Lakshmi Baramma Serial: ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದ ಕೀರ್ತಿ; ಲಕ್ಷ್ಮೀ ಮನದಲ್ಲಿ ಶುರುವಾಯ್ತು ಆತಂಕ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಹೊರ ಬರಲು ತುಂಬಾ ತಯಾರಿ ನಡೆಸಿದ್ದಾಳೆ. ಈಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಾಕ್ಷಿ ಹೇಳಲು ಕೀರ್ತಿ ಆಗಮಿಸಿದ್ದಾಳೆ. ಲಕ್ಷ್ಮೀಗೆ ಆತಂಕ ಆರಂಭವಾಗಿದೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಹೊರ ಬರಲು ತುಂಬಾ ತಯಾರಿ ನಡೆಸಿದ್ದಾಳೆ. ಈಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಾಕ್ಷಿ ಹೇಳಲು ಕೀರ್ತಿ ಆಗಮಿಸಿದ್ದಾಳೆ. ಲಕ್ಷ್ಮೀಗೆ ಆತಂಕ ಆರಂಭವಾಗಿದೆ.
(1 / 9)
ಕೀರ್ತಿಯ ಬಗ್ಗೆ ಎಲ್ಲ ಸತ್ಯ ತಿಳಿದುಕೊಂಡವಳು ಎಂದರೆ ಅದು ಲಕ್ಷ್ಮೀ ಮಾತ್ರ. ಆ ಕಾರಣದಿಂದ ಲಕ್ಷ್ಮೀ ಮನಸಿನಲ್ಲಿ ಆತಂಕ ಆರಂಭವಾಗಿದೆ.
(Colors Kannada)(2 / 9)
ಕಾವೇರಿ ತಾನು ಜೈಲಿನಲ್ಲಿ ಇದ್ದುಕೊಂಡೇ, ಮನೆಯಲ್ಲಿ ಏನಾಗುತ್ತಿದೆ ಎನ್ನುವುದನ್ನು ಪತ್ತೆ ಮಾಡಿ ಕೀರ್ತಿ ನ್ಯಾಯಾಲಯಕ್ಕೆ ಬರುವಂತೆ ಮಾಡಿದ್ದಾಳೆ,
(Colors Kannada)(3 / 9)
ಕೀರ್ತಿ ಕಟಕಟೆಗೆ ಬಂದು ನಿಂತ ತಕ್ಷಣವೇ ಲಕ್ಷ್ಮೀ ತಲೆಬಾಗಿದ್ದಾಳೆ. ಯಾಕೆಂದರೆ ಅವಳಿಗೆ ಮುಂದೇನಾಗುತ್ತದೆಯೋ ಏನೋ? ಎಂಬ ಭಯ ಆರಂಭವಾಗಿದೆ.
(Colors Kannada)(4 / 9)
ಕೀರ್ತಿಗೆ ಈ ಹಿಂದೆ ನಡೆದ ಯಾವ ವಿಚಾರವೂ ನೆನಪಿಲ್ಲ ಎಂದು ಲಕ್ಷ್ಮೀಗೆ ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕಾಗಿ ಅವಳಿಗೆ ಆತಂಕ ಹೆಚ್ಚಾಗಿದೆ.
(Colors Kannada)(5 / 9)
ತಲೆ ಕೆಟ್ಟಿರೋ ಕೀರ್ತಿ ನಿನ್ನ ಬಂಡವಾಳ ಬಯಲು ಮಾಡ್ತಾಳೆ ಎಂದು ಕಾವೇರಿ ಲಕ್ಷ್ಮೀಗೆ ಮನಸಿನಲ್ಲೇ ಬೈದುಕೊಳ್ಳುತ್ತಿದ್ದಾಳೆ.
(Colors Kannada)(6 / 9)
ಲಾಯರ್ ಕೀರ್ತಿ ಹತ್ತಿರ ಬಂದು ಮಾತಾಡ್ತಾರೆ. ನಿಮ್ಮ ಹೆಸ್ರೇನು ಎಂದು ಹೇಳ್ತಾರೆ. ಆಗ ಕೀರ್ತಿ ಸರಿಯಾದ ಉತ್ತರವನ್ನೇ ಕೊಡ್ತಾಳೆ.
(Colors Kannada)(7 / 9)
ನಾನು ಕೀರ್ತಿ ರಘುವೀರ್ ಎಂದು ತುಂಬಾ ಆತ್ಮವಿಶ್ವಾಂಸದಿಂದ ಉತ್ತರಿಸುತ್ತಾಳೆ. ಆ ಮಾತನ್ನು ಕೇಳಿ ಲಕ್ಷ್ಮೀ ಕೊಂಚ ಸಮಾಧಾನ ಪಡುತ್ತಾಳೆ.
(Colors Kannada)(8 / 9)
ಆದರೆ ಲಾಯರ್ ಇನ್ನೊಂದಷ್ಟು ಪ್ರಶ್ನೆ ಕೇಳಿದರೆ ಕೀರ್ತಿ ಯಾವ ರೀತಿ ಉತ್ತರ ಕೊಡಬಹುದು ಎಂದು ಲಕ್ಷ್ಮೀಗೆ ಚಿಂತೆ ಆಗುತ್ತಿದೆ.
(Colors Kannada)ಇತರ ಗ್ಯಾಲರಿಗಳು