ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿರ್ಮಲ ಮನಸ್ಸು, ನಿಖರ ಆಲೋಚನೆಗಾಗಿ ನಿಮ್ಮ ದಿನಚರಿಯಲ್ಲಿ ತಪ್ಪದೇ ಈ 5 ಅಂಶಗಳನ್ನು ರೂಢಿಸಿಕೊಳ್ಳಿ

ನಿರ್ಮಲ ಮನಸ್ಸು, ನಿಖರ ಆಲೋಚನೆಗಾಗಿ ನಿಮ್ಮ ದಿನಚರಿಯಲ್ಲಿ ತಪ್ಪದೇ ಈ 5 ಅಂಶಗಳನ್ನು ರೂಢಿಸಿಕೊಳ್ಳಿ

ನಿತ್ಯವೂ ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಬೇಕಾದರೆ ಮನಸ್ಸಿನಲ್ಲಿ ಗೊಂದಲ ಇರಬಾರದು. ಆದ್ದರಿಂದ ನಿರ್ಮಲ ಮನಸ್ಸು ಮತ್ತು ನಿಖರ ಆಲೋಚನೆಗಾಗಿ ನಿಮ್ಮ ದಿನಚರಿಯಲ್ಲಿ ತಪ್ಪದೇ ಈ 5 ಅಂಶಗಳನ್ನು ರೂಢಿಸಿಕೊಳ್ಳಿ. 

ಸ್ಪಷ್ಟ ಮತ್ತು ಕೇಂದ್ರೀಕೃತ ಮನಸ್ಸು ಒಂದಿದ್ದರೆ, ದಿನವಿಡೀ ಯಶಸ್ಸು ಮತ್ತು ಯೋಗಕ್ಷೇಮಕ್ಕೆ ಅದುವೇ ವೇದಿಕೆಯನ್ನು ಹೊಂದಿಸಿಕೊಡುತ್ತದೆ. ಉತ್ತಮ ಯೋಜಿತ ಬೆಳಗಿನ ದಿನಚರಿಯು ಮಾನಸಿಕ ಸ್ಪಷ್ಟತೆಯನ್ನು ಸಾಧಿಸಲು ನಿಮಗೆ ಸಹಾಯ ಮಾಡಬಲ್ಲದು. ದಿನದ ಸವಾಲುಗಳನ್ನು ಆತ್ಮವಿಶ್ವಾಸ ಮತ್ತು ಸಹಜವಾಗಿ ನಿಭಾಯಿಸಲು ನಿಮ್ಮನ್ನು ಸಜ್ಜುಗೊಳಿಸುತ್ತದೆ. ಆದ್ದರಿಂದ ನಿಮ್ಮ ದಿನಚರಿಯಲ್ಲಿ ಈ ಐದು ನಿರ್ಣಾಯಕ ಅಂಶಗಳ ಕಡೆಗೆ ಗಮನಹರಿಸಿ.
icon

(1 / 6)

ಸ್ಪಷ್ಟ ಮತ್ತು ಕೇಂದ್ರೀಕೃತ ಮನಸ್ಸು ಒಂದಿದ್ದರೆ, ದಿನವಿಡೀ ಯಶಸ್ಸು ಮತ್ತು ಯೋಗಕ್ಷೇಮಕ್ಕೆ ಅದುವೇ ವೇದಿಕೆಯನ್ನು ಹೊಂದಿಸಿಕೊಡುತ್ತದೆ. ಉತ್ತಮ ಯೋಜಿತ ಬೆಳಗಿನ ದಿನಚರಿಯು ಮಾನಸಿಕ ಸ್ಪಷ್ಟತೆಯನ್ನು ಸಾಧಿಸಲು ನಿಮಗೆ ಸಹಾಯ ಮಾಡಬಲ್ಲದು. ದಿನದ ಸವಾಲುಗಳನ್ನು ಆತ್ಮವಿಶ್ವಾಸ ಮತ್ತು ಸಹಜವಾಗಿ ನಿಭಾಯಿಸಲು ನಿಮ್ಮನ್ನು ಸಜ್ಜುಗೊಳಿಸುತ್ತದೆ. ಆದ್ದರಿಂದ ನಿಮ್ಮ ದಿನಚರಿಯಲ್ಲಿ ಈ ಐದು ನಿರ್ಣಾಯಕ ಅಂಶಗಳ ಕಡೆಗೆ ಗಮನಹರಿಸಿ.

