Lakshmi Baramma Serial: ಅಳುತ್ತಲೇ ಕೀರ್ತಿ ಮನೆ ಸೇರಿದ ಲಕ್ಷ್ಮೀ; ಇದೆಲ್ಲ ಕಾವೇರಿ ಅಹಂಕಾರದ ಪ್ರತಿಫಲ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನ್ನ ಕುತಂತ್ರದಿಂದ ಲಕ್ಷ್ಮೀಯನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಕೀರ್ತಿ ಅವಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾಳೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನ್ನ ಕುತಂತ್ರದಿಂದ ಲಕ್ಷ್ಮೀಯನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಕೀರ್ತಿ ಅವಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾಳೆ.
(1 / 8)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಹಾಗೂ ಲಕ್ಷ್ಮೀ ನಡುವೆ ಜಗಳ ಆಗಿದೆ. ಕಾವೇರಿ ಲಕ್ಷ್ಮೀಯನ್ನು ಮನೆಯಿಂದ ಹೊರಹಾಕಿದ್ದಾಳೆ.
(Colors Kannada)(2 / 8)
ಕಾವೇರಿ ಮನೆಯಿಂದ ಹೊರ ಹಾಕಿದರೂ ಅವಳ ಜತೆ ನಿಂತವಳು ಮಾತ್ರ ಕೀರ್ತಿ. ಕಾರುಣ್ಯ ಕೂಡ ಲಕ್ಷ್ಮೀಗೆ ಸಹಾಯ ಮಾಡುತ್ತಿದ್ದಾಳೆ.
(Colors Kannada)(3 / 8)
ಕಾವೇರಿ ತನ್ನ ದುರಹಂಕಾರದಿಂದ ಜೈಲಿನಿಂದ ಮನೆಗೆ ಬಂದೆ ಎಂದು ತುಂಬಾ ಖುಷಿಯಲ್ಲಿ ಇದ್ದಾಳೆ. ಈಗ ಲಕ್ಷ್ಮೀಯೂ ಮನೆಯಲ್ಲಿಲ್ಲ.
(Colors Kannada)(4 / 8)
ಕೀರ್ತಿಯಂತೂ ತುಂಬಾ ಖುಷಿಯಲ್ಲಿದ್ದಾಳೆ. ಅಂತೂ ನಮ್ಮ ಮನೆಗೆ ಹೊಸ ಅತಿಥಿ ಬಂದಿದ್ದಾಳೆ ಎಂದು ಅವಳು ಅಂದುಕೊಂಡಿದ್ದಾಳೆ.
(Colors Kannada)(5 / 8)
ಅವಳ ಖುಷಿಯನ್ನು ನೋಡಿ ಲಕ್ಷ್ಮೀಗೆ ಅಳು ಬರುತ್ತಿದೆ. ನನಗಾಗಿ ಇವಳು ಇಷ್ಟೆಲ್ಲ ಮಾಡಿದಳಲ್ಲ ಎಂದು ಅಂದುಕೊಳ್ಳುತ್ತಿದ್ದಾಳೆ.
(Colors Kannada)(6 / 8)
ಇತ್ತ ಕಾವೇರಿ, ತನಗಿಂತ ಈ ಮನೆಯಲ್ಲಿ ಯಾರೂ ಎತ್ತರಕ್ಕೆ ಬೆಳೆಯಬಾರದು, ಅದು ಗಿಡವಾಗಿದ್ದರೂ ಸರಿ.. ತನಗಿಂತ ಎತ್ತರ ಬೆಳೆದರೆ ಕತ್ತರಿಸುತ್ತೇನೆ ಎಂದು ಹೇಳುತ್ತಿದ್ದಾಳೆ.
(Colors Kannada)(7 / 8)
ಕೀರ್ತಿಯಂತು ಹಠ ಮಾಡಿ,, ಅಮ್ಮನ ಬಳಿ ಲಕ್ಷ್ಮೀಗೆ ಆರತಿ ಮಾಡಿಸಿಕೊಂಡು ಮನೆಯ ಒಳಗಡೆ ಕರೆದುಕೊಂಡಿದ್ದಾಳೆ.
(Colors Kannada)ಇತರ ಗ್ಯಾಲರಿಗಳು