Lamborghini Temerario: ಗಂಟೆಗೆ 343 ಕಿಮೀ ವೇಗ, ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ; ಇದು ಲ್ಯಾಂಬೋರ್ಗಿನಿ ಸೂಪರ್ ಕಾರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lamborghini Temerario: ಗಂಟೆಗೆ 343 ಕಿಮೀ ವೇಗ, ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ; ಇದು ಲ್ಯಾಂಬೋರ್ಗಿನಿ ಸೂಪರ್ ಕಾರು

Lamborghini Temerario: ಗಂಟೆಗೆ 343 ಕಿಮೀ ವೇಗ, ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ; ಇದು ಲ್ಯಾಂಬೋರ್ಗಿನಿ ಸೂಪರ್ ಕಾರು

Lamborghini Temerario: ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಲ್ಯಾಂಬೋರ್ಗಿನಿ ಹೊಸ ಕಾರನ್ನು ಅನಾವರಣಗೊಳಿಸಿದೆ. 4.0-ಲೀಟರ್ ಟ್ವಿನ್-ಟರ್ಬೊ V8 ನಿಂದ ಚಾಲಿತವಾಗಿದೆ. ಟೆಮೆರಾರಿಯೊ ಕೇವಲ 2.7 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗದಲ್ಲಿ ಚಲಿಸುತ್ತದೆ ಎಂದು ಲ್ಯಾಂಬೋರ್ಗಿನಿ ಹೇಳಿದೆ.

ಲ್ಯಾಂಬೋರ್ಗಿನಿ ತನ್ನ ಹೊಸ ಸೂಪರ್ ಕಾರನ್ನು ಆವಿಷ್ಕರಿಸಿದೆ. ಲ್ಯಾಂಬೋರ್ಗಿನಿಯ ಹೊಸ ಕಾರಿನ ಹೆಸರು ಟೆಮೆರಾರಿಯೊ. ಬ್ರಾಂಡ್ ಲೈನಪ್​​ನಲ್ಲಿ ಹುರಾಕಾನ್ ಸ್ಥಾನ ಭರ್ತಿ ಮಾಡುತ್ತದೆ. ಮುಂಬರುವ ತಿಂಗಳಲ್ಲಿ ಇದರ ಖರೀದಿಗೆ ಅವಕಾಶ ಇದ್ದು, ಭಾರತದಲ್ಲೂ ಮಾರಾಟ ಮಾಡುವ ಸಾಧ್ಯತೆ ಇದೆ. ಇದರ ಬೆಲೆ 3.50 ಕೋಟಿ ಎಂದು ವರದಿಗಳು ಹೇಳುತ್ತಿವೆ.
icon

(1 / 9)

ನ್ಯಾಚುರಲಿ ಆಸ್ಪಿರೇಟೆಡ್ ವಿ10 ಎಂಜಿನ್ ಸ್ಥಾನದಲ್ಲಿ 4.0-ಲೀಟರ್ ವಿ8 ಬೈಕ್ ಹೈಬ್ರಿಡ್ ಎಂಜಿನ್ ಇರಲಿದೆ. ಇದು ಟ್ವಿನ್ ಟರ್ಬೋಚಾರ್ಜ್ಡ್ ಆಗಿದೆ. ಈ ಎಂಜಿನ್ 9,000 ರಿಂದ 9,750 ಆರ್​​ಪಿಎಂ ಮಧ್ಯೆ 789 ಬಿಹೆಚ್​ಪಿ ಪವರ್ ಮತ್ತು 4,000 ರಿಂದ 7,000 ಆರ್​ಪಿಎಂ ನಡುವೆ 730 ಎನ್ಎಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
icon

(2 / 9)

ಇದರಲ್ಲಿ ಮೂರು ಎಲೆಕ್ಟ್ರಿಕ್ ಮೋಟಾರ್​​ಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಒಂದು ಎಂಜಿನ್ ಮತ್ತು ಗೇರ್ ಬಾಕ್ಸ್ ನಡುವೆ ಇದ್ದರೆ, ಉಳಿದ ಎರಡು ಎಲೆಕ್ಟ್ರಿಕ್ ಮೋಟರ್​​​ಗಳು ಮುಂಭಾಗದ ಚಕ್ರಗಳಿಗೆ ಶಕ್ತಿ ನೀಡುತ್ತವೆ. ಈ ಎಲೆಕ್ಟ್ರಿಕ್ ಮೋಟರ್​​ಗಳು 3.8 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್​​ಗಳಿಂದ ನಿಯಂತ್ರಿಸಲ್ಪಡುತ್ತವೆ.
icon

(3 / 9)

ಈ ಎಂಜಿನ್ 10,000 ಆರ್​ಪಿಎಂನಲ್ಲಿ ಕೆಂಪು ಬಣ್ಣ ರೇಖೆಯನ್ನು ಹೊಂದಿದೆ. ಈ ಎಂಜಿನ್ 907 ಬಿಹೆಚ್​ಪಿ ಪವರ್ ಮತ್ತು 800 ಎನ್​​​ಎಂ ಟಾರ್ಕ್ ಉತ್ಪಾದಿಸುತ್ತದೆ. ಗೇರ್ ಬಾಕ್ಸ್ 8-ಸ್ಪೀಡ್ ಡ್ಯುಯಲ್ ಕ್ಲಚ್ ಸ್ವಯಂಚಾಲಿತ ಘಟಕವಾಗಿದೆ.
icon

(4 / 9)