ಮುಂಜಾನೆ (5 ರಿಂದ 6 ಗಂಟೆ ಒಳಗೆ) ಎದ್ದು ದಿನಚರಿ ಶುರುಮಾಡಬೇಕು. ಹೀಗೆ ದಿನಚರಿ ಶುರುಮಾಡುವಾಗ ನಿತ್ಯಕರ್ಮಗಳನ್ನು ಮುಗಿಸಿ ಸ್ವಲ್ಪ ಹೊತ್ತು ಶಾಂತ ಪರಿಸರದಲ್ಲಿ ಧ್ಯಾನ ಮಾಡಿ. ಪ್ರಾಣಾಯಾಮ ಮಾಡುತ್ತ, ಉಸಿರಾಟದ ಮೇಲೆ ಗಮನಕೇಂದ್ರೀಕರಿಸಿ. ಆರಂಭಿಕ ಹಂತದಲ್ಲಿ ಐದೇ ಐದು ನಿಮಿಷ ಇದಕ್ಕಾಗಿ ಬಳಸಿದರೆ ಸಾಕು. ನಂತರ ನಿಧಾನವಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಾಣಾಯಾಮ, ಧ್ಯಾನದ ಅವಧಿ ಹೆಚ್ಚಿಸಿಕೊಳ್ಳಬಹುದು.
icon

(2 / 6)

ಮುಂಜಾನೆ (5 ರಿಂದ 6 ಗಂಟೆ ಒಳಗೆ) ಎದ್ದು ದಿನಚರಿ ಶುರುಮಾಡಬೇಕು. ಹೀಗೆ ದಿನಚರಿ ಶುರುಮಾಡುವಾಗ ನಿತ್ಯಕರ್ಮಗಳನ್ನು ಮುಗಿಸಿ ಸ್ವಲ್ಪ ಹೊತ್ತು ಶಾಂತ ಪರಿಸರದಲ್ಲಿ ಧ್ಯಾನ ಮಾಡಿ. ಪ್ರಾಣಾಯಾಮ ಮಾಡುತ್ತ, ಉಸಿರಾಟದ ಮೇಲೆ ಗಮನಕೇಂದ್ರೀಕರಿಸಿ. ಆರಂಭಿಕ ಹಂತದಲ್ಲಿ ಐದೇ ಐದು ನಿಮಿಷ ಇದಕ್ಕಾಗಿ ಬಳಸಿದರೆ ಸಾಕು. ನಂತರ ನಿಧಾನವಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಾಣಾಯಾಮ, ಧ್ಯಾನದ ಅವಧಿ ಹೆಚ್ಚಿಸಿಕೊಳ್ಳಬಹುದು.(Pexel)

ಶಾರೀರಿಕ ಶಕ್ತಿ ಸಾಮರ್ಥ್ಯ ಹೆಚ್ಚಿಸಲು ಮತ್ತು ಮಾನಸಿಕ ಸ್ಪಷ್ಟತೆಯನ್ನು ನಿಖರಗೊಳಿಸುವುದಕ್ಕೆ ಬೆಳಗ್ಗಿನ ದಿನಚರಿಯಲ್ಲಿ ಶಾರೀರಿಕ ವ್ಯಾಯಾಮವನ್ನು ಜೋಡಿಸಿಕೊಳ್ಳಬೇಕು. ಯೋಗ, ಕ್ಷಿಪ್ರ ವ್ಯಾಯಾಮ ಅಥವಾ ಬಿರುಸಾದ ನಡಿಗೆ ಇವೆಲ್ಲವೂ ಇದಕ್ಕೆ ಪೂರಕ. ಇದು ಶರೀರದಲ್ಲಿ ರಕ್ತಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಇದನ್ನು ಆರಂಭಿಕ ಹಂತದಲ್ಲಿ 10 ನಿಮಿಷ ಮಾಡಬಹುದು. ನಂತರ ನೋಡಿಕೊಂಡು ಅವಧಿ ಹೆಚ್ಚಿಸಿಕೊಳ್ಳಬಹುದು.
icon

