Beard Care: ಗಡ್ಡ ಸರಿಯಾಗಿ ಬೆಳೆಯುತ್ತಿಲ್ಲ ಎಂಬ ಚಿಂತೆ ಬಿಡಿ; ಈ ಮನೆಮದ್ದು ಟ್ರೈ ಮಾಡಿ ನೋಡಿ
- ಪುರುಷರಿಗೆ ಗಡ್ಡ ಆಕರ್ಷಕವಾಗಿ ಕಾಣುತ್ತದೆ. ಕೆಲವೊಬ್ಬರಿಗೆ ಬೇಗನೆ ಗಡ್ಡ ಬೆಳೆಯುವಿದಿಲ್ಲ. ಇನೂ ಕೆಲವು ಸಮಯದಲ್ಲಿ ಅಲ್ಲಲಿ ಗಡ್ಡದ ಕೂದಲು ಕಡಿಮೆ ಇರುತ್ತದೆ. ದೈಹಿಕವಾಗಿ ಪ್ರಬುದ್ಧರಾದರೂ ಗಡ್ಡದ ಬೆಳವಣಿಗೆ ಸರಿಯಾಗಿ ಆಗದಿದ್ದರೆ, ಯುವಕರಿಗೆ ಅದುವೇ ಚಿಂತೆ. ನಿಮಗೂ ಈ ಸಮಸ್ಯೆ ಇದ್ದರೆ, ಈ ಮನೆಮದ್ದುಗಳು ನಿಮಗೆ ನೆರವಾಗಬಹುದು.

(1 / 7)
ಈಗೀಗ ಕ್ಲೀನ್‌ಶೇವ್ ಇಷ್ಟಪಡುವವರ ಸಂಖ್ಯೆ ತೀರಾ ಕಡಿಮೆ. ಉದ್ದನೆಯ ಗಡ್ಡವೇ ಟ್ರೆಂಡ್. ಪುರುಷರು ಮಾತ್ರವಲ್ಲದೆ ಮಹಿಳೆಯರಿಗೂ ಉದ್ದನೆಯ ಗಡ್ಡ ಇರುವ ಪುರುಷರೇ ಇಷ್ಟವಾಗುತ್ತಾರೆ. ಕೆಲವು ಯುವಕರು ಗಡ್ಡ ವೇಗವಾಗಿ ಬೆಳೆಯುವುದಿಲ್ಲ ಎಂಬ ಚಿಂತೆಯಲ್ಲಿರುತ್ತಾರೆ. ಅವರು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.(Unsplash)
(2 / 7)
ನೀಲಗಿರಿ ಎಣ್ಣೆ: ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಚರ್ಮದ ಸೋಂಕನ್ನು ಹೋಗಲಾಡಿಸಿ, ಕೂದಲಿನ ಬೆಳವಣಿಗೆ ಹೆಚ್ಚಿಸುತ್ತದೆ.(Freepik)
(3 / 7)
ಕರಿಬೇವಿನ ಎಲೆ: ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ. ಅದು ತಣ್ಣಗಾದ ನಂತರ ಚರ್ಮದ ಮೇಲೆ ಹಚ್ಚಬೇಕು. ಇದನ್ನು ನಿಯಮಿತವಾಗಿ ಹಚ್ಚುವುದರಿಂದ ಗಡ್ಡದ ಬೆಳವಣಿಗೆ ಹೆಚ್ಚಾಗುತ್ತದೆ.(unsplash)
(4 / 7)
ವಿಟಮಿನ್: ವಿಟಮಿನ್ ಬಿ 12 ಮತ್ತು ವಿಟಮಿನ್ ಬಿ 6 ಕೂದಲಿನ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿವೆ. ಈ ವಿಟಮಿನ್‌ಗಳಿರುವ ಆಹಾರವನ್ನು ಸೇವಿಸಿ.(freepik)
(5 / 7)
ನೆಲ್ಲಿಕಾಯಿ: ನೆಲ್ಲಿಕಾಯಿ ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿ. ಆಮ್ಲಾ ಎಣ್ಣೆ ಹಚ್ಚುವುದರಿಂದ ಗಡ್ಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ.(unsplash)
(6 / 7)
ಸಮತೋಲಿತ ಆಹಾರ: ಪ್ರೋಟೀನ್ ಭರಿತ ಆಹಾರವು ಕೂದಲಿನ ಬೆಳವಣಿಗೆಗೆ ಉಪಯುಕ್ತ. ಹೀಗಾಗಿ ಕೂದಲಿನ ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನು ಸೇವಿಸಿ.(unsplash)
ಇತರ ಗ್ಯಾಲರಿಗಳು