ರಾಹುಲ್ ಗಾಂಧಿ ಮತ್ತು ಅವರ ಬಿಳಿ ಟಿ ಶರ್ಟ್‌ನ ರಹಸ್ಯ; ಈ ಬಗ್ಗೆ ಸ್ವತಃ ಅವರೇ ಹೇಳಿರೋದು ಇಷ್ಟು- ಫೋಟೋ ವರದಿ
ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಬಂದಾಗಿದೆ. ಇಂಡಿಯಾ ಮೈತ್ರಿಗೆ 234 ಸ್ಥಾನ ಬಂದಿದೆ. ಕಾಂಗ್ರೆಸ್ ಪಕ್ಷ ಸಂಘಟಿಸಿದ ಭಾರತ್ ಜೋಡೋ ಯಾತ್ರೆ, ಅದಾಗಿ ಭಾರತ್ ಜೋಡೋ ನ್ಯಾಯ ಯಾತ್ರೆ ಫಲ ನೀಡಿದೆ. ಈ ಯಾತ್ರೆಗಳು ಶುರುವಾದಲ್ಲಿಂದ ರಾಹುಲ್ ಗಾಂಧಿ ಸದಾ ಬಿಳಿ ಟಿ ಶರ್ಟ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಹೇಳಿರೋದು ಇಷ್ಟು- ಫೋಟೋ ವರದಿ.
(1 / 7)
ರಾಹುಲ್ ಗಾಂಧಿ ಅವರು ಮೇ 25 ರಂದು ದೆಹಲಿಯಲ್ಲಿ ಮತ ಚಲಾಯಿಸಿದ ಬಳಿಕ ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದ ಕ್ಷಣ. ಆ ದಿನವೂ ಅವರು ಬಿಳಿ ಟಿ- ಶರ್ಟ್ ಧರಿಸಿದ್ದರು.
(PTI Photo/Kamal Kishore)(2 / 7)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಜೂನ್ 6) ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಫಲಿತಾಂಶದ ವೇಳೆ ಷೇರುಪೇಟೆ ಸೂಚ್ಯಂಕಗಳ ಚಲನವಲನವನ್ನು ಟೀಕಿಸಿದರು. ಜೂನ್ 4 ರ ಫಲಿತಾಂಶದ ವೇಳೆ ಸೂಚ್ಯಂಕ ದಾಖಲೆ ಮಟ್ಟಕ್ಕೆ ಏರಲಿದೆ ಎಂಬುದಾಗಿ ಪ್ರಧಾನಿ ಮೋದಿ ಹೇಳಿದರು. ಮಾರನೇ ದಿನವೇ ಸೂಚ್ಯಂಕ 2,000ಕ್ಕೂ ಹೆಚ್ಚು ಏರಿದ್ದವು. ಪ್ರಧಾನಿ ಮೋದಿ ಮಾತು ನಂಬಿ ಅನೇಕ ಚಿಲ್ಲರೆ ಹೂಡಿಕೆದಾರರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದರು. ಈ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ಆಗಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಇಂದು ಕೂಡ ಅವರು ಬಿಳಿ ಟಿ-ಶರ್ಟ್ ಅನ್ನೇ ಧರಿಸಿದ್ದರು.
(AP Photo/Manish Swarup)(3 / 7)
ವಾರಾಣಸಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಜೊತೆಗೆ ಮೇ 28 ರಂದು ಕಾಣಿಸಿಕೊಂಡಿದ್ದ ರಾಹುಲ್ ಗಾಂಧಿ ಅಂದು ಕೂಡ ಬಿಳಿ ಟಿ- ಶರ್ಟ್ ಧರಿಸಿದ್ದರು.
(PTI)(4 / 7)
ಶಹೀದ್ ಭಗತ್ ಸಿಂಗ್ ನಗರದಲ್ಲಿ ಮೇ 30 ರಂದು ಲೋಕಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಸಂವಿಧಾನದ ಸಣ್ಣ ಪುಸ್ತಕ ಹಿಡಿದು ಪ್ರಚಾರ ನಡೆಸಿದ್ದ ರಾಹುಲ್ ಗಾಂಧಿ, ಅಂದು ಕೂಡ ಬಿಳಿ ಟಿ ಶರ್ಟ್ ಧರಿಸಿದ್ದರು.
(Congress-X)(5 / 7)
ಪಂಜಾಬ್‌ನ ಲುಧಿಯಾನಾದಲ್ಲಿ ಮೇ 29ರಂದು ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರಿಗೆ ಪುಷ್ಪನಮನ ಸಲ್ಲಿಸಿದ ಸಂದರ್ಭದಲ್ಲೂ ರಾಹುಲ್ ಗಾಂಧಿ ಬಿಳಿ ಟಿ ಶರ್ಟ್ ಧರಿಸಿದ್ದರು.
(AICC)(6 / 7)
ಬಿಹಾರದ ಪಾಟಲೀಪುತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಿಸಾ ಭಾರ್ತಿ ಪರವಾಗಿ ಪ್ರಚಾರ ನಡೆಸಿದ್ದ ರಾಹುಲ್ ಗಾಂಧಿ ಬಿಳಿ ಟಿ ಶರ್ಟ್ ಧರಿಸಿದ್ದರು. ರಾಹುಲ್ ಗಾಂಧಿ ಅವರು ಮೇ ತಿಂಗಳ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಪ್ರಚಾರದಲ್ಲಿದ್ದ ವೇಳೆ. ಸಿದ್ಧಾಂತ ಮುಖ್ಯವೋ ಅಥವಾ ರಾಜಕೀಯ ಮುಖ್ಯವೋ ಎಂಬ ವಿಷಯದ ಬಗ್ಗೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಸಿದ್ಧಾಂತವೇ ಮುಖ್ಯ ಎಂಬ ಉತ್ತರ ಪಡೆದಿದ್ದರು. ಅದಕ್ಕೆ ಸಹಮತವನ್ನೂ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲೇ ಅವರು ಬಿಳಿ ಟಿ ಶರ್ಟ್‌ನ ರಹಸ್ಯವನ್ನು ಬಿಚ್ಚಿಟ್ಟಿದ್ದರು.
(ANI Picture Service )(7 / 7)
ಮೇ ತಿಂಗಳ ಆರಂಭದಲ್ಲಿ ಕರ್ನಾಟಕ ಪ್ರವಾಸ ಮಾಡಿದ್ದ ರಾಹುಲ್ ಗಾಂಧಿ ಕೆಲವು ಲಘು ದಾಟಿಯ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರ ಕಿರು ಸಂದರ್ಶನವನ್ನೂ ಮಾಡಿದ್ದರು. ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದರಲ್ಲಿ ಅವರು, ಸದಾ ಬಿಳಿ ಟಿ ಶರ್ಟ್ ಧರಿಸುತ್ತಿರುವುದು ಯಾಕೆ ಎಂಬುದನ್ನು ವಿವರಿಸಿದ್ದಾರೆ. ಸರಳವಾಗಿರುವುದು ಮತ್ತು ಪಾರದರ್ಶಕವಾಗಿರುವುದು ಎಂಬುದರ ಸಂಕೇತವಾಗಿ ಬಿಳಿ ಟಿ ಶರ್ಟ್ ಧರಿಸುತ್ತಿದ್ದೇನೆ. ಉಡುಪಿನ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದರು.
(Congress-X)ಇತರ ಗ್ಯಾಲರಿಗಳು