(3 / 6)

ಶಾರೀರಿಕ ಶಕ್ತಿ ಸಾಮರ್ಥ್ಯ ಹೆಚ್ಚಿಸಲು ಮತ್ತು ಮಾನಸಿಕ ಸ್ಪಷ್ಟತೆಯನ್ನು ನಿಖರಗೊಳಿಸುವುದಕ್ಕೆ ಬೆಳಗ್ಗಿನ ದಿನಚರಿಯಲ್ಲಿ ಶಾರೀರಿಕ ವ್ಯಾಯಾಮವನ್ನು ಜೋಡಿಸಿಕೊಳ್ಳಬೇಕು. ಯೋಗ, ಕ್ಷಿಪ್ರ ವ್ಯಾಯಾಮ ಅಥವಾ ಬಿರುಸಾದ ನಡಿಗೆ ಇವೆಲ್ಲವೂ ಇದಕ್ಕೆ ಪೂರಕ. ಇದು ಶರೀರದಲ್ಲಿ ರಕ್ತಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಇದನ್ನು ಆರಂಭಿಕ ಹಂತದಲ್ಲಿ 10 ನಿಮಿಷ ಮಾಡಬಹುದು. ನಂತರ ನೋಡಿಕೊಂಡು ಅವಧಿ ಹೆಚ್ಚಿಸಿಕೊಳ್ಳಬಹುದು.(Pexel)

ಮನಸ್ಸು ಉಲ್ಲಾಸದಿಂದ ಇರಬೇಕು ಎಂದಾದರೆ ಬೆಳಗ್ಗೆ ಆರೋಗ್ಯಕರ ಉಪಾಹಾರ ಸೇವಿಸುವುದು ಕೂಡ ಅಗತ್ಯ. ಉಪಾಹಾರ ಯಾವಾಗಲೂ ಪ್ರೊಟೀನ್‌ಯುಕ್ತ, ಧಾನ್ಯಗಳು, ಆರೋಗ್ಯಕರ ಕೊಬ್ಬು ಒಳಗೊಂಡ ಸಮತೋಲನದ ಉಪಾಹಾರ ಸೇವಿಸುವುದು ಉತ್ತಮ. ಪ್ರಾದೇಶಿಕ ಹವಾಮಾನಕ್ಕೆ ಅನುಗುಣವಾದ ಆಹಾರ ಸೇವಿಸಬೇಕು. ಮುನ್ನಾ ದಿನವೇ ಉಪಾಹಾರವನ್ನು ನಿರ್ಧರಿಸಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಟ್ಟುಕೊಳ್ಳಿ. 
icon

(4 / 6)

ಮನಸ್ಸು ಉಲ್ಲಾಸದಿಂದ ಇರಬೇಕು ಎಂದಾದರೆ ಬೆಳಗ್ಗೆ ಆರೋಗ್ಯಕರ ಉಪಾಹಾರ ಸೇವಿಸುವುದು ಕೂಡ ಅಗತ್ಯ. ಉಪಾಹಾರ ಯಾವಾಗಲೂ ಪ್ರೊಟೀನ್‌ಯುಕ್ತ, ಧಾನ್ಯಗಳು, ಆರೋಗ್ಯಕರ ಕೊಬ್ಬು ಒಳಗೊಂಡ ಸಮತೋಲನದ ಉಪಾಹಾರ ಸೇವಿಸುವುದು ಉತ್ತಮ. ಪ್ರಾದೇಶಿಕ ಹವಾಮಾನಕ್ಕೆ ಅನುಗುಣವಾದ ಆಹಾರ ಸೇವಿಸಬೇಕು. ಮುನ್ನಾ ದಿನವೇ ಉಪಾಹಾರವನ್ನು ನಿರ್ಧರಿಸಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಟ್ಟುಕೊಳ್ಳಿ. (Pexel)

