Kannada Serial TRP: ಟಿಆರ್‌ಪಿಯಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೆ ಜಿಗಿದ ಲಕ್ಷ್ಮೀ ನಿವಾಸ, ಯಾವ ಸ್ಥಾನದಲ್ಲಿದೆ ಅಮೃತಧಾರೆ?
- Kannada Serial TRP Ratings: ಕನ್ನಡ ಕಿರುತೆರೆಯ ಧಾರಾವಾಹಿಗಳ ಈ ವರ್ಷದ ಮೊದಲ ವಾರದ ಟಿಆರ್‌ಪಿ ಡೇಟಾ ಹೊರಬಿದ್ದಿದೆ. ಈ ಮೂಲಕ ಮೊದಲ ವಾರದಲ್ಲಿ ಯಾವ ಸೀರಿಯಲ್ ಟಾಪ್ ಇದೆ, ಕನಿಷ್ಠಕ್ಕೆ ಕುಸಿತ ಕಂಡ ಸೀರಿಯಲ್ ಯಾವುದು? ಹೀಗಿದೆ ಟಾಪ್ 10 ಧಾರಾವಾಹಿಗಳ ಕುರಿತ ಮಾಹಿತಿ.
- Kannada Serial TRP Ratings: ಕನ್ನಡ ಕಿರುತೆರೆಯ ಧಾರಾವಾಹಿಗಳ ಈ ವರ್ಷದ ಮೊದಲ ವಾರದ ಟಿಆರ್‌ಪಿ ಡೇಟಾ ಹೊರಬಿದ್ದಿದೆ. ಈ ಮೂಲಕ ಮೊದಲ ವಾರದಲ್ಲಿ ಯಾವ ಸೀರಿಯಲ್ ಟಾಪ್ ಇದೆ, ಕನಿಷ್ಠಕ್ಕೆ ಕುಸಿತ ಕಂಡ ಸೀರಿಯಲ್ ಯಾವುದು? ಹೀಗಿದೆ ಟಾಪ್ 10 ಧಾರಾವಾಹಿಗಳ ಕುರಿತ ಮಾಹಿತಿ.
(1 / 11)
ಈ ವರ್ಷದ ಮೊದಲ ವಾರದ ಸೀರಿಯಲ್‌ಗಳ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದೆ. ಆ ಪೈಕಿ ಲಕ್ಷ್ಮೀ ನಿವಾಸ ಮೊದಲ ಸ್ಥಾನಕ್ಕೆ ಜಿಗಿದರೆ, ನಂತರದ ಸ್ಥಾನದಲ್ಲಿ ಅಮೃತಧಾರೆ ಇದೆ. ಟಾಪ್ 10 ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ ಕುರಿತ ಮಾಹಿತಿ ಇಲ್ಲಿದೆ.
(2 / 11)
ಲಕ್ಷ್ಮೀ ನಿವಾಸ ಧಾರಾವಾಹಿ ಇದೀಗ ಮತ್ತೆ ತನ್ನ ಹಳೇ ಖದರ್ ಮುಂದುವರಿಸಿದೆ. ವೀಕ್ 1ರ ಟಿಆರ್‌ಪಿ ರೇಟಿಂಗ್‌ನಲ್ಲಿ 8.8 ನಂಬರ್ ಪಡೆದು ಮೊದಲ ಸ್ಥಾನದಲ್ಲಿದೆ.
(3 / 11)
ಅದೇ ರೀತಿ ಜೀ ಕನ್ನಡದ ಅಮೃತಧಾರೆ ಸೀರಿಯಲ್ ಇದಕ್ಕೂ ಮೊದಲು, ಮೊದಲ ಸ್ಥಾನದಲ್ಲಿತ್ತು. ಇದೀಗ 8.2 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.
(4 / 11)
ಜೀ ಕನ್ನಡದ ಅಣ್ಣಯ್ಯ ಸೀರಿಯಲ್ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅದರಂತೆ, ಮೊದಲ ವಾರದಲ್ಲಿ ಈ ಸೀರಿಯಲ್ 8.1 ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿದೆ.
(5 / 11)
ಇನ್ನು ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಸಹ ವೀಕ್ಷಕರನ್ನು ಸೆಳೆಯುತ್ತಿದೆ. ಟಿಆರ್‌ಪಿಯಲ್ಲಿ 7.1 ರೇಟಿಂಗ್ ಪಡೆದು, ನಾಲ್ಕನೇ ಸ್ಥಾನಕ್ಕೆ ಬಂದಿದೆ.
(6 / 11)
ಕಲರ್ಸ್ ಕನ್ನಡದ ರಾಮಾಚಾರಿ ಸೀರಿಯಲ್ ಇದೀಗ ಟಿಆರ್‌ಪಿಯಲ್ಲಿ 6.7 ಸ್ಥಾನ ಪಡೆದಿದೆ. ಈ ಪೈಕಿ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದೆ.
(7 / 11)
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಮೊದಲ ವಾರದ ಟಿಆರ್‌ಪಿಯಲ್ಲಿ 6.5 ನಂಬರ್ ಪಡೆದಿದೆ. ಈ ಮೂಲಕ ಆರನೇ ಸ್ಥಾನದಲ್ಲಿದೆ.
(8 / 11)
ಒಂದು ಕಾಲದಲ್ಲಿ ಜೀ ಕನ್ನಡದ ನಂಬರ್ ಒನ್ ಧಾರಾವಾಹಿ ಆಗಿದ್ದ ಪುಟ್ಟಕ್ಕನ ಮಕ್ಕಳು, ಮೊದಲ ವಾರದಲ್ಲಿ 6.4 ಟಿಆರ್‌ಪಿ ಪಡೆದುಕೊಂಡು ಏಳನೇ ಸ್ಥಾನದಲ್ಲಿದೆ.
(9 / 11)
ಜೀ ಕನ್ನಡದ ಸೀತಾ ರಾಮ ಧಾರಾವಾಹಿ, ಸದ್ಯ ರೋಚಕ ಹಂತಕ್ಕೆ ಬಂದು ನಿಂತಿದೆ. ಇಷ್ಟಿದ್ದರೂ, ಬಿಗ್ ಬಾಸ್ ಹಿನ್ನೆಲೆಯಲ್ಲಿ ಟಿಆರ್‌ಪಿ ಏರಿಕೆಯಾಗಿಲ್ಲ. ಇದೀಗ 5.6 ಟಿಆರ್‌ಪಿ ಪಡೆದ ಈ ಧಾರಾವಾಹಿ ಎಂಟನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು