JEE Mains: ಜೆಇಇ ಮೇನ್ಸ್‌ನಲ್ಲಿ ಕಡಿಮೆ ಮಾರ್ಕ್ ಬಂತಾ, ಚಿಂತೆ ಬಿಡಿ, ಬಿಟೆಕ್ ಮಾಡೋದಕ್ಕೆ ಈಗ ನಿಮ್ಮ ಬಳಿ 10 ಆಯ್ಕೆಗಳಿವೆ
JEE Mains Results: ಜೆಇಇ ಮೇನ್ಸ್ ಸೆಷನ್ಸ್ 1ರ ಫಲಿತಾಂಶ ಪ್ರಕಟವಾಗಿದೆ. ಅನೇಕರಿಗೆ ಕಡಿಮೆ ಶೇಕಡವಾರು ಅಂಕ ಬಂದ ಕಾರಣ ನಿರಾಶರಾಗಿರುವುದು ಸಾಮಾನ್ಯ ಮತ್ತು ಸಹಜ. ಆದರೆ ನಿರಾಶರಾಗಬೇಕಿಲ್ಲ. ಏಪ್ರಿಲ್‌ನಲ್ಲಿ ಮತ್ತೆ ಪರೀಕ್ಷೆ ಬರೆಯಬಹುದು. ಅಲ್ಲದೇ, ಇತರೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆದು ಬಿಟೆಕ್ ಅಡ್ಮಿಷನ್ ಪಡೆಯಬಹುದು. ಅಂತಹ 10 ಅವಕಾಶಗಳ ವಿವರ ಇಲ್ಲಿದೆ.
(1 / 11)
ಜೆಇಇ ಮೇನ್ಸ್ 2025ರ ಸೆಷನ್ಸ್ 1 ರಲ್ಲಿ ಕಡಿಮೆ ಅಂಕ ಪಡೆದು ನಿರಾಶರಾದವರಿಗೆ ಅಥವಾ ಬರೆಯಲಾಗದೇ ಚಾನ್ಸ್ ಮಿಸ್ ಮಾಡಿಕೊಂಡವರಿಗೆ ಸೆಷನ್ಸ್ 2 ಉತ್ತಮ ಅವಕಾಶ ಒದಗಿಸಲಿದೆ. ಜೆಇಇ ಮೇನ್ಸ್ 2025ರ ಷೆಷನ್ಸ್ 2ರ ನೋಂದಣಿಗೆ ಫೆ 24ರ ರಾತ್ರಿ 9 ಗಂಟೆ ತನಕ ಕಾಲಾವಕಾಶವಿದೆ. ನಿಗದಿತ ಅರ್ಜಿ ನಮೂನೆಯಲ್ಲಿ, ಫೆಬ್ರವರಿ 24 ರಂದು ರಾತ್ರಿ 11.50 ರೊಳಗೆ ತಿದ್ದುಪಡಿಯನ್ನು ಮಾಡಲು ಅವಕಾಶವಿರುತದೆ.
(2 / 11)
ಜೆಇಇ ಮೇನ್ಸ್ ಸೆಷನ್ಸ್ 2 ಪರೀಕ್ಷೆ ಏಪ್ರಿಲ್ 1 ರಿಂದ 8ರ ತನಕ ಬೆಳಿಗ್ಗೆ ಪಾಳಿ 9 ರಿಂದ 12 ಮತ್ತು ಅಪರಾಹ್ನದ ಪಾಳಿ 3 ರಿಂದ 6 ಗಂಟೆ ತನಕ ನಡೆಯಬಹುದು. ಪರೀಕ್ಷಾ ವೇಳಾಪಟ್ಟಿ ಮಾರ್ಚ್ 2ನೇ ವಾರ ಪ್ರಕಟವಾಗಬಹುದು. ಪರೀಕ್ಷಾ ದಿನಾಂಕಕ್ಕೆ ಮೂರು ದಿನ ಮುಂಚಿತವಾಗಿ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗುತ್ತದೆ.ಏಪ್ರಿಲ್ 17 ರಂದು ಫಲಿತಾಂಶ ಪ್ರಕಟವಾಗಬಹುದು.
(3 / 11)
ಜೆಇಇ ಮೇನ್ ಹೊರತುಪಡಿಸಿ, ದೇಶದಲ್ಲಿ ಇತರ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳೂ ಇವೆ. ಅವುಗಳ ಪೈಕಿ, ಬಿಟ್ಸಾಟ್ (ಬಿಟ್ಸಾಟ್-ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಪ್ರವೇಶ ಪರೀಕ್ಷೆ) ಮುಖ್ಯವಾದುದು. ಇದನ್ನು ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಬಿಟ್ಸ್), ಪಿಲಾನಿ ಆಯೋಜಿಸುತ್ತದೆ. ಬಿಟ್ಸ್ ಪಿಲಾನಿ ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್ ಮುಂತಾದ ವಿವಿಧ ವಿಷಯಗಳಲ್ಲಿ ಬಿ.ಟೆಕ್ ಕೋರ್ಸ್‌ಗಳನ್ನು ನೀಡುತ್ತದೆ.
(4 / 11)
ವಿಟೀ (VITEEE 2025) ಅಥವಾ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಇನ್ನೊಂದು ಮುಖ್ಯ ಪ್ರವೇಶ ಪರೀಕ್ಷೆ. ಇದನ್ನು ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ನಡೆಸುತ್ತದೆ. ಇಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್, ಬಯೋ ಟೆಕ್ನಾಲಜಿ, ಸಿವಿಲ್ ಎಂಜಿನಿಯರಿಂಗ್ ಮುಂತಾದ ವಿವಿಧ ಪರಿಣತಿಗಳಲ್ಲಿ ಬಿಟೆಕ್ ಕೋರ್ಸ್ ಮಾಡಬಹುದು. ಇದಕ್ಕಾಗಿ ಪ್ರವೇಶ ಪರೀಕ್ಷೆ 21-27 ಏಪ್ರಿಲ್ 2025 ರಂದು ನಡೆಯಲಿದೆ. ಅರ್ಜಿ ಪ್ರಕ್ರಿಯೆಯು 2025 ರ 31 ಮಾರ್ಚ್‌ವರೆಗೆ ಮುಂದುವರಿಯುತ್ತದೆ.
(5 / 11)
ಡಬ್ಲ್ಯುಬಿಜೆಇಇ -2025: ಪಶ್ಚಿಮ ಬಂಗಾಳದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಡಬ್ಲ್ಯುಬಿಜೆಇಇ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದು ರಾಜ್ಯದ ವಿಶ್ವವಿದ್ಯಾಲಯ, ಕಾಲೇಜು ಮತ್ತು ಸ್ವಯಂ -ಹಣಕಾಸು ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಫಾರ್ಮಾ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳಲ್ಲಿ ಪ್ರವೇಶವನ್ನು ಒದಗಿಸುತ್ತದೆ. ಪಶ್ಚಿಮ ಬಂಗಾಳ ಜಂಟಿ ಪ್ರವೇಶ ಪರೀಕ್ಷಾ ಮಂಡಳಿ (ಡಬ್ಲ್ಯುಬಿಜೆಇಬಿ) ಇದನ್ನು ನಡೆಸುತ್ತದೆ. ಫೆಬ್ರವರಿ 23 ರೊಳಗೆ ನೀವು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 27 ರಂದು ಪರೀಕ್ಷೆ ನಡೆಯಲಿದೆ.
(6 / 11)
ಎಸ್‌ಆರ್‌ಎಂಜೆಇಇಇ 2025: ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ನಡೆಸುವ ಎಸ್‌ಆರ್‌ಎಂಜೆಇಇಇ 2025 ಬರೆದರೆ ಅದರ ಫಲಿತಾಂಶದ ಆಧಾರದ ಮೇಲೆ ಆ ಕಾಲೇಜಿನಲ್ಲಿ ಬಿಟೆಕ್ ಪ್ರವೇಶ ಪಡೆಯಬಹುದು. 2025ರ ಏಪ್ರಿಲ್ 16ರ ಒಳಗೆ ಅರ್ಜಿ ಸಲ್ಲಿಸಬೇಕು. ಹಂತ 1 ರ ಪರೀಕ್ಷೆ ಏಪ್ರಿಲ್ 22 ರಿಂದ 25ರ ತನಕ ಹಂತ 2 ರ ಪರೀಕ್ಷೆ ಜೂನ್ 12 ರಿಂದ 17ರ ತನಕ, ಹಂತ 3ರ ಪರೀಕ್ಷೆ ಜುಲೈ 4 ಮತ್ತು 5 ರಂದು ನಡೆಯಲಿದೆ. ಹಂತ 2 ಮತ್ತು 3ಕ್ಕೆ ಅರ್ಜಿ ಸಲ್ಲಿಸಲು ಜೂನ್ 6 ಮತ್ತು ಜೂನ್ 30 ಕೊನೇ ದಿನ. )
(7 / 11)
ಕಾಮೆಡ್ ಕೆ ಯುಜಿಇಟಿ 2025: ಕರ್ನಾಟಕದ ಖಾಸಗಿ ಕಾಲೇಜುಗಳ ಸಂಘ ಕಾಮೆಡ್ ಕೆ ಈ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಇದು ಕರ್ನಾಟಕದ ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಒದಗಿಸುತ್ತದೆ. ಇದಕ್ಕೆ ಅರ್ಜಿ ಸಲ್ಲಿಕೆ ಶುರುವಾಗಿದ್ದು ಮಾರ್ಚ್ 15ರ ಒಳಗೆ ಅರ್ಜಿ ಸಲ್ಲಿಸಬೇಕು. ಮೇ 10 ರಂದು 2025ರ ಕಾಮೆಡ್ ಕೆ ಯುಜಿಇಟಿ ನಡೆಯಲಿದೆ.
(8 / 11)
ಎಂಇಟಿ 2025: ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ನಡೆಸುವ ಮಹಾರಾಷ್ಟ್ರ ಎಂಟ್ರೆನ್ಸ್ ಟೆಸ್ಟ್ (ಎಂಇಟಿ) ಮೂಲಕ ಪುಣೆಯ ಈ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು. ಇದು ಖಾಸಗಿ ಎಂಜಿನಿಯರಿಂಗ್ ಕಾಲೇಜಾಗಿದ್ದು, ಅಲ್ಲಿ ನೀವು ಮಹಾರಾಷ್ಟ್ರ ಸಾಮಾನ್ಯ ಪ್ರವೇಶ ಪರೀಕ್ಷೆಯ (ಎಂಎಚ್‌ಟಿ ಸಿಇಟಿ) ಮೂಲಕ ಬಿಟೆಕ್‌ನಲ್ಲಿ ಪ್ರವೇಶ ಪಡೆಯುತ್ತೀರಿ. ಕೆಲವು ಕೋಟಾ ಅಡಿಯಲ್ಲಿ ನೇರ ಪ್ರವೇಶವೂ ಇದೆ. ಇಲ್ಲಿ ವಾರ್ಷಿಕ ಶುಲ್ 3 ರಿಂದ 5 ಲಕ್ಷ ರೂಪಾಯಿ ಇದೆ.
(9 / 11)
ಮಹಾರಾಷ್ಟ್ರ ಸಿಇಟಿ 2025: ಮಹಾರಾಷ್ಟ್ರದ ವಿವಿಧ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಇದು ರಾಜ್ಯ ಮಟ್ಟದ ಪರೀಕ್ಷೆಯಾಗಿದೆ, ಎಂಜಿನಿಯರಿಂಗ್, ಫಾರ್ಮಸಿ, ಕೃಷಿ, ಬಿಪಿಇಡಿ, ಬಿ.ಎಡ್, ಎಂ.ಎಡ್, ಎಂ.ಪಿ.ಎಡ್, ನಾಲ್ಕು -ವರ್ಷದ ಬಿಎ /ಬಿಎಸ್ಸಿ ಬಿ.ಡಿ.ಇಡ್ ಇಂಟಿಗ್ರೇಟೆಡ್, ಎಂ.ಎಡ್. ಎಲ್ಎಲ್‌ಬಿ. ಅರ್ಜಿಗಳನ್ನು ಫೆಬ್ರವರಿ 15 ರೊಳಗೆ ಸಲ್ಲಿಸಬೇಕು. ಏಪ್ರಿಲ್ 9 ರಿಂದ ಪರೀಕ್ಷೆ ನಡೆಯಲಿದೆ.
(10 / 11)
ಸಿಯುಟಿ ಯುಜಿ 2025: ಕೆಲವು ವಿಶ್ವವಿದ್ಯಾಲಯಗಳು ಬಿ.ಟೆಕ್ ಪ್ರವೇಶಕ್ಕಾಗಿ ಸಿಯುಇಟಿ 2025 ರ ಫಲಿತಾಂಶವನ್ನು ಪರಿಗಣಿಸುತ್ತವೆ. ಕೇಂದ್ರ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಿಯುಇಟಿ ಪರೀಕ್ಷೆಯ ಫಲಿತಾಂಶವೇ ಪ್ರವೇಶಕ್ಕೆ ಮಾನದಂಡವಾಗಿರುತ್ತದೆ. ಬಿಎಚ್‌ಯೂ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಹರಿಯಾಣ, ಹೇಮಾವತಿ ನಂದನ್ ಬಹುಗುಣ ಗಡವಾಲ್ ವಿವಿ, ಮಹಾತ್ಮಾ ಗಾಂಧಿ ಕೇಂದ್ರೀಯ ವಿವಿ, ದೇವಿ ಅಹಿಲ್ಯಾ ವಿವಿ, ಮದನ್‌ಮೋಹನ್ ಮಾಲವೀಯ ತಂತ್ರಜ್ಞಾನ ವಿವಿ, ಶ್ರೀ ಮಾತಾ ವೈಷ್ಣೋದೇವಿ ವಿವಿ, ಛತ್ರಪತಿ ಶಿವಾಜಿ ಮಹಾರಾಜ ವಿವಿ ಮುಂತಾದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಸಿಯುಇಟಿ ಪರೀಕ್ಷೆ ಫಲಿತಾಂಶ ಮುಖ್ಯವಾಗುತ್ತದೆ.
ಇತರ ಗ್ಯಾಲರಿಗಳು