ಬೆಳಗ್ಗೆ ಎದ್ದಕೂಡಲೇ ಒಂದು ಲೋಟ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಇದು ಶರೀರವನ್ನು ಜಾಗೃತಗೊಳಿಸುವುದಕ್ಕೆ ಸಹಕಾರಿ. ಈ ಕ್ರಮವು ಚಯಾಪಚಯ ಪ್ರಕ್ರಿಯೆ ಚುರುಕುಗೊಳಿಸಿತ್ತದೆ. ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಮನಸ್ಸನ್ನು ಚುರುಕುಗೊಳಿಸುತ್ತದೆ. ಎದ್ದ ಕೂಡಲೇ ನೀರು ಕುಡಿಯಲು ನೆನಪು ಮಾಡಿಕೊಳ್ಳುವುದಕ್ಕಾಗಿ ನೀರಿನ ಬಾಟಲಿ/ ನೀರಿನ ಜಗ್ ಅನ್ನು ಬೆಡ್ ರೂಮ್‌ನಲ್ಲೇ ಇರಿಸಿಕೊಳ್ಳಿ.  
icon

(5 / 6)

ಬೆಳಗ್ಗೆ ಎದ್ದಕೂಡಲೇ ಒಂದು ಲೋಟ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಇದು ಶರೀರವನ್ನು ಜಾಗೃತಗೊಳಿಸುವುದಕ್ಕೆ ಸಹಕಾರಿ. ಈ ಕ್ರಮವು ಚಯಾಪಚಯ ಪ್ರಕ್ರಿಯೆ ಚುರುಕುಗೊಳಿಸಿತ್ತದೆ. ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಮನಸ್ಸನ್ನು ಚುರುಕುಗೊಳಿಸುತ್ತದೆ. ಎದ್ದ ಕೂಡಲೇ ನೀರು ಕುಡಿಯಲು ನೆನಪು ಮಾಡಿಕೊಳ್ಳುವುದಕ್ಕಾಗಿ ನೀರಿನ ಬಾಟಲಿ/ ನೀರಿನ ಜಗ್ ಅನ್ನು ಬೆಡ್ ರೂಮ್‌ನಲ್ಲೇ ಇರಿಸಿಕೊಳ್ಳಿ.  (Pexel)

ಬೆಳಗ್ಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ವ್ಯಾಯಾಮ, ಶರೀರ ಶುದ್ಧಿ, ಉಪಾಹಾರ ಎಲ್ಲ ಸೇವಿಸಿದ ಬಳಿಕ, ದಿನವಿಡೀ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಆದ್ಯತೆ ಮೇರೆಗೆ ಇದನ್ನು ನಿರ್ಧರಿಸಿ ಮಾಡುತ್ತ ಹೋಗಬೇಕು. ದಿನದ ಕೊನೆಗೆ ಕೆಲಸ ಮುಗಿಸಿದ ಖುಷಿಯನ್ನು ಅನುಭವಿಸಬಹುದು ನೋಡಿ. ಇದಕ್ಕಾಗಿ ಡಿಜಿಟಲ್ ಪ್ಲಾನರ್ ಅಥವಾ ಅಪ್ಲಿಕೇಶನ್ ಅನ್ನೂ ನೀವು ಬಳಸಬಹುದು. 
icon

(6 / 6)

ಬೆಳಗ್ಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ವ್ಯಾಯಾಮ, ಶರೀರ ಶುದ್ಧಿ, ಉಪಾಹಾರ ಎಲ್ಲ ಸೇವಿಸಿದ ಬಳಿಕ, ದಿನವಿಡೀ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಆದ್ಯತೆ ಮೇರೆಗೆ ಇದನ್ನು ನಿರ್ಧರಿಸಿ ಮಾಡುತ್ತ ಹೋಗಬೇಕು. ದಿನದ ಕೊನೆಗೆ ಕೆಲಸ ಮುಗಿಸಿದ ಖುಷಿಯನ್ನು ಅನುಭವಿಸಬಹುದು ನೋಡಿ. ಇದಕ್ಕಾಗಿ ಡಿಜಿಟಲ್ ಪ್ಲಾನರ್ ಅಥವಾ ಅಪ್ಲಿಕೇಶನ್ ಅನ್ನೂ ನೀವು ಬಳಸಬಹುದು. (Pexel)


ಇತರ ಗ್ಯಾಲರಿಗಳು