Lakshmi Baramma Serial: ವೈಷ್ಣವ್ ಪ್ರೀತಿಯ ಸಂಭ್ರಮಕ್ಕೆ ಅಡ್ಡಿಯಾದ ಕೀರ್ತಿ; ಡಾನ್ಸ್ ನೋಡಿ ಅನುಮಾನ ಪಟ್ಟ ಲಕ್ಷ್ಮೀ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರೂ ಒಂದೊಳ್ಳೆ ಸಮಯ ಕಳೆಯಬೇಕು ಎಂದುಕೊಂಡರೆ ಈ ಬಾರಿಯೂ ಕೀರ್ತಿ ಅದೆಲ್ಲವನ್ನೂ ಹಾಳು ಮಾಡಿದ್ದಾಳೆ. ಲಕ್ಷ್ಮೀಗೆ ಈಗ ಅನುಮಾನ ಆರಂಭವಾಗಿದೆ.
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರೂ ಒಂದೊಳ್ಳೆ ಸಮಯ ಕಳೆಯಬೇಕು ಎಂದುಕೊಂಡರೆ ಈ ಬಾರಿಯೂ ಕೀರ್ತಿ ಅದೆಲ್ಲವನ್ನೂ ಹಾಳು ಮಾಡಿದ್ದಾಳೆ. ಲಕ್ಷ್ಮೀಗೆ ಈಗ ಅನುಮಾನ ಆರಂಭವಾಗಿದೆ.
(1 / 9)
ವೈಷ್ಣವ್ ತನ್ನ ಹೆಂಡತಿ ಲಕ್ಷ್ಮೀ ಜತೆ ಒಂದೊಳ್ಳೆ ಸಮಯ ಕಳೆಯಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿರುತ್ತಾನೆ. ಆದರೆ ಕೀರ್ತಿಯಿಂದ ಎಲ್ಲ ಹಾಳಾಗುತ್ತದೆ.
(Colors Kannada)(2 / 9)
ಅಲ್ಲಿದ್ದ ಕೆಲಸದವರ ಬಳಿ ಲಕ್ಷ್ಮೀ ಬರುತ್ತಿದ್ದಂತೆ ಒಂದು ಹಾಡನ್ನು ಹಾಕಲು ಹೇಳಿರುತ್ತಾನೆ. ಆದರೆ ಅವರು ಬೇರೆ ಹಾಡನ್ನು ಪ್ಲೇ ಮಾಡುತ್ತಾರೆ.
(Colors Kannada)(3 / 9)
ಇದರಿಂದ ವೈಷ್ಣವ್‌ಗೆ ತುಂಬಾ ಕೋಪ ಬರುತ್ತದೆ. ಬರೀ ಅಷ್ಟೇ ಆದರೆ ಪರವಾಗಿರಲಿಲ್ಲ. ಅಲ್ಲಿ ಇನ್ನೂ ಬೇರೆ ಬೇರೆ ರೀತಿಯ ಬೆಳವಣಿಗೆ ಆಗುತ್ತದೆ.
(Colors Kannada)(4 / 9)
ಸಖಿಯೇ ಸಖಿಯೇ ಎಂಬ ಹಾಡಿಗೆ ಕೀರ್ತಿ ಡಾನ್ಸ್ ಮಾಡಲು ಆರಂಭಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಲಕ್ಷ್ಮೀ ಕೂಡ ಬಂದಿರುತ್ತಾಳೆ. ಅದು ವೈಷ್ಣವ್ ಕೋಪಕ್ಕೆ ಕಾರಣವಾಗುತ್ತದೆ.
(Colors Kannada)(5 / 9)
ತಾನೂ ತನ್ನ ಹೆಂಡತಿ ಲಕ್ಷ್ಮೀ ಇಬ್ಬರೇ ಇರಬೇಕು ಎಂದುಕೊಂಡು ಕನಸ ಕಂಡ ವೈಷ್ಣವ್‌ಗೆ ಮೋಸ ಆದಂತೆ ಭಾಸವಾಗುತ್ತದೆ.
(Colors Kannada)(6 / 9)
ಡಾನ್ಸ್ ಮಾಡುತ್ತಿದ್ದ ಕೀರ್ತಿಯನ್ನು ನಿಲ್ಲಿಸಿ ಅವಳ ಕೆನ್ನೆಗೆ ಏಟು ಕೊಡುತ್ತಾನೆ. ಆಗ ಕಾರುಣ್ಯ ಮತ್ತು ಲಕ್ಷ್ಮೀ ಓಡಿ ಬಂದು ಅವಳನ್ನು ಹಿಡಿದುಕೊಳ್ಳುತ್ತಾರೆ.
(Colors Kannada)(7 / 9)
ಆದರೆ ಕೀರ್ತಿ ಮಾಡಿದ ಡಾನ್ಸ್ ನೋಡಿ ಲಕ್ಷ್ಮೀಗೆ ತುಂಬಾ ಅನುಮಾನ ಆರಂಭವಾಗಿದೆ, ಇಷ್ಟು ದಿನ ಸುಪ್ರಿತಾ ಹೇಳಿದ್ದು ನಿಜ ಇರಬಹುದು ಎಂದು ಅನಿಸಲು ಆರಂಭವಾಗಿದೆ.
(Colors Kannada)(8 / 9)
ಕೀರ್ತಿ ನಾಟಕ ಮಾಡುತ್ತಿದ್ದಾಳೆ. ಅವಳಿಗೆ ಹಿಂದೆ ನಡೆದ ಎಲ್ಲವೂ ನೆನಪಿದೆ ಎಂದು ಸುಪ್ರಿತಾ ಈ ಹಿಂದೆ ಹೇಳಿದ ಮಾತು ಮತ್ತೆ ನೆನಪಾಗುತ್ತದೆ.
(Colors Kannada)ಇತರ ಗ್ಯಾಲರಿಗಳು