Leo Box Office Collections: ಲಿಯೊ ಕಲೆಕ್ಷನ್ ಬರೀ ಓಳು, ನಿರ್ಮಾಪಕರು ಹೇಳ್ತಿರೋದೆಲ್ಲಾ ಸುಳ್ಳು; ಡಿಸ್ಟ್ರಿಬ್ಯೂಟರ್ಸ್ ಅಚ್ಚರಿ ಹೇಳಿಕೆ
ವಿಜಯ್ ದಳಪತಿ ಅಭಿನಯಿಸಿರುವ ಲಿಯೊ ಸಿನಿಮಾ ಕಲೆಕ್ಷನ್ಸ್ಗೆ ಬಗ್ಗೆ ನಿರ್ಮಾಕರು ಹೇಳ್ತಿರೋದೆಲ್ಲಾ ಸುಳ್ಳು. ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಂತ ಸದ್ದು ಮಾಡ್ತಿಲ್ಲ ಎಂದು ಡಿಸ್ಟ್ರಿಬ್ಯೂಟರ್ಸ್ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಇದು ಜೈಲರ್ ಕಲೆಕ್ಷನ್ ಮೀರಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
(1 / 7)
ಸಿನಿಮಾಗಳ ಬಾಕ್ಸ್ಆಫೀಸ್ ಕಲೆಕ್ಷನ್ಸ್ ವಿಷಯದಲ್ಲಿ ಯಾವಾಗಲೂ ಏನಾದರೂ ಒಂದು ವಿವಾದ ನಡೆಯುತ್ತಲೇ ಇರುತ್ತದೆ. ಇದೀಗ ದಳಪತಿ ವಿಜಯ್ ಅವರ ವಿಯೊ ಸಿನಿಮಾದ ಕಲೆಕ್ಷನ್ಸ್ ಬಗ್ಗೆ ಇದೇ ರೀತಿಯ ಚರ್ಚೆಗಳು ನಡೆಯುತ್ತಿವೆ. ಲಿಯೊ ನಿರ್ಮಾಪಕ ಲಲಿತ್ ಕುಮಾರ್ ಕಲೆಕ್ಷನ್ಸ್ ವಿಷಯದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಡಿಸ್ಟ್ರಿಬ್ಯೂಟರ್ಸ್ ಗಂಭೀರ ಆರೋಪ ಮಾಡಿದ್ದಾರೆ. ಥಿಯೇಟರ್ ಓನರ್ ಆಗಿರುವ ಶ್ರೀಧರ್ ಅವರ ಸಂಚಲನ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
(2 / 7)
ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ಮತ್ತು ಮಂಗಳವಾರ ಲಿಯೊ ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ ಎಂದು ಶ್ರೀಧರ್ ಹೇಳಿದ್ದಾರೆ. ಆದರೆ ಬುಧವಾರ ಮತ್ತು ಗುರುವಾರ ಕಲೆಕ್ಷನ್ ತುಂಬಾ ಕಳೆಯಾಗಿತ್ತು ಎಂದಿದ್ದಾರೆ. ಹಲವೆಡೆ ಪ್ರದರ್ಶನಗಳೇ ರದ್ದಾಗಿವೆ. ಎರಡನೇ ದಿನ ಲಿಯೊ ಕಲೆಕ್ಷನ್ ಕಡಿಮೆ ಆಗಿರುವುದು ನಿಜ. ನಾನೂ ಕೂಡ ರಂಗಭೂಮಿ ನಡೆಸುತ್ತಿರುವುದರಿಂದ ಹೀಗೆ ಹೇಳುತ್ತಿದ್ದೇನೆ ಎಂದಿದ್ದಾರೆ. ಕಲೆಕ್ಷನ್ ವಾರದಿಂದ ವಾರಕ್ಕೆ ಬದಲಾಗುತ್ತಿದೆ. ಹೀಗಾಗಿ ಯಾರು ನಂಬರ್ 1, ನಂಬರ್ 2 ಅಂತ ಹೇಳೋಕೆ ಬರುವುದಿಲ್ಲ ಎಂದಿದ್ದಾರೆ.
