ಮದುವೆಯ ಬಂಧಕ್ಕೆ ಆರು ವರ್ಷ; ಮದುವೆ ಫೋಟೋಗಳನ್ನು ಹಂಚಿಕೊಂಡ ʻಲಕ್ಷ್ಮೀ ನಿವಾಸʼ ಸೀರಿಯಲ್ ಖ್ಯಾತಿಯ ಮಧು ಹೆಗಡೆ
ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡಿರುವ ನಟ ಮಧು ಹೆಗಡೆ ಸದ್ಯ ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಿಪುಣ ಸಂತೋಷನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಮೂಲಕವೇ ನಾಡಿನ ಜನರಿಗೆ ಹತ್ತಿರವಾಗಿದ್ದಾರೆ. ಇದೀಗ ಇದೇ ಮಧು ಹೆಗಡೆ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.
(1 / 10)
ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ ನಟ ಮಧು ಹೆಗ್ಡೆ. ಹತ್ತಾರು ಧಾರಾವಾಹಿಗಳಲ್ಲಿ ನಟಿಸಿರುವ ಮಧು, ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
(Instagram)(2 / 10)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಿಪುಣ ಸಂತೋಷನಾಗಿ ಅವರ ಪಾತ್ರ ಸಾಗುತ್ತಿದೆ.
(3 / 10)
ಇತ್ತ ಇದೇ ಮಧು ಹೆಗಡೆ ತಮ್ಮ ರಿಯಲ್ ಪತ್ನಿ ಜತೆಗಿನ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
(4 / 10)
ಏಪ್ರಿಲ್ 29ಕ್ಕೆ ನಮ್ರತಾ ಶರ್ಮಾ ಅವರನ್ನು ವರಿಸಿ ಆರು ವರ್ಷಗಳು ಕಳೆದಿವೆ. ಈ ಖುಷಿಯಲ್ಲಿ ಪತ್ನಿ ನಮ್ರತಾ ಜತೆಗಿನ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(5 / 10)
ಅಂದಹಾಗೆ, ನಮ್ರತಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆನ್‌ಲೈನ್ ಸೀರೆ ಬಿಜಿನೆಸ್‌ನಲ್ಲಿದ್ದಾರೆ. ಇವರು ಮೂಲತಃ ಸಕಲೇಶಪುರದವರು.
(7 / 10)
ಕನ್ನಡದ ಗುಪ್ತ ಗಾಮಿನಿ, ಮಳೆ ಬಿಲ್ಲು, ಜೋಗುಳ, ಮೌನ ರಾಗ, ಮನ್ವಂತರ, ಗೆಜ್ಜೆಪೂಜೆ ಸೇರಿ ಹತ್ತಾರು ಧಾರಾವಾಹಿಗಳಲ್ಲಿ ಮಧು ಹೆಗಡೆ ನಟಿಸಿದ್ದಾರೆ.
(9 / 10)
ನಟನೆ ಜತೆಗೆ ಸಂಗೀತದಲ್ಲಿಯೂ ಮಧು ಹೆಗಡೆ ಅವರು ಗುರುತಿಸಿಕೊಂಡಿದ್ದಾರೆ. ನಟನೆ ಬಿಟ್ಟರೆ ಅವರ ಆಸಕ್ತಿ ಕ್ಷೇತ್ರ ಸಂಗೀತ.
ಇತರ ಗ್ಯಾಲರಿಗಳು