಾಡೋದೆಲ್ಲ ನಾಟಕ ಎಂದು ಲಕ್ಷ್ಮೀ ಹತ್ತಿರ ಸುಪ್ರಿತಾ ಹೇಳುತ್ತಾಳೆ. ಕೀರ್ತಿ ಮಧ್ಯ ಮಾತಾಡಲು ಬಂದಾಗ ಸುಪ್ರಿತಾ ಕೋಪಗೊಂಡು ಕೀರ್ತಿಗೆ ಬೈದಿದ್ದಾಳೆ.
(Colors Kannada)(4 / 8)
ಕೀರ್ತಿ ತನಗೆ ಅದ್ಯಾವುದೂ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ನಗುತ್ತಲೇ ಮಾತಾಡುತ್ತಾಳೆ. ಲಕ್ಷ್ಮೀ ಕೀರ್ತಿ ಪರ ಇರುತ್ತಾಳೆ.
(Colors Kannada)(5 / 8)
ಕೀರ್ತಿ ಒಂದು ಪತ್ರವನ್ನು ತಂದಿರುತ್ತಾಳೆ. ಆ ಪತ್ರವನ್ನು ಸುಪ್ರಿತಾ ಎದುರಲ್ಲೇ ಲಕ್ಷ್ಮೀ ಕೈಗೆ ನೀಡಿದ್ದಾಳೆ. ಲಕ್ಷ್ಮೀ ಕುತೂಹಲದಿಂದ ಓದಿದ್ದಾಳೆ.
(Colors Kannada)(6 / 8)
ಇತ್ತ ವೈಷ್ಣವ್ ಕೈಯ್ಯಲ್ಲೂ ಒಂದು ಪತ್ರ ಇದೆ. ಈ ಪತ್ರವನ್ನು ಅಂಕಿತ್ ತಂದು ಕೊಟ್ಟಿರುತ್ತಾನೆ. ವೈಷ್ಣವ್ ಕೂಡ ಆಶ್ಚರ್ಯದಿಂದ ಆ ಪತ್ರ ಓದುತ್ತಾನೆ.
(Colors Kannada)(7 / 8)
ಅಂಕಿತ್ ಸುಮ್ಮನೆ ಅಲ್ಲೇ ನಿಂತಿರುತ್ತಾನೆ. ಆಗ ವೈಷ್ಣವ್ “ನಿಜವಾಗಿಯೂ ಇದು ಮಹಾಲಕ್ಷ್ಮೀ ಅವರೇ ಬರೆದಿರೋದಾ?” ಎಂದು ಪ್ರಶ್ನೆ ಮಾಡುತ್ತಾನೆ.
(Colors Kannada)ಇತರ ಗ್ಯಾಲರಿಗಳು