(3 / 7)
ಲಿಯೊ ಸಿನಿಮಾ ಕಲೆಕ್ಷನ್ಸ್ ಬಗ್ಗೆ ಮಂಗಳವಾರದವರೆಗೆ ಹೇಳಿದೆಲ್ಲಾ ನಿಜ. ಆ ಮೇಲೆ ಹೇಳಿರೋದೆಲ್ಲಾ ಸುಳ್ಳ ಎಂದು ಶ್ರೀಧರ್ ಹೇಳಿದ್ದಾರೆ. ಲಿಯೊ ಕಲೆಕ್ಷನ್ಸ್ ಅನ್ನು ಜೈಲರ್ಗೆ ಯಾಕೆ ಹೋಲಿಕೆ ಮಾಡುತ್ತಿದ್ದೀರಿ. ನನಗೆ ಗೊತ್ತಿರುವಂತೆ ಲಿಯೊ ಜೈಲರ್ ಕಲೆಕ್ಷನ್ಸ್ ಬ್ರೇಕ್ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(4 / 7)
ನಿರ್ದೇಶಕ ಲೋಕೇಸ್ ಕನಕರಾಜ್ ಕೂಡ ತುಂಬಾ ಬಿಲ್ಡಪ್ ಕೊಟ್ಟಿದ್ದಾರೆ ಎಂದು ಶ್ರೀಧರ್ ಹೇಳಿರುವುದು ಸಿನಿಮಾ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ. ಎಲ್ಸಿಯು ಎಂದರೇನು? ಲಿಯೊ ದ್ವಿತೀಯಾರ್ಧದಲ್ಲಿ ಸಂಜಯ್ ದತ್ ಯಾಕೆ ಕಾಣಿಸಿಕೊಳ್ಳುತ್ತಾರೆ? ಅರ್ಜುನ್ ಯಾಕೆ ಬರುತ್ತಾನೆ? ವಿಜಯ್ ಮೆರ್ಸಲ್ ಮತ್ತು ಸರ್ಕಾರ್ ಕಲೆಕ್ಷನ್ ನಿಜ. ಆದರೆ ಲಿಯೊ ಬಾಕ್ಸ್ಆಫೀಸ್ ಬಗ್ಗೆ ತಪ್ಪು ಹೇಳ್ತಿದ್ದಾರೆ ಅಂತ ಶ್ರೀಧರ್ ಹೇಳಿದ್ದಾರೆ.
(5 / 7)
ವಿಜಯ್ ದಳಪತಿ ಅಭಿನಯಿಸಿರುವ ಲಿಯೊ ಸಿನಿಮಾಗೆ ತುಂಬಾ ಬಿಲ್ಡಪ್ ನೀಡಲಾಗಿತ್ತು. ಇದು ಬಹಳಷ್ಟು ಹಾನಿ ಮಾಡುತ್ತದೆ. ಲಿಯೊ ಇನ್ನೂ ಥಿಯೇಟರ್ಗಳಲ್ಲಿ ಬೇರೆ ಸಿನಿಮಾಗಳಂತೆಯೇ ಪ್ರದರ್ಶನ ಕಾಣುತ್ತಿದೆ. ಮಾರ್ನಿಂಗ್ ಶೋಗಳ ಕೊರತೆಯಿಂದ ಶೇಕಡಾ 10 ರಷ್ಟು ಕಲೆಕ್ಷನ್ ಕಡಿಮೆಯಾಗಿರೋದು ನಿಜ. ಸಿನಿಮಾದ ಸೆಕೆಂಡ್ ಆಫ್ ತುಂಬಾ ಕೆಟ್ಟದಾಗಿದೆ. ಇದಕ್ಕೆ ನಿರ್ದೇಶಕ ಲೋಕೇಸ್ ಕನಕರಾಜ್ ಅವರೇ ಹೊಣೆ ಎಂದಿದ್ದಾರೆ.
(6 / 7)
ಬಿಡುಗಡೆಗೂ ಮುನ್ನವೇ ಲಿಯೊ ಭಾರಿ ಹೈಪ್ ಮಾಡಿತ್ತು. ಆದರೆ ಕಲೆಕ್ಷನ್ ಹೇಳಿಕೊಳ್ಳುವಂತ ಮಟ್ಟದಲ್ಲಿ ಇಲ್ಲ. ಜಪಾನ್ ಕಲೆಕ್ಷನ್ಸ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಶ್ರೀಧರ್ ಹೇಳಿದ್ದಾರೆ.
ಇತರ ಗ್ಯಾಲರಿಗಳು