ಕಾರಿನ ಪ್ರಮುಖ ಪವರ್ ಅಂದರೆ ಅದರ ನಾಲ್ಕು ಚಕ್ರಗಳು. ಟೆಮೆರಾರಿಯೊ ಕೇವಲ 2.7 ಸೆಕೆಂಡುಗಳಲ್ಲಿ 0-100 ಕಿ.ಮೀ ಗರಿಷ್ಠ ವೇಗವನ್ನು ಮತ್ತು ಗಂಟೆಗೆ 343 ಕಿ.ಮೀ ಗರಿಷ್ಠ ವೇಗವನ್ನು ಸಾಧಿಸುತ್ತದೆ ಎಂದು ಲ್ಯಾಂಬೋರ್ಗಿನಿ ಹೇಳಿಕೊಂಡಿದೆ.
icon

(5 / 9)

ಟೆಮೆರಾರಿಯೊ ಅತ್ಯುತ್ತಮ ಡಿಸೈನ್ ಹೊಂದಿದೆ. ಟೆಮೆರಾರಿಯೊ ನೋಡಿದ ಬೆನ್ನಲ್ಲೇ ಲ್ಯಾಂಬೋರ್ಗಿನಿ ಎಂದು ಗುರುತು ಹಿಡಿಯಬಹುದು. ಬ್ರ್ಯಾಂಡ್‌ನ ಇತರ ಸೂಪರ್‌ಕಾರ್‌ಗಳಂತೆ, ಹೆಕ್ಸಾಂಗೋನಲ್ (ಷಟ್ಕೋನ) ಎಲಿಮೆಂಟ್ಸ್​​ ಅನ್ನು ವ್ಯಾಪಕವಾಗಿ ಬಳಸಲಾಗಿದೆ.
icon

(6 / 9)

ಇದರಲ್ಲಿ ಡೇ ಟೈಮ್ ರನ್ನಿಂಗ್ಸ್​ ಲ್ಯಾಂಪ್ಸ್​ ಇವೆ. ಅವು ಷಟ್ಕೋನ ಆಕಾರದಲ್ಲಿರುತ್ತವೆ. ಬಾಡಿವರ್ಕ್​, ಸೈಡ್ ಇಯರ್​ ಟೆಕ್ಸ್, ಟೈಲ್ ಲೈಟ್ ಗಳು, ಎಕ್ಸಾಸ್ಟ್ ಪೈಪ್​ಗಾಗಿ ಹೆಕ್ಸಾಂಗೋನಲ್ (ಷಟ್ಕೋನ) ಎಲಿಮೆಂಟ್ಸ್​​ ಆಕಾರವನ್ನು ಉಪಯೋಗಿಸುತ್ತಾರೆ.
icon

(7 / 9)

ಲ್ಯಾಂಬೋರ್ಗಿನಿ ಸಿಟ್ಟಾ, ಸ್ಟ್ರಾಡಾ, ಸ್ಪೋರ್ಟ್, ಕೊರ್ಸಾ ಮುಂತಾದ ವಿವಿಧ ಡ್ರೈವಿಂಗ್ ಮೋಡ್​ಗಳಿಗಾಗಿ ಸಂಪೂರ್ಣವಾಗಿ ವಿಭಿನ್ನವಾದ ಸೌಂಡ್ ಸ್ಕೇಪ್ ಅನ್ನು ಸಹ ರಚಿಸಿದೆ. ಸಿಟ್ಟಾ ಮೋಡ್​ನಲ್ಲಿ, ಲ್ಯಾಂಬೋರ್ಗಿನಿ ಎಲೆಕ್ಟ್ರಿಕ್ ಡ್ರೈವ್ ಘಟಕದಿಂದ ಹೊಸ ವಿಶಿಷ್ಟ ಧ್ವನಿಯನ್ನು ಒದಗಿಸುತ್ತದೆ. ಸಿಟ್ಟಾ ಮೋಡ್​ನಲ್ಲಿ ಟೆಮೆರಾರಿಯೊ ತುಂಬಾ ಶಾಂತವಾಗಿರುತ್ತದೆ.
icon

(8 / 9)

ಬ್ಯಾಟರ್ ಚಾರ್ಜ್ ಶೂನ್ಯಕ್ಕೆ ಇಳಿದಾಗ, ದೇಶೀಯ ಪರ್ಯಾಯ ಮತ್ತು ಚಾರ್ಜಿಂಗ್ ಕಾಲಮ್ ಕರೆಂಟ್ ಎರಡನ್ನೂ ಬಳಸಿಕೊಂಡು 7 ಕಿಲೋವ್ಯಾಟ್ ಶಕ್ತಿಯೊಂದಿಗೆ ರೀಚಾರ್ಜ್ ಮಾಡಬಹುದು. ಇದು ಕೇವಲ 30 ನಿಮಿಷಗಳಲ್ಲಿ ಸಂಪೂರ್ಣ ರೀಚಾರ್ಜ್ ಮಾಡಬಹುದು. ಮುಂಭಾಗದ ಚಕ್ರಗಳಿಂದ ರಿಜನರೇಟಿವ್ ಬ್ರೇಕಿಂಗ್ ಅಡಿಯಲ್ಲಿ ಅಥವಾ ನೇರವಾಗಿ ವಿ8 ಎಂಜಿನ್​​ನಿಂದ ರೀಚಾರ್ಜ್ ಮಾಡಬಹುದು
icon

(9 / 9)

ಇತರ ಗ್ಯಾಲರಿಗಳು